'
ಏಕ್ ಮೇ ಓರ್ ಏಕ್ ತೂ' ಚಿತ್ರದಲ್ಲಿ ಕರೀನಾ ಹಾಗೂ ಇಮ್ರಾನ್‌ನ ಗರಂಗರಂ ಸಂಯೋಜನೆಯು ಈಗ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವ ಮಾತು. ಕರಣ್ ಜೋಹರ್ ಅವರ ಧರ್ಮ ಫಿಲಮ್ಸ್ ಚಿತ್ರವನ್ನು ನಿರ್ಮಿಸಿದ್ದು, ಫೆಬ್ರವರಿ 10ರಂದು ಬಿಡುಗಡೆಯಾಗಲಿರುವ ಚಿತ್ರದ ಬಗ್ಗೆ ಬೇಬೊ ಹೇಳಿದ ಒಂದಿಷ್ಟು ಮಾತು ಇಲ್ಲಿದೆ. '
ಜಬ್ ವೀ ಮೆಟ್'ನಲ್ಲಿ ಮಾಡಿದ ಗೀತ್ ಪಾತ್ರಕ್ಕೂ, 'ಏಕ್ ಮೇ ಓರ್ ಏಕ್ ತೂ'ನಲ್ಲಿ ಮಾಡಿರುವ ರೈನಾ ಪಾತ್ರಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಗೀತ್ ಪಾತ್ರದಲ್ಲಿ ನಾನು ಮಕ್ಕಳಿಂತಿರುವ ಪಾತ್ರವನ್ನು ನಿರ್ವಹಿಸಿದ್ದೆ ಆದರೆ ರೈನಾ ಪಾತ್ರ ಇದಕ್ಕಿಂತಲೂ ತುಂಬಾ ವಿಶಿಷ್ಟವಾದುದು.
ಕೃಪೆ: ಟಿ-ಸಿರೀಸ್
ಇಲ್ಲಿ ನಾನು ನಗರದಿಂದ ಬಂದಿರುವ ಆಧುನಿಕ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ನಾನು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಅರಿವಿರುತ್ತದೆ. ಆದರೆ ಗೀತ್ ಪಾತ್ರದಲ್ಲಿ ನಾನು ಏನನ್ನು ಬೇಕಾದರೂ ಮಾಡಬಹುದಿತ್ತು, ಸ್ವತಂತ್ರವಾಗಿ ಈ ಪಾತ್ರಕ್ಕೆ ನಾನು ಜೀವ ತುಂಬಿದ್ದೇನೆ. ರೈನಾ ಪಾತ್ರದಲ್ಲಿ ನನಗೆ ನೌಕರಿ ಇರುವುದಿಲ್ಲ ಹಾಗೂ ಸ್ವಂತ ಮನೆ ಕೂಡ ನನಗಿರುವುದಿಲ್ಲ. ಪ್ರತಿಯೊಂದು ಸನ್ನಿವೇಶದಲ್ಲೂ ನಾನು ಧನಾತ್ಮಕವಾಗಿರಬೇಕು ಎಂದಿದ್ದಾರೆ.
ನಟನೆ ಎನ್ನುವುದು ನನ್ನ ರಕ್ತದಲ್ಲಿ ಹರಿದು ಬಂದಿದೆ. ಇದು ನನ್ನ ಹವ್ಯಾಸ. ನಾನು ಇಷ್ಟಪಟ್ಟು ಈ ವೃತ್ತಿಯನ್ನು ಮಾಡುವುದರಿಂದ 70 ವರ್ಷದವಳಾದರೂ ನಟನೆಯ ಕಸವು ನನ್ನಲ್ಲಿರುತ್ತದೆ. ನಾನು ನಟಿಸುವಾಗ ನಟಿಸುತ್ತಿದ್ದೇನೆ ಎಂದು ನನಗೆ ಅನಿಸುವುದಿಲ್ಲ. ಅದು ತನ್ನಷ್ಟಕ್ಕೆ ನಡೆಯುತ್ತದೆ ಎನ್ನುತ್ತಾರೆ ಬೇಬೋ.
ಇದು ನಾನು ಇಮ್ರಾನ್‌ನೊಂದಿಗೆ ನಟಿಸುತ್ತಿರುವ ಮೊದಲ ಚಿತ್ರವಾಗಿದೆ. ಯುವ ನಟರೊಂದಿಗೆ ನಟಿಸುತ್ತಿರುವುದು ನನಗೆ ಸಂತಸದ ವಿಚಾರವಾಗಿದೆ. ನನ್ನ ಹಾಗೂ ಇಮ್ರಾನ್‌ನ ಜೋಡಿ ಅದ್ಭುತವಾಗಿದೆ. ಆತ ನನ್ನ ಪಾತ್ರಕ್ಕೆ ಜೀವ ತುಂಬಿದ್ದಾನೆ. ಪ್ರತಿಯೊಬ್ಬರೂ ನಮ್ಮ ಸಂಯೋಜನೆಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಉಲಿದಿದ್ದಾರೆ ಬಾಲಿವುಡ್ ಬೇಬೋ