Article Bollywood Gossips %e0%b2%af%e0%b2%b6%e0%b3%8d %e0%b2%9a%e0%b3%8b%e0%b2%aa%e0%b3%8d%e0%b2%b0%e0%b2%be %e0%b2%a8%e0%b2%a8%e0%b3%8d%e0%b2%a8 %e0%b2%89%e0%b2%a4%e0%b3%8d%e0%b2%a4%e0%b2%ae %e0%b2%b8%e0%b3%8d%e0%b2%a8%e0%b3%87%e0%b2%b9%e0%b2%bf%e0%b2%a4 %e0%b2%b2%e0%b2%a4%e0%b2%be %e0%b2%ae%e0%b2%82%e0%b2%97%e0%b3%87%e0%b2%b6%e0%b3%8d%e0%b2%95%e0%b2%b0%e0%b3%8d 113102100009_1.htm

Daily Horoscope

Select Your Language

Notifications

webdunia
webdunia
webdunia
webdunia

ಯಶ್ ಚೋಪ್ರಾ ನನ್ನ ಉತ್ತಮ ಸ್ನೇಹಿತ.. ಲತಾ ಮಂಗೇಶ್ಕರ್

ಲತಾ ಮಂಗೇಶ್ವರ್
PR
PR
ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಗೌರವಾನ್ವಿತ ಯಶ್ ಚೋಪ್ರಾ ಸ್ಮಾರಕ ಅವಾರ್ಡ್ ದೊರೆತಿದೆ. ಶನಿವಾರ ರಾತ್ರಿ ಮುಂಬೈನಲ್ಲಿ ಕೇಂದ್ರ ಇನ್ಫರಮೇಷನ್ ಮತ್ತು ಬ್ರಾಡ್ ಕಾಸ್ಟಿಂಗ್ ಮಂತ್ರಿ ಮನೀಷ್ ತಿವಾರಿ ಅವರು ಕಾರ್ಯಕ್ರಮ ಒಂದರಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಸಿದ್ಧ ನಿರ್ದೇಶಕ -ನಿರ್ಮಾಪಕ ಯಶ್ ಚೋಪ್ರಾ ಸ್ಮರಣಾರ್ಥ ಟಿಎಸ್ಸಾರ್ ಫೌಂಡೇಷನ್ ಪರವಾಗಿ ಕಾಂಗ್ರೆಸ್ ಅಧಿನಾಯಕರಲ್ಲಿ ಒಬ್ಬರಾದ ಟಿ. ಸುಬ್ಬರಾಮಿರೆಡ್ಡಿ ಈ ಅವಾರ್ಡ್ ಕಾರ್ಯಕ್ರಮದ ಮುಖ್ಯಸ್ಥಿಕೆ ವಹಿಸಿ ಕೊಂಡಿದ್ದರು. ಈ ಸಂದರ್ಭದಲ್ಲಿ ಲತಾಮಂಗೇಶ್ಕರ್ ಯಶ್ ಚೋಪ್ರ ತನಗೆ
ಅತ್ಯಂತ ಪ್ರೀತಿ ಪಾತ್ರ ಸ್ನೇಹಿತರಲ್ಲಿ ಒಬ್ಬರು ಎನ್ನುವ ಸಂಗತಿ ಬಿಚ್ಚಿಟ್ಟರು. ಕಳೆದ ಮೂರು ದಿನಗಳಿಂದ ಸಿಕ್ಕಾಪಟ್ಟೆ ಜ್ವರದಿಂದ ಬಳಲುತ್ತಿದ್ದೇನೆ.ಹೇಗೆ ಬರುವುದು ಎನ್ನುವ ಸಮಸ್ಯೆ ಆಗಿತ್ತು. ಏಕೆಂದರೆ ಡಾಕ್ಟರ್ ಎಲ್ಲಗೂ ಹೋಗಬಾರದು ಎಂದು ಕಟ್ಟಾಜ್ಞೆ ಮಾಡಿದ್ದರು.
ಅಷ್ಟೊಂದು ಜ್ವರ. ನಾನು ಇಲ್ಲಿಗೆ ಬಂದದ್ದು ಅವಾರ್ಡ್ ನಿಂದ ದೊರೆಯುವ ಹತ್ತು ಲಕ್ಷಕ್ಕಾಗಲಿ ಅಥವಾ ಬೇರೆ ಯಾವುದೇ ಸಂಗತಿಗಳ ಆಕರ್ಷಣೆಗಲ್ಲ. ಯಶ್ ಜಿ ನನ್ನ ಉತ್ತಮ ಸ್ನೇಹಿತರು ಎಂದು ಹೇಳಿದ್ದು ಭಾರತದ ಕೋಗಿಲೆ .

ಈ ಕಾರ್ಯಕ್ರಮದಲ್ಲಿ ಯಶ್ ಪತ್ನಿ ಪಮೇಲಾ ಸಹ ಭಾಗವಹಿಸಿದ್ದರು.ಸಿನಿಮಾರಂಗಕ್ಕೆ ಲತಾ ಮಂಗೇಶ್ಕರ್ ಮಾಡಿದ ಸೇವೆಯ ಅನ್ವಯ ಅವರಿಗೆ ಟ್ರಸ್ಟ್ ನ ಮೊದಲ ಯಶ್ ಚೋಪ್ರಾ ಅವಾರ್ಡ್ ನೀಡಲಾಗಿದೆ ಎಂದು ಸುಬ್ಬರಾಮಿರೆಡ್ಡಿ ತಿಳಿಸಿದ್ದಾರೆ. ಈ ಕಮಿಟಿಯಲ್ಲಿ ಹೇಮಮಾಲಿನಿ, ಸಿಮಿ
ಗರೆವಾಲ್, ಅನಿಲ್ ಕಪೂರ್ ಇದ್ದರು.

Share this Story:

Follow Webdunia kannada