Article Bollywood Gossips %e0%b2%b0%e0%b2%a3%e0%b2%ac%e0%b3%80%e0%b2%b0%e0%b3%8d %e0%b2%95%e0%b2%aa%e0%b3%82%e0%b2%b0%e0%b3%8d %e0%b2%b8%e0%b2%82%e0%b2%ad%e0%b2%be%e0%b2%b5%e0%b2%a8%e0%b3%86 15 %e0%b2%95%e0%b3%8b%e0%b2%9f%e0%b2%bf %e0%b2%85%e0%b2%82%e0%b2%a4%e0%b3%86 113080900003_1.htm

Daily Horoscope

Select Your Language

Notifications

webdunia
webdunia
webdunia
webdunia

ರಣಬೀರ್ ಕಪೂರ್ ಸಂಭಾವನೆ 15 ಕೋಟಿ ಅಂತೆ!

ರಣಬೀರ್ ಕಪೂರ್
PR
ರಣಬೀರ್ ಕಪೂರ್ ಅಭಿನಯದ ಬರ್ಫಿ ಹಾಗೂ ಯೇ ಜವಾನಿ ಹೈ ದಿವಾನಿ ಚಿತ್ರಗಳು ಸೂಪರ್ ಹಿಟ್ ಆಗಿತ್ತು ಗೊತ್ತೇ ಇದೆ. ಅವೆರಡು ಚಿತ್ರಗಳ ಖ್ಯಾತಿಯಿಂದ ರಣಬೀರ್ ಈಗ ಬಾಲಿವುಡ್ನ ಸೂಪರ್ಸ್ಟಾರ್ ನಾಯಕರಲ್ಲೊಬ್ಬ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರಿಂದ ಸಹಜವಾಗಿಯೇ ಅವರ ಮಾರ್ಕೆಟ್ ರೇಟ್ ಹೆಚ್ಚಳವಾಗಿದೆ. ಅದೂ ಒಂದೆರಡು ಕೋಟಿಗಳಲ್ಲ, ಹಿಂದಿನ ಚಿತ್ರಕ್ಕಿಂತ ಅವರು ದುಪ್ಪಟ್ಟು ಹೆಚ್ಚು ಹಣ ಪಡೆಯುತ್ತಿದ್ದಾರೆ. ಮುಂದಿನ ಚಿತ್ರಕ್ಕೆ ಅವರು ಪಡೆಯುತ್ತಿರುವ ಹಣ ಬರೋಬ್ಬರಿ 15 ಕೋಟಿ.

ವಿಕ್ಕಿ ಸಿಂಗ್ ಅವರ ರಾಯ್ ಚಿತ್ರದಲ್ಲಿ ರಣಬೀರ್ ಗೆಸ್ಟ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಭಿನವ್ ಕಶ್ಯಪ್ ಅವರ ಬೇಶರಮ್ ಚಿತ್ರದಲ್ಲಿ ನಾಯಕನ ಪಟ್ಟ. ಇವೆರಡೂ ಚಿತ್ರಗಳಿಗೆ ಅವರು ಪಡೆಯುತ್ತಿರುವ ಸಂಭಾವನೆ 15 ಕೋಟಿ! ಸಂಜಯ್ ಲೀಲಾ ಬನ್ಸಾಲಿ ಅವರ ಸಾವರಿಯಾ ಚಿತ್ರಮೂಲಕ ಚಿತ್ರರಂಗಕ್ಕೆ ಬಂದಿದ್ದ ರಣಬೀರ್ ಕಪೂರ್ ರಾಕ್ಸ್ಟಾರ್, ಬಚ್ನಾ ಯೇ ಹಸೀನೋ ರೀತಿಯ ಸೂಪರ್ ಹಿಟ್ ಚಿತ್ರ ನೀಡಿದ್ದರೂ ಅವರು ಎಂದೂ ಸೂಪರ್ಸ್ಟಾರ್ ನಟ ಎಂದು ಪರಿಗಣಿತವಾಗಿರಲಿಲ್ಲ. ಹೀಗಾಗಿ ಅವರ ಸಂಭಾವನೆ ಕೋಟಿಯ ಗಡಿ ದಾಟಿರಲಿಲ್ಲ. ಬರ್ಫಿ ಹಾಗೂ ಯೇ ಜವಾನಿ ಹೈ ದಿವಾನಿ ಚಿತ್ರದ ಅವರ ನಟನೆ ವಿಶ್ವದಾದ್ಯಂತ ಹೆಸರು ಗಳಿಸಿತು. ಸಲ್ಮಾನ್ ಖಾನ್, ಅಮೀರ್ ಖಾನ್, ಶಾರೂಖ್, ಹೃತಿಕ್ ರೋಶನ್, ಅಕ್ಷಯ್ ಕುಮಾರ್ ಅಂತಹ ನಟರಿಗೇ ಸರಿಸಮಾನವಾಗಿ ಪಡೆಯುತ್ತಿರುವ ಈ ಮೊತ್ತ ಬಾಲಿವುಡ್ ಮಂದಿಯ ಕಣ್ಣರಳಿಸುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲವಂತೆ.

Share this Story:

Follow Webdunia kannada