Article Bollywood Gossips %e0%b2%b0%e0%b2%9c%e0%b2%a8%e0%b2%bf %e0%b2%95%e0%b3%81%e0%b2%a1%e0%b2%bf%e0%b2%a4 %e0%b2%ac%e0%b2%bf%e0%b2%9f%e0%b3%8d%e0%b2%9f%e0%b2%bf%e0%b2%a6%e0%b3%8d%e0%b2%a6%e0%b3%87 %e0%b2%a4%e0%b2%aa%e0%b3%8d%e0%b2%aa%e0%b2%be%e0%b2%af%e0%b3%8d%e0%b2%a4%e0%b2%be 111051900019_1.htm

Daily Horoscope

Select Your Language

Notifications

webdunia
webdunia
webdunia
webdunia

ರಜನಿ ಕುಡಿತ ಬಿಟ್ಟಿದ್ದೇ ತಪ್ಪಾಯ್ತಾ?

ರಜನಿ ಕಾಂತ್
PR
ಕುಡಿತ ಬಿಟ್ಟಿದ್ದೇ ಸೂಪರ್ ಸ್ಟಾರ್ ರಜನಿ ಕಾಂತ್ ಆರೋಗ್ಯ ಕೆಡಲು ಕಾರಣ ಎಂಬ ಮಾದ್ಯಮಗಳ ವರದಿಯನ್ನು ರಜನಿಕಾಂತ್ ಕುಟುಂಬ ಅಲ್ಲಗಳೆಯುತ್ತಿದೆಯಾದರೂ, ಅವರ ಸಹೋದರ ಸತ್ಯನಾರಾಯಣ ರಾವ್ ಗಾಯಕ್‌ವಾಡ್ ಮಾತ್ರ ಇದಕ್ಕೆ ತಯಾರಿಲ್ಲ. ಸತ್ಯ ಏನೂ ಅಂತ ಸತ್ಯನಾರಾಯಣನಿಗೆ ಮಾತ್ರ ಗೊತ್ತಿದೆ. ರಜನಿಕಾಂತ್‌ಗೆ ಅದು ಮೊದಲೇ ಗೊತ್ತಿರುವ ವಿಚಾರ!

ನಿವೃತ್ತ ಸರ್ಕಾರಿ ನೌಕರನಾಗಿರುವ ರಜನಿ ಕಾಂತ್ ಅವರ ಅಣ್ಣ ಸತ್ಯನಾರಾಯಣರಾವ್ ಗಾಯಕ್‌ವಾಡ್ ನೆಲೆಸಿರುವುದು ಬೆಂಗಳೂರಿನಲ್ಲಿ. ಅಲ್ಲಿಗೆ ರಜನಿ ಕಾಂತ್ ಭೇಟಿ ನೀಡುತ್ತಿದ್ದರು. ಹಾಗೆಯೇ ಸಹೋದರನೊಂದಿಗೆ ಆಪ್ತ ಸಮಾಲೋಚನೆಯೂ ನಡೆಯುತ್ತಿತ್ತು. ತನ್ನ ಅಣ್ಣನೊಂದಿಗೆ ಎಲ್ಲಾ ವಿಚಾರವನ್ನು ಮುಕ್ತವಾಗಿ ಮಾತನಾಡುತ್ತಿದ್ದ ರಜನಿ, ಇತ್ತೀಚೆಗೆ ಹೇಗೋ ಗಟ್ಟಿ ಮನಸ್ಸು ಮಾಡಿ ಮದ್ಯಪಾನ ವರ್ಜಿಸಿದ್ದರು. ಹಾಗೂ ಈ ವಿಚಾರವಾಗಿ ಎಲ್ಲಾ ವಿಷಯವನ್ನು ಕರೆ ಮಾಡಿಯೂ ತಿಳಿಸಿದ್ದರು.

ಈ ಹಿಂದೆ ರಜನಿಗೆ ಇದ್ದ ಸಿಗರೇಟು ಸೇವನೆ ಮತ್ತು ಅತಿಯಾದ ಕುಡಿತದ ಚಟದಿಂದ ಈಗ ಯಕೃತ್ ಮತ್ತು ಶ್ವಾಸಕೋಶದ ತೊಂದರೆ ಅನುಭವಿಸುತ್ತಿದ್ದಾರೆ ಎಂದಿರುವ ಅವರ ಅಣ್ಣ, ಒಮ್ಮೆಲೆ ಕುಡಿತ ನಿಲ್ಲಿಸಿದ್ದರಿಂದ ಬೇರೆ ತೆರನಾದ ಆಹಾರಕ್ಕೆ ದೇಹ ಒಮ್ಮೆಗೆ ಸ್ಪಂದಿಸುತ್ತಿಲ್ಲ. ಹಲವಾರು ವರ್ಷಗಳಿಂದ ಕುಡಿತದ ಚಟ ಇರುವವರು ದಿಢೀರನೆ ನಿಲ್ಲಿಸಿದಾಗ ಕಾಣಿಸಿಕೊಳ್ಳುವ ಅನಾರೋಗ್ಯ ರಕ್ಷಣಗಳಾದ ಆಯಾಸ, ವಾಂತಿ, ಉಸಿರಾಟ ತೊಂದರೆ, ಜ್ವರ ಮುಂತಾದ ಕಾಯಿಲೆಯಿಂದಲೇ ರಜನಿಕಾಂತ್ ಇತ್ತೀಚೆಗೆ ಮೂರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತನ್ನ ಆಪ್ತರೊಂದಿಗೆ ವಿಷಯ ಬಹಿರಂಗಪಡಿಸಿದ್ದಾರೆ ಸತ್ಯನಾರಾಯಣ ರಾವ್ ಗಾಯಕ್ ವಾಡ್.

ಆಸ್ಪತ್ರೆ ಸಹವಾಸದಿಂದ ತುಂಬಾ ದೂರ ಉಳಿದಿದ್ದ ರಜನಿ ಏಪ್ರಿಲ್ 29ರಂದು ಮೊದಲ ಬಾರಿಗೆ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಐದು ದಿನಗಳ ಹಿಂದೆ ಮೂರನೇ ಬಾರಿ ಚೆನ್ನೈನ ರಾಮಚಂದ್ರ ಮೆಡಿಕಲ್ ಸೆಂಟರ್‌ನಲ್ಲಿ ಚಿಕಿತ್ಸೆಗೆ ದಾಖಲಾದ ಅವರು ಇನ್ನು ಎರಡು ಮೂರು ದಿನಗಳಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಔಷಧಿ, ಔಪಚಾರಕ್ಕಾಗಿ ವಿದೇಶಕ್ಕೆ ಹೋಗುವಂತಾ ಅನಾರೋಗ್ಯ ಸ್ಥಿತಿಯಲ್ಲಿಲ್ಲ ಎಂದು ಸ್ಪಷ್ಟಪಡಿಸಿರುವ ಸತ್ಯ ನಾರಾಯಣ ರಾವ್, ಕನಿಷ್ಠ ಆರು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಆಸ್ಪತ್ರೆಗೆ ದಾಖಲಾಗಿರುವ ರಜನಿ ಕಾಂತ್ ಅವರನ್ನು ಇತ್ತೀಚೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭೇಟಿ ಮಾಡಿ, ರಜನಿ ಆರೋಗ್ಯವಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಸಮಾಧಾನ ಹೇಳಿದ್ದರು. ಈ ನಡುವೆ ರಜನಿ ಶೀಘ್ರ ಗುಣಮುಖರಾಗಲು ರಸ್ತೆಯ ಬರಿ ನೆಲದಲ್ಲಿ ಊಟ ಮಾಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಆರಾಧನೆ ಮಾಡುತ್ತಿರುವ ಅವರ ಅಭಿಮಾನಿಗಳು ರಜನಿ ಕುಡಿತ ಬಿಡಬಾರದಿತ್ತು ಎನ್ನುತ್ತಿದ್ದಾರೆ.

Share this Story:

Follow Webdunia kannada