Article Bollywood Gossips %e0%b2%b0%e0%b2%9c%e0%b2%a8%e0%b2%bf %e0%b2%9c%e0%b3%8a%e0%b2%a4%e0%b3%86 %e0%b2%b9%e0%b3%8b%e0%b2%b2%e0%b2%bf%e0%b2%b8%e0%b2%ac%e0%b3%87%e0%b2%a1%e0%b2%bf %e0%b2%a7%e0%b2%a8%e0%b3%81%e0%b2%b6%e0%b3%8d 113062200016_1.htm

Daily Horoscope

Select Your Language

Notifications

webdunia
webdunia
webdunia
webdunia

ರಜನಿ ಜೊತೆ ಹೋಲಿಸಬೇಡಿ: ಧನುಶ್

ಧನುಶ್
PR
PR
ರಜನಿಕಾಂತ್ ತಮ್ಮ ಮೇಲೆ ಪ್ರಭಾವ ಬೀರಿರುವುದು ನಿಜ. ಆದರೆ ನನ್ನನ್ನು ಅವರೊಂದಿಗೆ ಹೋಲಿಸುವುದನ್ನು ನಾನು ಇಷ್ಟಪಡುವುದಿಲ್ಲ. ಏಕೆಂದರೆ ಅವರೊಬ್ಬ ಮೇರು ನಟ ಎಂದಿದ್ದಾರೆ ಧನುಶ್.

ರಜನಿ ಅವರ ಚಿತ್ರಗಳನ್ನು ನೋಡಿ ಬೆಳೆದವನು ನಾನು. ಹೀಗಾಗಿ ನನ್ನ ಮೇಲೆ ಅವರ ಪ್ರಭಾವ ಹೆಚ್ಚೇ ಇದೆ. ನಾನು ನಟಿಸಿರುವುದು ಕೇವಲ 26 ಚಿತ್ರಗಳಲ್ಲಿ ಮಾತ್ರ. ಹೀಗಿರುವಾಗ ಅವರೊಂದಿಗೆ ನನ್ನನ್ನು ಹೋಲಿಸಿಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ಎತ್ತಿದ್ದಾರೆ. ರಾಝಾನಾ ಚಿತ್ರ ನನ್ನ ಜೀವನದ ಮತ್ತೊಂದು ಚಿತ್ರ. ದಕ್ಷಿಣದ ನಟನ ಪಾತ್ರವನ್ನೇ ಹೋಲುವ ಈ ಚಿತ್ರ ನಾನು ತಮಿಳಿನಲ್ಲಿ ನಟಿಸಿದ ಚಿತ್ರವನ್ನೇ ಹೋಲುತ್ತಿದ್ದುದರಿಂದ ಅದನ್ನು ಒಪ್ಪಿಕೊಂಡೆ ಎಂದಿದ್ದಾರೆ.

ರಾಝಾನಾ ಚಿತ್ರವನ್ನು ತಮಿಳಿಗೂ ಡಬ್ ಮಾಡಲಾಗಿದೆ. ಅದು ಅವರಿಗೆ ಇಷ್ಟವಾಗಲಿದೆ ಎಂಬುದು ಧನುಶ್ ಅವರ ವಿಶ್ವಾಸ. ಭಾಷೆ ಬಹುದೊಡ್ಡ ತೊಡಕಾಗಿ ಪರಿಣಮಿಸಿದ್ದರಿಂದ ಹಿಂದಿಯಲ್ಲಿ ಡಬ್ಬಿಂಗ್ ಬೇರೆಯವರಿಗೆ ಬಿಟ್ಟುಕೊಟ್ಟೆ. ಈ ಪರಿಯ ಚಿತ್ರ ಪ್ರಚಾರ ಕಾರ್ಯವೂ ನನಗೆ ಹೊಸತು ಎಂದಿದ್ದಾರೆ ಧನುಶ್.

ದಕ್ಷಿಣದಲ್ಲಿ ಚಿತ್ರದ ಕುರಿತು ಒಂದಿಷ್ಟು ಸಂದರ್ಶನ ನೀಡಿ ಮುಗಿಸಿಬಿಡುತ್ತೇವೆ. ಆದರೆ ಬಾಲಿವುಡ್ನಲ್ಲಿ ಹಾಗಲ್ಲ. ಚಿತ್ರ ನಟನೆಗಿಂತ ಪ್ರಚಾರವೇ ಹೆಚ್ಚು ಸುಸ್ತು ಮಾಡಿಸುತ್ತದೆ. ಈಗಾಗಲೇ ರಾಝಾನಾ ಚಿತ್ರದ ಪ್ರಚಾರಕ್ಕಾಗಿ 15 ನಗರ ಸುತ್ತಿದ್ದೇವೆ ಎಂದಿದ್ದಾರೆ ಧನುಶ್.

Share this Story:

Follow Webdunia kannada