Article Bollywood Gossips %e0%b2%af%e0%b3%87 %e0%b2%a6%e0%b3%8b%e0%b2%b8%e0%b3%8d%e0%b2%a4%e0%b2%bf %e0%b2%b9%e0%b2%ae%e0%b3%8d %e0%b2%a8%e0%b2%b9%e0%b3%80 %e0%b2%a4%e0%b3%8b%e0%b2%a1%e0%b3%86%e0%b2%82%e0%b2%97%e0%b3%86 108051400025_1.htm

Select Your Language

Notifications

webdunia
webdunia
webdunia
webdunia

ಯೇ ದೋಸ್ತಿ ಹಮ್ ನಹೀ ತೋಡೆಂಗೆ

ಯೇ
ಬಾಲಿವುಡ್ ನಿಧಾನವಾಗಿ ಪಾಕಿಸ್ತಾನವನ್ನು ಪ್ರವೇಶಿಸುತ್ತಿದೆ. ಉಭಯ ದೇಶಗಳು ಪರಸ್ಪರ ವಹಿವಾಟು ನಡೆಸಲು ಮುಂದಾಗಿವೆ ಎನ್ನುವುದು ಹಲವು ವಿದ್ಯಾಮಾನಗಳಲ್ಲಿ ಸಾಬೀತಾಗಿದೆ.

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅಭಿನಯದ ಭೂತನಾಥ್ ಭಾರತ ಮತ್ತು ಪಾಕಿಸ್ತಾನದಲ್ಲಿ ಏಕಕಾಲಕ್ಕೆ ಬಿಡುಗಡೆಯಾಯಿತು. ಬಾಲಿವುಡ್‌ನ ಅಮಿತಾಬ್ ಬಚ್ಚನ್ ಹಾಗೂ ಶಾರೂಕ್ ಖಾನ್ ಅವರ ಅಭಿನಯದ ಚಿತ್ರಗಳಿಗೆ ಪಾಕಿಸ್ತಾನದಲ್ಲಿ ಉತ್ತಮ ಪ್ರತಿಕ್ರೀಯೇ ವ್ಯಕ್ತವಾಗಿದೆ.

ಜನ್ನತ್ ಚಿತ್ರ ತಂಡ ಪ್ರಸ್ತುತ ಪಾಕಿಸ್ತಾನದಲ್ಲಿದ್ದು ಚಿತ್ರದ ಪ್ರೀಮಿಯರ್ ಉದ್ಘಾಟನೆಯನ್ನು ಪಾಕಿಸ್ತಾನ ಮತ್ತು ಭಾರತದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ನಿರ್ದೇಶಕ ಶಶಿ ರಂಜನ್ ತಮ್ಮ ಧೂಮ್ ಧಡಕ್ಕಾ ಚಿತ್ರವನ್ನು ಮೇ 23ರಂದು ಪಾಕಿಸ್ತಾನ ಹಾಗೂ ಭಾರತದಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.ಪಾಕಿಸ್ತಾನದ ರಾಜಕಾರಣಿಯಾದ ಸೈಮಾ ಖರ್ ಅವರು ಸಹಾಯಕ ನಿರ್ಮಾಪಕರಾಗಿದ್ದು, ಪಾಕಿಸ್ತಾನದ ನಟ ಝಕ್ ಮುಖ್ಯಪಾತ್ರದಲ್ಲಿದ್ದಾರೆ.

Share this Story:

Follow Webdunia kannada