Article Bollywood Gossips %e0%b2%af%e0%b2%aa%e0%b3%8d%e0%b2%aa%e0%b2%be %e0%b2%b5%e0%b2%b8%e0%b3%80 %e0%b2%aa%e0%b3%8d%e0%b2%b0%e0%b2%bf%e0%b2%af%e0%b2%be%e0%b2%82%e0%b2%95%e0%b2%a8 %e0%b2%b2%e0%b3%81%e0%b2%95%e0%b3%8d %e0%b2%a8%e0%b3%8b%e0%b2%a1%e0%b3%8d%e0%b2%b0%e0%b2%bf 113100100010_1.htm

Daily Horoscope

Select Your Language

Notifications

webdunia
webdunia
webdunia
webdunia

ಯಪ್ಪಾ, ವಸೀ ಪ್ರಿಯಾಂಕನ ಲುಕ್ ನೋಡ್ರಿ...

ಪ್ರಿಯಾಂಕಾ ಚೋಪ್ರಾ
PR
ರಾಮ್ಲೀಲಾ ಚಿತ್ರದ ಐಟಂ ಹಾಡೊಂದು ಮಾಡಿದಷ್ಟು ಸುದ್ದಿ ಯಾವ ಚಿತ್ರದ ಹಾಡುಗಳೂ ಮಾಡಿರಲಿಕ್ಕಿಲ್ಲವೇನೋ? ಆ ರೋಲ್ನಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಎರಡು ತಿಂಗಳಿನಿಂದ ಗಾಸಿಪ್ಗಳು ಹರಿದಾಡುತ್ತಲೇ ಇವೆ. ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರದ ಮೂಲಕ ಐಶ್ವರ್ಯಾ ರೈ ಅವರನ್ನು ಮತ್ತೆ ಬೆಳ್ಳಿತೆರೆಗೆ ಕರೆತರಲಿದ್ದಾರೆ ಎಂದು ಹೇಳಲಾಗಿತ್ತು.

ಅದನ್ನು ನಿರ್ದೇಶಕರ ಸಹಿತ ಐಶ್ವರ್ಯಾ ಕುಟುಂಬದ ಆಪ್ತರು ಸುಳ್ಳೆಂದಿದ್ದೂ ಆಯಿತು. ಕೊನೆಗೂ ಆ ನೃತ್ಯಕ್ಕೆ ಹೆಜ್ಜೆ ಹಾಕಲು ಪ್ರಿಯಾಂಕಾ ಚೋಪ್ರಾ ಆಯ್ಕೆಯಾದರು. ಈಗ ಆ ಹಾಡಿನ ಸ್ಟಿಲ್ ಬಿಡುಗಡೆಯಾಗಿದ್ದು, ಫೇಸ್ಬುಕ್ ಸೇರಿದಂತೆ ಎಲ್ಲಾ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ಹರಿದಾಡುತ್ತಿದೆ.

webdunia
PR
ಸಂಪೂರ್ಣ ಬಿಳಿ ಬಣ್ಣದ ಉಡುಗೆ ತೊಟ್ಟಿರುವ ಪ್ರಿಯಾಂಕಾ ಇಲ್ಲಿ ತಮ್ಮ ದೇಹಸೌಂದರ್ಯದ ಪ್ರದರ್ಶನಕ್ಕೆ ಮುಂದಾಗಿದಾರೆ. ಈ ಡಾನ್ಸ್ ಬಗ್ಗೆ ಸಾಕಷ್ಟು ಗಾಸಿಪ್ಗಳೂ ಹುಟ್ಟಿಕೊಂಡಿವೆ. ಐಶ್ವರ್ಯಾ ದಪ್ಪಕ್ಕಿರುವುದರಿಂದ ಈ ರೋಲ್ ಪ್ರಿಯಾಂಕಾಗೆ ಸಿಕ್ಕಿದೆ ಎಂದು ಬಾಲಿವುಡ್ನ ಗಲ್ಲಿಗಳಲ್ಲಿ ಸುದ್ದಿ ಹಬ್ಬಿವೆಯಂತೆ. ಚಿತ್ರದಲ್ಲಿ ಮುಖ್ಯವಾಗಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಪ್ರಿಯಾಂಕಾ ಒಂದು ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳುವ ಬೆಡಗಿಯಷ್ಟೇ. ಜಂಝೀರ್ ಹಾಗೂ ಶೂಟೌಟ್ ಅಟ್ ವಾಡಲಾ ಚಿತ್ರದಲ್ಲೂ ಅವರು ಇದೇ ರೀತಿ ಕುಣಿದಿದ್ದಾರೆ. ಪ್ರಭುದೇವ ಅವರ ತಮ್ಮ ವಿಷ್ಣುದೇವ ಈ ಹಾಡಿಗೆ ಕೊರಿಯಾಗ್ರಾಫಿ ಮಾಡಿದ್ದಾರಂತೆ. ಈ ಚಿತ್ರದ ಹಾಡಿನ ಫಸ್ಟ್ ಲುಕ್ ಅಷ್ಟೇ.

Share this Story:

Follow Webdunia kannada