Publish Date: Sat, 07 Jun 2008 (14:39 IST)
Updated Date: Sat, 07 Jun 2008 (14:24 IST)
ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ಸಲ್ಮಾನ್ ಖಾನ್ ಅಭಿನಯದ ಮೈ ಔರ್ ಮಿಸ್ಟ್ರೆಸ್ ಖನ್ನಾ ಕೆಲ ದಿನಗಳಲ್ಲಿ ತೆರೆಗೆ ಬರಲಿದೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.
ಚಿತ್ರವನ್ನು ಪ್ರಥಮ ಬಾರಿಗೆ ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡ ಪ್ರೇಮ್ ಸೋನಿ ನಿರ್ದೇಶಿಸುತ್ತಿದ್ದು ಸೋಹೆಲ್ ಖಾನ್ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕ್ಯೂಂ ಕೀ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಯಲ್ಲಿ ನಟಿಸಿದ ನಂತರ ಬಹುದಿನಗಳವರೆಗೆ ನಾವಿಬ್ಬರು ಜೊತೆಯಾಗಿ ನಟಿಸಿರಲಿಲ್ಲ. ಆದರೆ ಆ ಅವಕಾಶ ಈಗ ಕೂಡಿ ಬಂದಿದೆ.ನನಗೆ ಚಿತ್ರ ಹಿಟ್ ಆಗುವದೆಂಬ ಭರವಸೆ ಇದೆ ಎಂದು ಕರೀನಾ ಕಪೂರ್ ಹೇಳಿದ್ದಾರೆ.
ಕರೀನಾ ತನ್ನ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಲ್ಲದೇ ತೂಕವನ್ನು ಕೂಡಾ ಅಲ್ಪಮಟ್ಟಿಗೆ ಇಳಿಸಿರುವುದು ಸೈಫ್ ಮೆಚ್ಚುಗೆಗೆ ಕಾರಣವಾಗಿದೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.