Publish Date: Tue, 12 Nov 2013 (12:44 IST)Updated Date: Tue, 12 Nov 2013 (12:44 IST)
PR
ಬಾಲಿವುಡ್ನ ಪ್ರತಿಭಾವಂತ ನಟಿ ಕಂಗನಾ ರನೌಟ್ . ಆಕೆ ತನ್ನ ತಾರ ಬದುಕನ್ನು ರಿಂದ ಆರಂಭಿಸಿದ ಳು . ಅಂದಿನಿಂದ ಕಂಗನಾ ಯಾವುದೇ ಬಗೆಯ ಇಮೇಜ್ ಗೂ ಒಳಪಡದೆ ತನ್ನ ಪ್ರತಿಬೆಯನ್ನು ತೋರಬಲ್ಲ ಪಾತ್ರಗಳನ್ನೂ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾಳೆ . ಆ ಕಾರಣದಿಂದ ಕಂಗನಾಳನ್ನು ರಜ್ಜೋ ಸಿನಿಮಾಕ್ಕೆ ನಿರ್ದೇಶಕ ವಿಶ್ವಾಸ್ ಪಾಟೀಲ್ ಯಾವುದೇ ಬಗೆಯ ಚಿಂತೆ ಇಲ್ಲದೆ ಆಯ್ಕೆ ಮಾಡಿದ್ದು. ಅತ್ಯಂತ ಫ್ಯಾಶನಬಲ್ ಪಾತ್ರದಲ್ಲಿ ಫ್ಯಾಶನ್ ಚಿತ್ರದಲ್ಲಿ ಕಂಡಿದ್ದ ಈ ಚೆಲುವೆ ರಜ್ಜೋ ದಲ್ಲಿ ದೇಸಿ ಡ್ಯಾನ್ಸರ್ ಆಗಿ ಕಾಣಸಿಕ್ಕಿದ್ದಾರೆ.
ಈ ಚಿತ್ರದಲ್ಲಿ ನೈಜತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಂಗನಾಳ ಕ್ಲಾಸಿಕಲ್ ಡ್ಯಾನ್ಸ್ ಗೆ ಸಾಕಷ್ಟು ಬ್ರಶಪ್ ಮಾಡಿ ಆಕೆಯಲ್ಲಿರುವ ಕಲಾವಿದೆಯನ್ನು ಇನ್ನು ಹೆಚ್ಚು ಉಜ್ವಲ ಮಾಡಿದ್ದಾರೆ ನಿರ್ದೇಶಕರು. ಅವೆಲ್ಲ ಬಿಡಿ, ಆದರೆ ನಿರ್ದೇಶಕ ವಿಶ್ವಾಸ್ ಅವರಿಗೆ ಹೆಚ್ಚು ಖುಷಿ ಆಗಿರುವುದು ಬೇರೆ ಸಂಗತಿಗೆ. ಈ ಚಿತ್ರದಲ್ಲಿ ಕಂಗನಾ ಪಾತ್ರಕ್ಕೆ ಪಾನ್ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ಪಾತ್ರಧಾರಿ ಹೆಚ್ಚಿನ ಗಮನ ಸೆಳೆಯಲು ವೀಲ್ಯೆದೆಲೆ ಹಾಕಿ ಕೊಳ್ಳಲೇ ಬೇಕಿತ್ತು. ಈ ಜಾಗದಲ್ಲಿ ಬೇರೆ ಯಾವ ನಟಿ ಇದ್ದಿದ್ದರೂ ನಿರ್ಧಾರ ತೆಗೆದುಕೊಳ್ಳಲು ಯೋಚಿಸುತ್ತಿದ್ದರೇನೋ. ಆದರೆ ಕಂಗನ ಹಿಂದೆ ಮುಂದೆ ನೋಡದೆ ಪಾನ್ ಜಗಿದಿದ್ದಾರೆ. ನಿಮಗೆ ಗೊತ್ತು ನಾಚ್ ಹುಡುಗಿಯರಿಗೆ ತಾಂಬೂಲ ಸೇವನೆ ಬದುಕಿನ ಮುಖ್ಯ ಭಾಗ. ಆ ಪಾತ್ರಕಾಗಿ ಆಕೆ ತಪ್ಪದೆ ಪಾನ್ ತಿಂದಿದ್ದಾಳೆ. ಇಂತಹ ಡೆಡಿಕೇಶನ್ ಇರುವ ಕಲಾವಿದರು ಸಿಕ್ಕೋದು ತುಂಬಾ ಕಷ್ಟ ಎಂದಿದ್ದಾರೆ ವಿಶ್ವಾಸ್ . ಈಕೆಯ ಈ ನಿರ್ಧಾರದಿಂದ ರಜ್ಜೋ ನಿಜಕ್ಕೂ ಸಂಪೂರ್ಣವಾಗಿದೆ ಎಂದಿದ್ದಾರೆ ನಿರ್ದೇಶಕರು. ಫೋರ್ ಪಿಲ್ಲರ್ಸ್ ಎಂಟರ್ಟೈನ್ ಮೆಂಟ್ ಈ ಚಿತ್ರ ನಿರ್ಮಿಸಿದೆ. 15 ರಂದು ರಜ್ಜೋ ಚಿತ್ರಮಂದಿರಗಳಿಗೆ ಲಗ್ಗೆ ಇಡ್ತಾ ಇದ್ದಾಳೆ .