"ಮೇರಾ ಭಾರತ್ ಮಹಾನ್" ಈಗ "ಹೀರೋಸ್"
Publish Date: Sat, 10 Nov 2007 (18:36 IST)
Updated Date: Sat, 10 Nov 2007 (18:35 IST)
ಸಮೀರ್ ಖಾನ್ ಅವರ ಮೇರಾ ಭಾರತ್ ಮಹಾನ್ ಹೆಸರಿನ ಚಿತ್ರದ ಹೆಸರನ್ನು ಈಗ ಹೀರೋಸ್ ಎಂದು ಬದಲಾಯಿಸಲಾಗಿದೆ. ಸಲ್ಮಾನ್ ಖಾನ್, ವತ್ಸಲ ಶೇಥ್, ಸನ್ನಿ ಡಿಯೋಲ್, ಬಾಬಿ ಡಿಯೋಲ್, ಮಿಥುನ್ ಚಕ್ರವರ್ತಿ, ಪ್ರೀತಿ ಜಿಂಟಾ ತಾರಾಗಣವಿದೆ. ಚಿತ್ರದ ಟೈಟಲ್ ದಿಢೀರ್ ಬದಲಾಯಿಸಿದ್ದೇಕೆಂದು ಚಿತ್ರನಿರ್ಮಾಪಕ ವಿಕಾಸ್ ಕಪೂರ್ ಅವರನ್ನು ಕೇಳಿದಾಗ ಭಾರತದ ಪ್ರತಿಯೊಂದು ಟ್ರಕ್ ಹಿಂಭಾಗದಲ್ಲಿ ಮೇರಾ ಭಾರತ್ ಮಹಾನ್ ಬರೆದಿದ್ದು, ಅದು ನಮ್ಮ ಪರಿಕಲ್ಪನೆಯಾಗಿತ್ತು,ಆದರೆ ಮೇರಾ ಭಾರತ್ ಮಹಾನ್ ಹೆಸರು ದೇಶಭಕ್ತಿಯ ಚಿತ್ರವೆಂಬ ಭಾವನೆ ಉಂಟುಮಾಡುತ್ತದೆ. ಆದರೆ ಇದು ರಸ್ತೆಪ್ರವಾಸದ ಆಧಾರದ ಮೇಲೆ ಚಿತ್ರೀಕರಿಸಿರುವ ಯುವ ಕಲಾವಿದರ ಚಿತ್ರವಾಗಿದ್ದು ದೇಶಭಕ್ತಿಯ ಕತೆಯಿಲ್ಲ ಎಂದು ನುಡಿದರು.ಹೀರೋಸ್ ಚಿತ್ರ ದೆಹಲಿಯಿಂದ ಚಂಡೀಗಢಕ್ಕೆ ರಸ್ತೆಪ್ರಯಾಣ ಮಾಡುವ ಇಬ್ಬರು ಯುವಕರ ಕತೆ ಆಧರಿಸಿದೆ, ಅವರ ಪ್ರಯಾಣದ ಕಾಲದಲ್ಲಿ ಸಲ್ಮಾನ್, ಪ್ರೀತಿ, ಸೊಹೇಲ್, ಸನ್ನಿ ಮತ್ತು ಬಾಬಿ ಮುಂತಾದ ಪಾತ್ರಗಳೊಂದಿಗೆ ಸಂಪರ್ಕ ಹೊಂದಿದ ಬಳಿಕ ಯುವಕರಲ್ಲಿ ನಾಯಕತ್ವದ ಬೀಜ ಮೊಳೆಯುತ್ತದೆ.ಮೂಲಭೂತವಾಗಿ ಈ ಇಬ್ಬರು ಯುವಕರ ಜೀವನದಲ್ಲಾದ ಪರಿವರ್ತನೆಯ ಕಥೆಯಿಂದ ಇದು ಕೂಡಿದೆ. 2008 ಮೇ 1ರಂದು ಈ ಚಿತ್ರ ಬಿಡುಗಡೆಯಾಗುವುದೆಂದು ನಿರೀಕ್ಷಿಸಲಾಗಿದೆ