Article Bollywood Gossips %e0%b2%b0%e0%b2%a3%e0%b2%a6%e0%b3%80%e0%b2%aa%e0%b3%8d %e0%b2%b9%e0%b3%82%e0%b2%a1 %e0%b2%85%e0%b2%b5%e0%b2%b0 %e0%b2%b8%e0%b2%bf%e0%b2%97%e0%b2%b0%e0%b3%87%e0%b2%9f%e0%b3%81 %e0%b2%aa%e0%b3%81%e0%b2%b0%e0%b2%be%e0%b2%a3 113071800011_1.htm

Daily Horoscope

Select Your Language

Notifications

webdunia
webdunia
webdunia
webdunia

ರಣದೀಪ್ ಹೂಡ ಅವರ ಸಿಗರೇಟು ಪುರಾಣ

ಬಾಲಿವುಡ್
PR
PR
ನಾಲ್ಕು ಗೋಡೆಗಳೊಳಗಿನ ಬೆಡ್ರೂಂ ಸೀನ್ಗಳಲ್ಲಿ ಸರಾಗವಾಗಿ ಅಭಿನಯಿಸಿ ಹೆಸರು ಮಾಡಿದವರು ಬಾಲಿವುಡ್ ನಟ ರಣದೀಪ್ ಹೂಡ. ಇದೀಗ ಅವರು ರಸ್ತೆಯಲ್ಲಿ ನಿಂತು ಸಿಗರೇಟು ಸೇದಿ ಸಿಕ್ಕಿಬಿದ್ದಿದ್ದಾರಂತೆ.

ಉದಯ್ಪುರದಲ್ಲಿ ನಡೆಯುತ್ತಿರುವ ಪೂಜಾ ಭಟ್ ಅವರ ಬ್ಯಾಡ್ ಚಿತ್ರೀಕರಣದ ವೇಳೆ ಅವರಿಗೆ ಧಮ್ ಎಳೆಯಬೇಕು ಎಂದು ಎನಿಸಿದೆ. ಅದರಂತೆ ಸಾರ್ವಜನಿಕ ರಸ್ತೆಯಲ್ಲಿ ಸಿಗರೇಟ್ ಸೇದಿದ್ದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.

ರಾಜಸ್ಥಾನ ಪ್ರೊಹಿಬಿಷನ್ ಆಫ್ ಸ್ಮೋಕರ್ಸ ಆಂಡ್ ನಾನ್ ಸ್ಮೋಕರ್ಸ ಹೆಲ್ತ್ ಪ್ರೊಟೆಕ್ಷನ್ ಆಕ್ಟ್ 1999ರ ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಸಿಗರೇಟು ಎಳೆಯುವುದು ನಿಷಿದ್ಧ. ಅದು ಶಿಕ್ಷಾರ್ಹ ಅಪರಾಧ ಕೂಡಾ. ಅದರ ಅರಿವಿಲ್ಲದ ರಣದೀಪ್ ಸಿಗರೇಟು ಸೇದಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಂದು ಭಾನುವಾದ್ದರಿಂದ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಈ ಘಟನೆ ಸಾರ್ವಜನಿಕರು ಗರಂ ಆಗಿ ಗದ್ದಲ ಎಬ್ಬಿಸಿದ್ದಂತೂ ನಿಜ.

Share this Story:

Follow Webdunia kannada