Article Bollywood Gossips %e0%b2%b0%e0%b2%82%e0%b2%97%e0%b3%81 %e0%b2%b0%e0%b2%82%e0%b2%97%e0%b2%bf%e0%b2%a8 %e0%b2%b0%e0%b2%82%e0%b2%97%e0%b3%8d %e0%b2%b0%e0%b2%b8%e0%b3%8d%e0%b2%b8%e0%b2%bf%e0%b2%af%e0%b2%be 108102300046_1.htm

Select Your Language

Notifications

webdunia
webdunia
webdunia
webdunia

ರಂಗು ರಂಗಿನ 'ರಂಗ್ ರಸ್ಸಿಯಾ'

ರಂಗ್ ರಸ್ಸಿಯಾ
IFM
ಬಾಲಿವುಡ್‌ ಅಂಗಳದಿಂದ ಮತ್ತೊಂದು ಬಿಸಿಬಿಸಿ ಚಿತ್ರ ಬರುತ್ತಿದೆ. ರಣ್‌ದೀಪ್ ಹೂಡಾ ಮತ್ತು ನಂದನಾ ಸೇನ್ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಸೆನ್ಸಾರ್ 'ಎ' ಸರ್ಟಿಫಿಕೇಟ್ ಕೊಡುವ ಸಾಧ್ಯತೆ ಕೂಡಾ ನಿಚ್ಚಳವಾಗಿದೆ.

ಚಿತ್ರದ ಹೆಸರು 'ರಂಗ್ ರಸ್ಸಿಯಾ'. ರಾಜಾ ರವಿವರ್ಮಾ ಮತ್ತು ಸುಗಂಧ ಎಂಬ ಜೋಡಿಯನ್ನು ಆಧರಿಸಿ ತೆಗೆಯಲಾಗಿರುವ ಚಿತ್ರದಲ್ಲಿ ನಂದನಾಸೇನ್ ಟಾಪ್‌ಲೆಸ್ ಆಗಿದ್ದು, ಈ ದೃಶ್ಯವನ್ನು ತೆಗೆದು ಹಾಕಬೇಕೆಂಬುದು ಸೆನ್ಸಾರ್ ವಾದ. ಬೆತ್ತಲೆಯಾಗಿ ನಿಂತ ಸುಗಂಧಿಯ ಚಿತ್ರವನ್ನು ರವಿವರ್ಮ ಬಿಡಿಸುವ ದೃಶ್ಯ ಚಿತ್ರದಲ್ಲಿ ಮಹತ್ವದ ಪಾತ್ರವಹಿಸಿರುವುದರಿಂದ ಆ ದೃಶ್ಯವನ್ನು ಇಲ್ಲವಾಗಿಸಿದರೆ ಚಿತ್ರದ ಪರಿಪೂರ್ಣತೆ ಹೊರಟುಹೋಗುತ್ತದೆ ಎನ್ನುವುದು ನಿರ್ದೇಶಕ ಕೇತನ್ ಮೆಹ್ತಾ ವಾದ.

ರಾಜಾ ರವಿವರ್ಮಾ ಕಲಾಕಾರನೆಂದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಕುರಿತ ಸಿನಿಮಾವನ್ನು ಗ್ಲ್ಯಾಮರೈಸ್ ಮಾಡಿ, ಮತ್ತೊಂದು ಟೈಟಾನಿಕ್ ಸೀನ್ ನೆನಪಿಸುವ ಯತ್ನ ಇದರಲ್ಲಿದೆ ಎನ್ನಲಾಗಿದೆ. ರವಿವರ್ಮನ ಕುಂಚದಲ್ಲಿ ಅರಳಿದ ಚಿತ್ರವನ್ನು ತೋರಿಸಲು ಹೊರಟಿರುವ ನಿರ್ದೇಶಕರಿಗೀಗ ಪ್ರಾಣಸಂಕಟ. ಸೆನ್ಸಾರ್ ಕೆಂಗಣ್ಣು ಕೂಡ ಬಿದ್ದಿರುವ ಕಾರಣ ರಸಿಕ ಪ್ರೇಕ್ಷಕರಿಗೆ ನಿರಾಸೆಯಾಗುವ ಸಾಧ್ಯತೆಯೇ ಹೆಚ್ಚಿದೆ. ಅಥವಾ 'ಎ' ಸರ್ಟಿಫಿಕೇಟ್ ಅಡಿಯಲ್ಲಿ ಬಿಡುಗಡೆಯಾಗಬಹುದು. ಚಿತ್ರವನ್ನು ವರ್ಷಾಂತ್ಯದಲ್ಲಿ ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರಿಗಿದೆ.

ಅದಕ್ಕೂ ಮೊದಲು ಲಂಡನ್ ಮತ್ತು ನ್ಯೂಯಾರ್ಕ್ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. 52ನೇ ಬಿಎಫ್ಐ ಲಂಡನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಕ್ಟೋಬರ್ 26ರಂದು ಮತ್ತು 30ರಂದು ಹಾಗೂ ಅದೇ ತಿಂಗಳಲ್ಲಿ ನ್ಯೂಯಾರ್ಕ್‌ನ ಎರಡು ಫಿಲ್ಮ್ ಫೆಸ್ಟಿವಲ್‌ನಲ್ಲಿ ಚಿತ್ರ ಪ್ರದರ್ಶನವಾಗುವುದು.


Share this Story:

Follow Webdunia kannada