Publish Date: Wed, 27 Jun 2007 (15:04 IST)
Updated Date: Wed, 27 Jun 2007 (15:04 IST)
ಹಿರಿಯ ತಮಿಳು ಚಿತ್ರನಿರ್ದೇಶಕ, ನೃತ್ಯನಿರ್ದೇಶಕ, ನಿರ್ದೇಶಕ ಜೀವಾ ರಷಿಯಾದಲ್ಲಿ ನಿಧನರಾದರು.
ಕಂಗನಾ ರಾಣಾವತ್ ಅಭಿನಯದ ಧೂಮ್ ಧಾಮ್ ಚಿತ್ರದ ಚಿತ್ರಿಕರಣ ನಡೆಯುತ್ತಿರುವ ಸಮಯದಲ್ಲಿ ಜೀವಾ ಹೃದಯಾಘಾತಕ್ಕೆ ಒಳಗಾಗಿ ಅಸುನಿಗಿದ್ದು, ಅಂತ್ಯಕ್ರಿಯೆಗಾಗಿ ಸ್ವದೇಶಕ್ಕೆ ಅವರ ಪಾರ್ಥಿವ ಶರಿರವನ್ನು ತರಲಾಗುತ್ತಿದೆ.
ಅಭಿಷೇಕ ಬಚ್ಚನ್ ಮತ್ತು ಭೂಮಿಕಾ ಚಾವ್ಲಾ ಅಭಿನಯದ ರನ್ ಚಿತ್ರವನ್ನು ಜೀವಾ ನಿರ್ದೇಶಿಸಿದ್ದರು.ತಮ್ಮನ್ನು ಕೇವಲ ಕಾಲಿವುಡ್‌ಗೆ ಸಿಮಿತಗೊಳಿಸದೆ ಬಾಲಿವುಡ್ ಚಿತ್ರಗಳಿಗೂ ಕೋರಿಯೊಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದರು.
ಪ್ರಿಯದರ್ಶನ್‌ರೊಂದಿಗೆ ಉತ್ತಮ ಸ್ನೆಹ ಹೊಂದಿದ್ದ ಜೀವಾ ಅವರ ಅಕ್ಷಯ ಕುಮಾರ್ ಅಭಿನಯದ ಭಾಗಮ್ ಭಾಗ್, ಹಲಚಲ್ ಮತ್ತು ಪರೇಶ ರಾವಲ್, ಸುನಿಲ್ ಶೆಟ್ಟಿ, ಅಕ್ಷಯಕುಮಾರ್ ನಟಿಸಿದ ಹೇರಾಪೇರಿ ಚಿತ್ರಗಳಿಗೆ ಕೊರಿಯಾಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದಾರೆ.