ರಜನಿಯ 'ರಾಣಾ' ಚಿತ್ರದಲ್ಲಿ ಅಮಿತಾಬ್
ಇಪ್ಪತ್ತು ವರ್ಷದ ನಂತರ ಬಾಲಿವುಡ್ ಬಾದ್ ಷಾ ಅಮಿತಾಬ್ ಬಚ್ಚನ್ ಮತ್ತು ಸೂಪರ್ ಸ್ಟಾರ್ ರಜನಿ ಕಾಂತ್ ಪರದೆಯಲ್ಲಿ ಒಂದಾಗುತ್ತಿದ್ದಾರೆ. ಈ ಹಿಂದೆ 'ಹಮ್' ಚಿತ್ರದಲ್ಲಿ ಒಂದಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಈಗ ಕೆ.ಎಸ್. ರವಿಕುಮಾರ್ ನಿರ್ದೇಶನದ ಬಹು ನಿರೀಕ್ಷೆಯ 'ರಾಣಾ' ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. '
ರಾಣಾ' ಚಿತ್ರದಲ್ಲಿ ರಜನಿ ಕಾಂತ್ ಯುವಕ, ಮಧ್ಯವಯಸ್ಕ ಮತ್ತು ವಯೋವೃದ್ದನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿವಿಧ ಅವತಾರಗಳಿಗೆ ದೀಪಿಕಾ ಪಡುಕೋಣೆ, ದಿವ್ಯಾ ಬಾಲನ್ ಮತ್ತು ರೇಖಾ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೇಳಿಬಂದಿತ್ತು.ಇವರಲ್ಲಿ ನಟಿ ರೇಖಾ ನಟಿಸಲು ನಿರಾಕರಿಸಿದ್ದು, ಇವರದೇ ಮಾರ್ಗದಲ್ಲಿ ವಿದ್ಯಾ ಬಾಲನ್ ಕೂಡ ಸಾಗಿದ್ದಾರೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ಎ.ಆರ್.ರೆಹಮಾನ್ ಸಂಗೀತ ಈ ಚಿತ್ರಕ್ಕಿದೆ. '
ಅಂದ್ ಕಾನೂನ್', 'ಗಿರಫ್ತರ್', 'ಹಮ್' ಚಿತ್ರಗಳಲ್ಲಿ ಅಮಿತಾಬ್ ಮತ್ತು ರಜನಿ ಒಟ್ಟಾಗಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅಮಿತಾಬ್ ಕಿರು ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಮೂರು ದಶಕಗಳಿಂದ ಆತ್ಮೀಯ ಗೆಳೆಯರಾಗಿರುವ ಇವರು ಶಂಕರ್ ನಿರ್ದೇಶನದ 'ಎಂದಿರನ್' ಚಿತ್ರಕ್ಕೆ ಐಶ್ವರ್ಯ ರೈಯನ್ನು ಒಪ್ಪಿಸುವಲ್ಲಿ ಅಮಿತಾಬ್ ಪ್ರಮುಖ ಪಾತ್ರವಹಿಸಿದ್ದರು ಎನ್ನಲಾಗಿದೆ.