Publish Date: Tue, 04 Dec 2007 (13:03 IST)
Updated Date: Tue, 04 Dec 2007 (13:02 IST)
ಕೆಲವು ಸಮಯಗಳ ಹಿಂದೆ ಸಿದ್ದಾರ್ಥ್ ರಾಜ್ ನಿರ್ದೇಶಿಸುತ್ತಿರುವ ಯಶ್‌ರಾಜ್ ಅವರ ನೂತನ ಚಿತ್ರದಲ್ಲಿ ಅಮೃತಾ ರಾವ್ ಮುಖ್ಯ ಪಾತ್ರದಲ್ಲಿ ಪರಿಗಣಿಸಲ್ಪಟ್ಟಿದ್ದರು. ಚಿತ್ರದಲ್ಲಿ ರಣಬೀರ್‌ನೊಂದಿಗೆ ಭಾವೋದ್ರಿಕ್ತ ಕಿಸ್ ನೀಡಲು ಅಮೃತಾ ನಿರಾಕರಿಸಿದ್ದರು, ಅದಕ್ಕಾಗಿ ಅವರು ಚಿತ್ರದಿಂದ ಹೊರಹೋಗಲು ನಿರ್ಧರಿಸಿದ್ದರು ಎಂಬುದಾಗಿ ಮಾಧ್ಯಮಗಳು ವರದಿ ಮಾಡಿದ್ದವು.
ಈ ಎಲ್ಲಾ ವಿವಾದಗಳ ಬಗ್ಗೆ ಸ್ಪಷ್ಟಪಡಿಸಲು ನಿರ್ಧರಿಸಿರುವ ಅಮೃತಾ, ಈ ಕಿಸ್ ವಿವಾದವು ಹೇಗೆ ಹುಟ್ಟಿತು ಎಂಬುದೇ ನನಗೆ ತಿಳಿದಿಲ್ಲ ಎಂಬುದಾಗಿ ಮಾಧ್ಯಮಗಳು ಪ್ರಟಿಸಿದ ಈ ಗಾಳಿಸುದ್ದಿಯನ್ನು ಅಲ್ಲಗಳೆದಿದ್ದಾರೆ.
ಆದಿತ್ಯ ಛೋಪ್ರಾ ನನ್ನ ಉದ್ದೇಶವನ್ನು ಅರ್ಥೈಸಿಕೊಂಡಿದ್ದಲ್ಲದೆ, ಮುಂದೆ ನಾವಿಬ್ಬರು ಮತ್ತೆ ಒಟ್ಟಿಗೆ ಕೆಲಸಮಾಡುವ ಭರವಸೆಯನ್ನು ನೀಡಿದ್ದಾರೆ. ತನ್ನ ತಿರಸ್ಕರಣೆಯನ್ನು ಛೋಪ್ರಾ ಅವರು ಮುಕ್ತವಾಗಿ ಸ್ವೀಕರಿಸಿದ್ದಾರೆ ಯಾವುದೇ ಭಿನ್ನಾಭಿಪ್ರಾವಿಲ್ಲ ಎಂದು ಅಮೃತಾ ಹೇಳಿದ್ದಾರೆ
2007ರಲ್ಲಿ ಯಾವುದೇ ತನ್ನ ಯಾವುದೇ ಹಿಂದಿ ಚಿತ್ರ ಬಿಡುಗಡೆಗೊಂಡಿಲ್ಲದಿದ್ದರೂ, 2008ರಲ್ಲಿ ಅಮೃತಾರ ನಾಲ್ಕು ಚಿತ್ರಗಳು ಬಿಡುಗಡೆಯಾಗಲಿವೆ.