ಮೇಡಮ್ ಟುಸಾಡ್ಸ್‌ನಲ್ಲಿ ಸಲ್ಮಾನ್ ಪ್ರತಿಮೆ
Publish Date: Fri, 26 Oct 2007 (19:03 IST)
Updated Date: Fri, 26 Oct 2007 (19:01 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ವಿಶ್ವವಿಖ್ಯಾತ ಸಾರ್ವಜನಿಕ ಆಕರ್ಷಣೆಯ ವಸ್ತುವಾಗಲಿದ್ದಾರೆ. ಲಂಡನ್‌ನ ಮೇಡಮ್ ಟುಸಾಡ್ಸ್‌ನಲ್ಲಿ ಅವರ ಪ್ರತಿಮೆ ವಿಜೃಂಭಿಸಲಿದೆ. ಸಲ್ಮಾನ್ 9 ಜನರ ಸ್ಟಾರ್‌ಗಳನ್ನು ಹಿಂದಕ್ಕಟ್ಟಿ ಮೇಡಮ್ ಟುಸಾಡ್ಸ್ ಸ್ಪರ್ಧೆಯಲ್ಲಿ ಜಯಶಾಲಿಯಾಗಿದ್ದಾರೆ.ಸಲ್ಮಾನ್ ಮಾಧುರಿ ದೀಕ್ಷಿತ್, ಪೃತಿಕ್ ರೋಷನ್, ರಾಣಿ ಮುಖರ್ಜಿ, ಕರಣ್ ಜೋಹರ್, ಕಾಜೋಲ್, ಲತಾ ಮಂಗೇಶ್ಕರ್, ಅಭಿಷೇಕ್ ಬಚ್ಚನ್, ಪ್ರಿಯಾಂಕ ಚೋಪ್ರಾ ಮತ್ತು ಜಾನ್ ಅಭಿರಾಮ್ ಅವರನ್ನು ಸೋಲಿಸಿ ಈ ಪಟ್ಟಕ್ಕೆ ಪಾತ್ರರಾಗಿದ್ದಾರೆ.ಮುಂಬೈನಲ್ಲಿ ಮೇಡಮ್ ಟುಸಾಡ್ಸ್ ಶಿಲ್ಪಿಗಳ ಎದುರು ಕುಳಿತುಕೊಳ್ಳಲು ಸಲ್ಮಾನ್ ಸಿದ್ಧವಾಗುವ ಮೂಲಕ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಐಶ್ವರ್ಯ ರೈ ಸಾಲಿಗೆ ಸೇರಿದ್ದಾರೆ. ಸಲ್ಮಾನ್ ಚಿತ್ರ 2008ರ ವರ್ಷಾರಂಭದಲ್ಲಿ ಉದ್ಘಾಟನೆ ಭಾಗ್ಯ ಕಾಣಲಿದೆ.