Article Bollywood Gossips %e0%b2%b0%e0%b2%9d%e0%b2%be%e0%b2%a8%e0%b2%be %e0%b2%9d%e0%b2%a3 %e0%b2%9d%e0%b2%a3 113062600017_1.htm

Select Your Language

Notifications

webdunia
webdunia
webdunia
webdunia

ರಝಾನಾ ಝಣ ಝಣ

ಧನುಷ್
PR
PR
ಧನುಷ್ ಅಭಿನಯದ ಮೊದಲ ಹಿಂದಿ ಚಿತ್ರ ರಝಾನಾಗೆ ಉತ್ತಮ ಆರಂಭ ಸಿಕ್ಕಿದೆ. ಈ ಚಿತ್ರದಲ್ಲಿ ಧನುಶ್ ನಟನೆಗೆ ಎಲ್ಲರೂ ನೂರಕ್ಕೆ ನೂರು ಅಂಕ ನೀಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ರೀತಿಯ ಚಿತ್ರಗಳಲ್ಲಿ ಅಭಿನಯಿಸಿದ ಅನುಭವವಿರುವ ಧನುಷ್ಗೆ ಬಾಲಿವುಡ್ನಲ್ಲೂ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಖುಷಿ ನೀಡಿದೆಯಂತೆ.

ಆನಂದ್ ರೈ ಚಿತ್ರದ ನಿರ್ದೇಶಕರು. ಇದೊಂದು ಪ್ರೇಮಕಥೆಯಾದರೂ ಅದರ ಹಿಂದೆ ನೋವಿದೆ. ಹದಿಹರೆಯದ ಪ್ರೇಮದ ಎಳೆಗಳನ್ನು ತೋರಿಸುತ್ತಲೇ ಪ್ರಬುದ್ಧತೆಯ ಕಡೆಗೆ ತಿರುಗುವ ಈ ಚಿತ್ರ ಅನೇಕರ ಇಷ್ಟಕ್ಕೆ ಕಾರಣವಾಗಿದೆಯಂತೆ.

ಲವರ್ ಬಾಯ್ ಆಗ ಧನುಷ್ ಪಾತ್ರವನ್ನು ಮೈಮೇಲೆ ಆಹ್ವಾನಿಸಿಕೊಂಡು ನಟಿಸಿದಂತಿದೆ. ಅವರೇ ಹೇಳಿಕೊಂಡಂತೆ ಭಾಷೆಯ ಸಮಸ್ಯೆ ಚಿತ್ರದಲ್ಲಿ ಭಾವನೆಗಳ ಅಭಿವ್ಯಕ್ತಿಗೆ ಅಡ್ಡಿಯಾಗಿಲ್ಲ. ಸೋನಮ್ ಕಪೂರ್ ಚಿತ್ರದಲ್ಲಿ ಮುದ್ದಾಗಿ ಕಾಣುತ್ತಾರೆ.

ಕುಂದನ್ (ಧನುಷ್)ಗೆ ಜೋಯಾ (ಸೋನಂ ಕಪೂರ್) ಕಂಡರೆ ಬಹಳ ಇಷ್ಟ. ಇಷ್ಟವಾದದ್ದನ್ನು ಮಾಡುವುದು ಕುಂದನ್ ಹಾಬಿ, ಹೆಚ್ಚಿನ ಓದಿಗೆ ವಾರಣಾಸಿ ಬಿಟ್ಟು ದೆಹಲಿಗೆ ತೆರಳುವ ಜೋಯಾಗೆ ಅಕ್ರಮ್ ಪರಿಚಯವಾಗುತ್ತಾನೆ. ಇದು ಮತ್ತೊಂದು ಪ್ರಣಯಕ್ಕೆ ನಾಂದಿಯಾಗುತ್ತದೆ.
ಇಲ್ಲಿ ಜೋಯಾ ನೆನಪಲ್ಲೇ ಕಾಯುವ ಕುಂದನ್ ಅವಳ ಕತೆ ಕೇಳಿ ನಿರಾಶನಾಗುತ್ತಾನೆ. ಭಗ್ನಪ್ರೇಮಿಯಾಗಿ ಮುಂದೇನು ಮಾಡುತ್ತಾನ ಎಂಬುದನ್ನು ತಿಳಿಯಲು ಚಿತ್ರವನ್ನು ವೀಕ್ಷಿಸಬೇಕು. ಕಥೆಯ ನಿರೂಪಣೆಯ ಶೈಲಿ ಅದ್ಭುತವಾಗಿದೆ ಎಂಬುದು ಪ್ರೇಕ್ಷಕರ ಅಭಿಪ್ರಾಯ.

Share this Story:

Follow Webdunia kannada