Select Your Language

Notifications

webdunia
webdunia
webdunia
webdunia

ಮೌಲಾನ ಅಬುಲ್ ಕಲಾಂ ಅಜಾದ್ ಅಮೀರ್ ಖಾನ್ ನೆಂಟರಂತೆ!

ಮೌಲಾನ ಅಬುಲ್ ಕಲಾಂ ಅಜಾದ್
, ಶುಕ್ರವಾರ, 10 ಜನವರಿ 2014 (11:02 IST)
PR
ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಸ್ವಾತಂತ್ರ ಸಮರದಲ್ಲಿ ಭಾಗಿಯಾಗಿದ್ದ ಮೌಲಾನ ಅಬುಲ್ ಕಲಾಮ್ ಅವರ ಚಿತ್ರವನ್ನು ನಿರ್ಮಿಸುವತ್ತ ನಟ ಅಮೀರ್ ಖಾನ್ ಗಮನ ನೆಟ್ಟಿದ್ದಾರೆ. ಅಬುಲ್ ಕಲಾಮ್ ಅವರು ತನ್ನ ಹತ್ತಿರದ ನೆಂಟರು. ಅವರ ಬದುಕಿನ ಚಿತ್ರಣವನ್ನು ತೆರೆಯ ಮೇಲೆ ತರುವುದಕ್ಕೆ ಗಮನ ನೀಡುತ್ತಿದ್ದೇನೆ ಎನ್ನುವ ಸುದ್ದಿಯನ್ನು ಮಾಧ್ಯದವರ ಮುಂದೆ ಇಟ್ಟಿದ್ದಾರೆ ಅಮೀರ್. ಇವರ ಸಾಧನೆಯ ಚಿತ್ರವನ್ನು ನಿರ್ಮಿಸುವ ಆಸೆ ಬಹಳ ದಿನಗಳಿಂದಲೂ ತನ್ನ ಮನದಲ್ಲಿ ಇದ್ದು, ಈಗ ಅದು ಸಾಕಾರಗೊಳ್ಳುವ ಸಮಯ ಬಂದಿದೆ ಎನ್ನುವ ಮಾತನ್ನು ಹೇಳಿದ್ದಾರೆ ಅಮೀರ್.

ಕೊಲ್ಕತ್ತಾದಲ್ಲಿ ಬುಧವಾರ ನಡೆದ ಕೋಲ್ಕತ್ತಾ ಲಿಟರರಿ ಫೆಸ್ಟಿವಲ್- 2014ರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ಸಂಗತಿ ತಿಳಿಸಿದರು. ಭಾರತಕ್ಕೆ ಸ್ವಾತಂತ್ರ ದೊರಕುವ ಮುನ್ನ ಪ್ರಕಟಗೊಂಡಿದ್ದ ಸಂದರ್ಶನಗಳನ್ನೆಲ್ಲಾ ತಾನು ಓದಿರುವುದಾಗಿ ಹೇಳಿದ್ದಾರೆ ಅಮೀರ್.

ಪ್ರಗತಿಶೀಲ ವ್ಯಕ್ತಿತ್ವ ಹೊಂದಿರುವ ಆ ಮಹಾನ್ ಚೇತನ ಪ್ರತಿಯೊಂದು ಅಂಶಗಳನ್ನು ತಾವು ಚಿತ್ರದ ಮುಖಾಂತರ ತೋರಿಸುವುದಾಗಿ ತಿಳಿಸಿದ್ದಾರೆ ಅಮೀರ್ ಖಾನ್ .

Share this Story:

Follow Webdunia kannada