ರಣಬೀರ್ ಮಾಡಿದ ಪ್ರಪೋಸ್ ಒಪ್ಪದ ಕತ್ರಿನ..ಯಾಕೆ ಹಾಗೆ ಮಾಡಿದ್ದು ಕತ್ರಿನಾ ?
, ಗುರುವಾರ, 2 ಜನವರಿ 2014 (12:32 IST)
ಬಾಲಿವುಡ್ ಹಾಟ್ ಪರ್ ಯಾರು ಅಂದ್ರೆ ಎಲ್ಲರು ಹೇಳುವುದು ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಎಂದು.. ಅದು ಸರಿನೆ ಬಿಡಿ ಅವರು ಮೀಡಿಯಾ ಅಟ್ರಾಕ್ಷನ್ ಪೇರ್. ಎಲ್ಲಿ ನೋಡಿದರು, ಯಾವಾಗ ನೋಡಿದರೂ ಅವರದ್ದೇ ಸುದ್ದಿ. ಸ್ಪೆಯಿನ್ ದೇಶದಲ್ಲಿ ಅರ ಬೆತ್ತಲೆಯಾಗಿ ಸಿಕ್ಕ ಈ ಜೋಡಿ, ಚಿತ್ರಮಂದಿರದಲ್ಲಿ ಒಟ್ಟಾಗಿ ಸಿಕ್ಕಿಬಿದ್ದಿದ್ದರು ಮಾಧ್ಯಮದ ಕ್ಯಾಮರಾ ಕಣ್ಣಿಗೆ.ಆದರೆ ಇವರಿಬ್ಬರ ನಡುವೆ ಪ್ರೀತಿ ಇದೆಯಾ ಇಲ್ಲವೆ ಪ್ರಣಯ ಮಾತ್ರ ಇರೋದಾ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿದೆ. ಎಲ್ಲರಿಗೂ ಸಮಾಧಾನ ಆಗದೆ ಇದ್ದರು ಅಂತಿಮವಾಗಿ ಕತ್ರಿನಾ ತನ್ನ ಮನಸ್ಸು ಬಿಚ್ಚಿ ಹೇಳಿದ್ದಾಳೆ ರಣಬೀರ್ ಮತ್ತು ತನ್ನ ಬಾಂಧವ್ಯದ ಬಗ್ಗೆ.
ಈಕೆಯನ್ನು ರಣಬೀರ್ ಮಾಡುವೆ ಆಗೋಣ ಚೆಲುವೆ ಅಂತ ಪ್ರಪೋಸ್ ಮಾಡಿದ್ದರಂತೆ , ಆದರೆ ಈಕೆ ಇನ್ನು ಇದರ ಬಗ್ಗೆ ಹಕಾರ, ನಕಾರ ನೀಡಿಲ್ಲವಂತೆ .ಕತ್ರಿನಾ ತನ್ನ ಸಿನಿಮಾ ಕೆರಿಯರ್ ಬಗ್ಗೆ ಹೆಚ್ಚಿನ ಗಮನ ನೀಡಿದ್ದು, ಆಕೆ ಈ ಮಾಡುವೆ ಪ್ರಪೋಸಲ್ ಪಕ್ಕಕ್ಕೆ ಇಟ್ಟಿದ್ದಾಳಂತೆ.ಕೇವಲ ನಾವು ಸ್ನೇಹಿತರು ಮಾತ್ರ ಎಂದು ಹೇಳುತ್ತಾ ರೋಮ್ಯಾನ್ಸ್ ಮಾಡುತ್ತಿರುವ ಈ ಜೋಡಿ ಬಗ್ಗೆ ಬಾಲಿವುಡ್ ಮಂದಿ ಆಡಿಕೊಳ್ಳುವ ಕೆಲಸದಲ್ಲಿ ನಿರತ. ಅವರು ಟೀಸ್ ಮಾಡಿದ್ರು ಅಂತ ಇವರು ಸುಮ್ಮನೆ ಇರೋಕೆ ಆಗಲ್ಲ ಅಲ್ವ..!