ಚಿತ್ರರಂಗದಲ್ಲಿ ಈಗ ಸಿಕ್ಕಾಪಟ್ಟೆ ಸ್ಪರ್ಧೆ. ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು ಅನೇಕ ಬಗೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಚಿತ್ರ ಮಂದಿ. ಈಗ ಬಂದಿರೋ ಸುದ್ದಿ ಏನಂದರೆ ಬಾಲಿವುಡ್ನ ಸೆಕ್ಸ್ ಬಾಂಬ್ ರಾಕಿ ಸಾವಂತ್ ತಮ್ಮ ರಾಕೇಶ್ ಸಾವಂತ್ ತನ್ನ ಸ್ಥಾನ ಗಟ್ಟಿ ಮಾಡಿಕೊಳ್ಳಲು ಟಾಲಿವುಡ್ ಕಡೆಗೆ ಕಣ್ಣು ಹಾಕಿದ್ದಾನೆ. ಆತ ತನ್ನ ಹೊಸ ಚಿತ್ರದಲ್ಲಿ ಮುಮೈತ್ ಖಾನ್ ಗೆ ಅವಕಾಶ ನೀಡಿ ತಾನು ಉದ್ದಾರ ಆಗೋಕೆ ಹೊರಟಿದ್ದಾನೆ.
ಆತನ ಚಿತ್ರದಲ್ಲಿ ಮುಮೈತ್ ಖಾನ್ ಹತ್ರ ಐಟಂ ಸಾಂಗ್ ಮಾಡಿಸಿದ್ದಾನೆ . ಸಾಕಷ್ಟು ಕಾಲದಿಂದ ಅವಕಾಶಗಳು ಇಲ್ಲದೆ ಪರದಾಡಿರುವ ಮುಮೈತ್ ಗೆ ಅವಕಾಶ್ ನೀಡಿ ಆ ಮುಖಾಂತರ ಒಳ್ಳೆಯ ಹೃದಯ ತನ್ನದು ಎಂದು ತೋರುವ ಪ್ರಯತ್ನ ರಾಕೇಶ್ ದಾಗಿದೆ .
ತಮಿಳಿನಲ್ಲಿ ಅಮಾವಾಸ್ಯ ಅನ್ನುವ ಚಿತ್ರದಲ್ಲಿ ಹಿಂದೆ ಮುಮೈತ್ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಳು. ಅದರ ರೀಮೇಕ್ ಆದಿವಾರಂ ಅಮಾವಾಸ್ಯ ಅನ್ನುವ ಹೆಸರಲ್ಲಿ ತೆಲುಗಲ್ಲಿ ತಯಾರು ಮಾಡುತ್ತಿದ್ದಾನೆ ಈ ಪ್ರಯೋಗಶಾಲಿ ರಾಕೇಶ್!
ರಾಕೇಶ್ ಸಾವಂತ್ ನಿರ್ದೇಶನದ ಈ ಚಿತ್ರದಲ್ಲಿ ಜೈ ಆಕಾಶ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಈ ಚಿತ್ರ ಹಾಡಿಗಾಗಿ 40 ಮಂದಿ ಡ್ಯಾನ್ಸರ್ಸ್, 200 ಜೂನಿಯರ್ ಆರ್ಟಿಸ್ಟ್ ಗಳಿದ್ದಾರೆ. ಇದರಲ್ಲಿ ಮುಮೈತ್ ಮುಖ್ಯ ಡ್ಯಾನ್ಸಮ್ಮ.ಈ ಚಿತ್ರದ ಬಿಡುಗಡೆ ಬಳಿಕ ತನಗೆ ಒಳ್ಳೆಯ ಚಾನ್ಸ್ಗಳು ಸಿಗುತ್ತೆ ಅಂತ ನಂಬಿದ್ದಾಳೆ ಮುಮೈತ್.. ಹಾಗೆ ಆಗಲಿ ಎನ್ನುವ ಹಾರೈಕೆ ನಮ್ಮದು !