ರಣಬೀರ್ ಮತ್ತು ಕತ್ರಿನಾರನ್ನು ಒಂದು ಮಾಡಲು ಹೊರಟಿರುವ ಆ ಹೆಣ್ಣು ಯಾರೆಂದರೆ!
, ಬುಧವಾರ, 5 ಫೆಬ್ರವರಿ 2014 (09:58 IST)
ಕಳೆದ ಮೂರು ವರ್ಷಗಳಿಂದ ಜೋಡಿಯಾಗಿ ಹಕ್ಕಿಗಳಾಗಿ ಹಾರಾಡಿಕೊಂಡಿದ್ದ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಇಬ್ಬರು ಈಗ ಯಾಕೋ ಮುನಿಸಿಕೊಂಡಿದ್ದಾರೆ. ಆದರೆ ಅದು ಕೇವಲ ಮುನಿಸು ಮಾತ್ರ ಬೇರ್ಪಡೆ ಅಲ್ಲ ಅನ್ನುವ ಮಾತನ್ನು ಹೇಳಿದ್ದಾರೆ ಸಂಬಂಧ ಪಟ್ಟವರು. ಕಳೆದ ನಾಲ್ಕು ವರ್ಷಗಳಿಂದ ಅವರು ಒಟ್ಟಿಗಿದ್ದು ಸಣ್ಣ ಕಾರಣಕ್ಕೆ ಬೇರೆ ಆಗುವಂತಹ ಪರಿಸ್ಥಿತಿ ಪಡೆದಿಲ್ಲ.ಅವರು ಸಿಟ್ಟಾಗಿದ್ದಾರೆ ಎಂದ ಮಾತ್ರಕ್ಕೆ ಅವರಿಬ್ಬರೂ ಬಿಟ್ಟೆ ಬಿಟ್ಟಿದ್ದಾರೆ ಎನ್ನುವುದು ಸುಳ್ಳು ಎನ್ನುತ್ತಿದ್ದಾರೆ ಸಂಬಂಧ ಪಟ್ಟವರು. ಇತ್ತೀಚೆಗೆ ಅಮೀರ್ ಖಾನ್ ಅವರು ಧೂಮ್ 3 ಸಿನಿಮಾದ ಯಶಸ್ಸಿಗೆ ಸಂಬಂಧಪಟ್ಟಂತೆ ಮಾಡಿದ್ದ ಪಾರ್ಟಿಯಲ್ಲಿ ಈ ಜೋಡಿ ಬೇರೆ ಬೇರೆ ಯಾಗಿ ಬಂದಿದ್ದರು. ಈ ಬಾಂಧವ್ಯವು ಡ್ಯಾಮೇಜ್ ಆಗದೆ ಇರುವಂತೆ ಅಮೀರ್ ಪತ್ನಿ ಕಿರಣ್ ರಾವ್ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಅಮೀರ್ ಖಾನ್ ಸಹ ಸಹಾಯಕರಾಗಿದ್ದಾರೆ. ಯಾವ ಕಾರಣಕ್ಕೂ ಈ ಜೋಡಿಯಲ್ಲಿ ಬಿರುಕು ಬಾರದಂತೆ ಮಾಡಿದ್ದಾರೆ ಕಿರಣ್ ರಾವ್.ಒಟ್ಟಾರೆ ಈ ಜೋಡಿಯ ಮುನಿಸನ್ನು ದೂರ ಮಾಡಲು ಅಮೀರ್ ದಂಪತಿಗಳು ಸಿದ್ಧವಾಗಿದ್ದಾರೆ. ಅವರ ಪ್ರಯತ್ನ ಯಶಸ್ವಿ ಆಗಲಿ. ಈ ಜೋಡಿ ಮತ್ತೆ ಒಂದಾಗಲಿ ಎನ್ನುವ ಹಾರೈಕೆ ನಮ್ಮದು.