Publish Date: Tue, 05 Aug 2008 (17:39 IST)Updated Date: Tue, 05 Aug 2008 (17:38 IST)
IFM
"ಬಚನಾ ಎ ಹಸೀನೋ"ದಲ್ಲಿ ರಣ್‌ಬೀರ್ ಕಪೂರ್ ಮೂರು ಹುಡುಗಿಯರ ಹೃದಯ ಆಳಿದರೂ, ನಿಜ ಜೀವನದಲ್ಲಿ ಅವನ ಹೃದಯದಲ್ಲಿ ವಿಶಿಷ್ಟ ಜಾಗ ಹೊಂದಿರುವುದು ಒಬ್ಬಳೇ ಹುಡುಗಿ ಮತ್ತು ಅದು ದೀಪಿಕಾ ಪಡುಕೋಣೆ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು!
ಅದು ಯಾರೆಂಬ ರಹಸ್ಯವನ್ನು ಊಹಿಸುತ್ತೀರಾ ? ನೀವು ದೂರಹೋಗಬೇಕೆಂದಿಲ್ಲ, ಅದು ರಣ್‌ಬೀರ್ ತನ್ನ ಮೊದಲ ಚಿತ್ರದಲ್ಲಿ ಪ್ರೀತಿಸಿದ್ದ ಹುಡುಗಿ, ಸೋನಮ್ ಕಪೂರ್. ಇತ್ತೀಚಿಗೆ ಇವರಿಬ್ಬರು ಬೇರೆಯಾಗಿದ್ದಾರೆ, ಮಾತು ಕೂಡ ಆಡುವುದಿಲ್ಲ ಎಂದು ಸುದ್ದಿ ಹಬ್ಬಿತ್ತು.
ಮೂಲಗಳ ಪ್ರಕಾರ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಜೀವಂತವಾಗಿದೆ ಮತ್ತು ಅವರಿಬ್ಬರು ಈಗಲೂ ಭೇಟಿಯಾಗುತ್ತಾರೆ. ಆದರೆ ಅವರು ಹಿಂದಿನಷ್ಟು ಸಾಮೀಪ್ಯ ಹೊಂದಿಲ್ಲವಾದರೂ, ಇದರ ಹಿಂದೆ ದೀಪಿಕಾ ಕೈವಾಡವೇನು ಇಲ್ಲವಂತೆ.
ವಿಷಯವೇನೆಂದರೆ ಸಾವರಿಯಾ ನಂತರ ಇಬ್ಬರೂ ತಮ್ಮತಮ್ಮ ಕೆರಿಯರ್‌ಗಳಲ್ಲಿ ಬ್ಯೂಸಿಯಾಗಿದ್ದಾರೆ, ಅದ್ದರಿಂದಲೇ ಅವರಿಗೆ ಜೊತೆಯಾಗಿ ಕಳೆಯಲು ಸಮಯ ಸಿಗುತ್ತಿಲ್ಲ.
IFM
ಈಗಲೂ ನಿಮಗೆ ನಂಬಿಕೆ ಬಂದಿಲ್ಲವೆಂದಾದರೆ ಇಲ್ಲಿ ಕೇಳಿ. "ಸೋನಮ್‌ಗೆ ನನ್ನ ಜೀವನದಲ್ಲಿ ಯಾವಾಗಲೂ ವಿಶೇಷ ಸ್ಥಾನವಿದೆ. ಅವಳ ಮೇಲೆ ಎಷ್ಟು ಪ್ರೀತಿಯಿದೆ ಎಂದು ನನ್ನಿಂದ ಹೇಳುವುದಕ್ಕೇ ಸಾಧ್ಯವಿಲ್ಲ. ನಾನು ನನ್ನ ನಟನೆಯ ಆರಂಭಿಕ ದಿನಗಳನ್ನು ಅವಳೊಂದಿಗೆ ಕಳೆದಿದ್ದೇನೆ. ನಾವು ನಮ್ಮ ಭಯ, ದುಃಖ ಮತ್ತು ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದೇವೆ. ನಮ್ಮಿಬ್ಬರ ನಡುವೆ ಎಂದಿಗೂ ಯಾವುದೇ ಭಿನ್ನಾಬಿಪ್ರಾಯ ಬರುವುದಿಲ್ಲ. ಹಿಂದೆ ನಾವು ಪ್ರತಿದಿನವು ಜೊತೆಯಾಗಿರುತ್ತಿದ್ದೆವು, ಈಗ ನಾವು ಬೇರೆ ಬೇರೆ ಚಿತ್ರಗಳನ್ನು ಮಾಡುತ್ತಿದ್ದೇವೆ"
ಇದು ನಾವು ಹೇಳುತ್ತಿರುವುದಲ್ಲ, ದಿನಪತ್ರಿಕೆಯೊಂದಕ್ಕೆ ಸಂದರ್ಶನ ನೀಡುತ್ತಿದ್ದಾಗ ಸ್ವತಃ ರಣ್‌ಬೀರ್ ಕಪೂರ್‌ರ ಬಾಯಿಯಿಂದ ಉದುರಿದ ಅಣಿಮುತ್ತುಗಳಿವು.