Article Bollywood Gossips %e0%b2%b0%e0%b2%9c%e0%b2%a8%e0%b2%bf V S %e0%b2%b6%e0%b2%be%e0%b2%b0%e0%b3%82%e0%b2%96%e0%b3%8d %e0%b2%9a%e0%b2%bf%e0%b2%a4%e0%b3%8d%e0%b2%b0 %e0%b2%b8%e0%b2%ae%e0%b2%b0 108062800022_1.htm

Select Your Language

Notifications

webdunia
webdunia
webdunia
webdunia

ರಜನಿ V/s ಶಾರೂಖ್ ಚಿತ್ರ ಸಮರ

ರಜನಿ
PTI
ನಟ ಶಾರುಖ್ ಖಾನ್ ಮತ್ತೊಮ್ಮೆ ಸೂಪರ್‌ಸ್ಟಾರ್‌ರೊಂದಿಗೆ ಸೆಣಸಾಟಕ್ಕಿಲಿದ್ದಿದ್ದಾರೆ. ಆದರೆ ಈ ಸಲ ಬಿಗ್ ಬಿಯೊಂದಿಗೆ ಅಲ್ಲ. ಅವರಿಗಿಂತಲೂ ಒಂದು ಪಟ್ಟು ಹೆಚ್ಚು ಅನ್ನಬಹುದಾದ ದಕ್ಷಿಣದ ಬಾದ್‌ಶಾ ರಜನಿಕಾಂತ್‌ರಿಂದ ಎಸ್‌ಅರ್‌ಕೆ ಪ್ರಬಲ ಸ್ಪರ್ಧೆ ಎದುರಿಸಬೇಕಾಗಿದೆ.

ಆದರೆ ಇದು ಹೇಳಿಕಾ ಸಮರವಲ್ಲ, ಬ್ಲಾಗ ಸಮರವೂ ಅಲ್ಲ. ಬದಲಾಗಿ ಶುದ್ಧ ಬಿಸ್ನೆಸ್. ಇದರರ್ಥ ಚಿತ್ರರಂಗದ ಹವೆಯನ್ನು ಇನ್ನಷ್ಟು ಬಿಸಿಯಾಗಿಸಲಿದೆ.

ಮೂಲಗಳು ಹೇಳುವಂತೆ ಶಾರುಖ್ರ 'ಬಿಲ್ಲೊ ಬಾರ್ಬರ್' ಮತ್ತು ರಜನಿಕಾಂತ್‌ರ 'ಕುಸೇಲನ್'ಗಳೆರಡೂ ಮಳಯಾಲಂನ 'ಕತಾ ಪರಯುಂಪೋಲ್' ನಿಂದ ಪ್ರಭಾವಿತ ಚಿತ್ರಗಳು. ಬಾಲ್ಯದ ಗೆಳೆಯರಿಬ್ಬರು ಪರಸ್ಪರ ದೂರವಾದ ಬಳಿಕ ಒಬ್ಬ ದೇಶವನ್ನು ಅಪಾಯದಂಚಿನಿಂದ ಪಾರು ಮಾಡುವ ಸೂಪರ್‌ಸ್ಟಾರ್‌ ಆದರೆ ಇನ್ನೊಬ್ಬ ಹಳ್ಳಿಯೊಂದರಲ್ಲಿ ಕ್ಷೌರಿಕನಾಗಿ ಉಳಿಯುವ ಕತೆ ಹೊಂದಿರುವ ಸಿನಿಮಾಗಳಿವು.
webdunia
PTI


ಆಸಕ್ತಿ ಕೆರಳಿಸುವ ವಿಚಾರವೆಂದರೆ, ಬಿಡುಗಡೆಯ ದಿನಾಂಕದಲ್ಲಿ ರಜನಿಕಾಂತ್‌ರ ಚಿತ್ರ ಶಾರುಖ್ ಚಿತ್ರವನ್ನು ಮೀರಿಸಿಬಿಟ್ಟಿದೆ, ದಕ್ಷಿಣದ ಮಹಾನ್‌ ನಟನ ಚಿತ್ರ ಬಾಲಿವುಡ್ ಬಾದಶಾನ ಚಿತ್ರಕ್ಕಿಂತ ಬಹು ಮೊದಲೇ ಬಿಡುಗಡೆಯಾಗಲಿದೆ.

ಸ್ಪರ್ಧೆಯು ತೀವ್ರಗೊಳ್ಳುತ್ತಿರುವುದರಿಂದ ಈ ಸಲ ತಮ್ಮ 'ಕಿಂಗ್' ವರ್ಚಸ್ಸನ್ನು ಉಳಿಸಿಕೊಳ್ಳಲು ಶಾರುಕ್‌ ಕಠಿಣ ಪರಿಶ್ರಮ ಪಡಬೇಕಾಗಬಹುದು.

Share this Story:

Follow Webdunia kannada