Article Bollywood Gossips %e0%b2%af%e0%b2%b6%e0%b2%b8%e0%b3%8d%e0%b2%b8%e0%b2%bf%e0%b2%a8 %e0%b2%8f%e0%b2%a3%e0%b2%bf %e0%b2%8f%e0%b2%b0%e0%b2%bf%e0%b2%a6 %e0%b2%b8%e0%b3%88%e0%b2%ab%e0%b3%8d %e0%b2%85%e0%b2%b2%e0%b2%bf %e0%b2%96%e0%b2%be%e0%b2%a8%e0%b3%8d 108032600013_1.htm

Daily Horoscope

Select Your Language

Notifications

webdunia
webdunia
webdunia
webdunia

ಯಶಸ್ಸಿನ ಏಣಿ ಏರಿದ ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್
IFM
ಬಾಲಿವುಡ್ಡನ್ನು ಆಳಿದ ಮೂರು ಮಹಾನ್ ಖಾನ್‌ಗಳೆಂದರೆ, ಶಾರೂಕ್ ಖಾನ್, ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್. ಬಾಲಿವುಡ್ಡಿಗೆ ಹೃತಿಕ್ ರೋಶನ್ ಆರಂಗೇಟ್ರಂ ಅದ ಬಳಿಕ ಹೃತಿಕ್ ಹೆಸರೂ ಖಾನ್‌ತ್ರಯರ ಪಟ್ಟಿಯಲ್ಲಿ ಸೇರಿತು. ಇವರೊಂದಿಗೆ ಇರುವ ಇನ್ನೊಂದು ಹೆಸರು ಅಕ್ಷಯ್ ಕುಮಾರ್. ಈ ಪಂಚ ತಾರೆಗಳು ಅತಿ ಹೆಚ್ಚು ಸಂಭಾವನೆ ಪಡೆದವರು. ಇವರ ಸಿನಿಮಾಗಳು ಹೆಚ್ಚಿನ ಕ್ರಯಕ್ಕೆ ವಿಕ್ರಯವಾಗಿದೆ.

ಇದೀಗ ಈ ಪಂಚತಾರೆಯರ ಕ್ಲಬ್ಬಿಗೆ ಸೈಫ್ ಅಲಿ ಖಾನ್ ಹೆಸರು ಸೇರುತ್ತಿದೆ. ಕಲ್ ಹೋ ನ ಹೋ, ಏಕ್ ಹಸೀನಾ ತಿ, ಹಮ್‌ತುಮ್ಸ ಸಲಾಂ ನಮಸ್ತೆ, ಒಂಕಾರ, ಏಕಲವ್ಯ ಮುಂತಾದ ಸಿನಿಮಾಗಳಲ್ಲಿ ಇವರ ಮಿಂಚಿನ ನಟನೆ ಗಮನ ಸೆಳೆಯುವಂತದ್ದು. ರೇಸ್ ಚಿತ್ರ ಸೈಫ್‌ಗೆ ಹೊಸ ಇಮೇಜ್ ನೀಡಿದ್ದು, ಅವರಿಗೆ ತಾರಾ ಪಟ್ಟ ನೀಡಿದೆ.

ಶಾರೂಕ್ ಅಥವಾ ಅಕ್ಷಯ್ ಸಾಲಿನಲ್ಲಿ ನಿಲ್ಲಬೇಕಿದ್ದರೆ, ಸೈಫ್ ಇನ್ನಷ್ಟು ದೂರ ತನ್ನ ದಾರಿಯನ್ನು ಕ್ರಮಿಸಬೇಕಾಗಿದೆಯಾದರೂ, ಜನರನ್ನು ಸೆಳೆಯುವ ಅವರ ಸಾಮರ್ಥ್ಯ ಸಾಬೀತಾಗಿದೆ. ವಿದೇಶಗಳಲ್ಲಿ ಸೈಫ್ ಚಿತ್ರಗಳು ಹೆಸರು ಮಾಡುತ್ತಿವೆ. ಅವರ ರೇಸ್ ಚಿತ್ರ ಹಲವು ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡಿದೆ.

Share this Story:

Follow Webdunia kannada