Publish Date: Mon, 22 Sep 2008 (17:38 IST)
Updated Date: Mon, 22 Sep 2008 (17:38 IST)
ಪ್ರೇಮದಾಳದಲ್ಲಿ ಮುಳುಗಿರುವ ಬಾಲಿವುಡ್ ಜೋಡಿ ರಣ್‌ಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ವಿವಾಹ ಬಂಧನದಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿಯನ್ನು ಆಧಿಕೃತಗೊಳಿಸದಿದ್ದರೂ, ತಳ್ಳಿಹಾಕುವ ಮನಸ್ಸು ಇಬ್ಬರಿಗೂ ಇದ್ದಂತಿಲ್ಲ. ಈ ಜೋಡಿ 'ಎಲ್-ಅಫಿಶಿಯಲ್' ಮ್ಯಾಗಜಿನ್ ಅನ್ನು ತಮ್ಮ ಫೋಸುಗಳಿಂದ ಕಳೆಗಟ್ಟಿಸಿದೆ.
ಬಚನಾ ಎ ಹಸೀನೋದಲ್ಲಿ ಮಿನುಗಿದ ರಣ್‌ಬೀರ್ ಮತ್ತು ದೀಪಿಕಾ ಪ್ರಥಮ ಬಾರಿಗೆ ಮುಖಪುಟವೊಂದಕ್ಕಾಗಿ ತಮ್ಮ ಪ್ರಖರ ಫೋಸುಗಳನ್ನು ನೀಡಿದ್ದಾರೆ. ಅಂದರೆ ಕೊನೆಗೂ ಪ್ರೇಮಪ್ರಕರಣ ಕೊನೆಗೊಂಡಿದೆ ? ಖಂಡಿತವಾಗಿಯೂ ಈ ಇಬ್ಬರು ಅಗಲದ ಜೋಡಿಯಾಗಿರುವಂತೆ ಕಂಡುಬರುತ್ತಿದೆ.
ಆದರೆ ನಾವು ಈ ವಿಷಯ ಆಧಿಕೃತವಾಗಿ ಹೊರಬೀಳುವವರೆಗೂ ಕಾಯಬೇಕಾಗುತ್ತದೆ. ಅಲ್ಲಿಯವರೆಗೆ ನೀವು ನಿಮ್ಮ ಕಣ್ಣುಗಳಿಗೆ 'ಎಲ್-ಅಫಿಶಿಯಲ್'ನಲ್ಲಿರುವ ಚಿತ್ರಗಳ ರಸದೌತಣ ನೀಡಿ. ನಾವು ಸುದ್ದಿ ಆಧಿಕೃತಗೊಂಡ ಬಗ್ಗೆ ಬಿ-ಟೌನ್‌ನಿಂದ ಹೊರಬೀಳುವ ಗಾಸಿಪ್‌ಗಳಿಗೆ ಕಿವಿಗೊಡುತ್ತಿರುತ್ತೇವೆ.