Article Bollywood Gossips %e0%b2%ae%e0%b3%81%e0%b2%97%e0%b3%81%e0%b2%ae%e0%b3%8d%e0%b2%ae%e0%b2%be%e0%b2%a6 %e0%b2%b8%e0%b2%9c%e0%b3%8d%e0%b2%9c%e0%b2%bf%e0%b2%a6%e0%b3%8d %e0%b2%96%e0%b2%be%e0%b2%a8%e0%b3%8d 107090500018_1.htm

Daily Horoscope

Select Your Language

Notifications

webdunia
webdunia
webdunia
webdunia

ಮುಗುಮ್ಮಾದ ಸಜ್ಜಿದ್ ಖಾನ್

ಸಜ್ಜಿದ್ ಖಾನ್‌ ರೀಮೇಕಾ
IFMIFM
ಎಂದಿನಂತೆ ಜೋಕ್ ಹಾರಿಸುವ, ಜಾಲಿಯಾಗಿ ಕಳೆಯುವ ಸಜ್ಜಿದ್ ಖಾನ್‌ ಅವರ ಹೇಯ್ ಬೇಬಿ ಚಿತ್ರವು ಹಾಲಿವುಡ್‌ ಹಿಟ್ ಚಿತ್ರ "ತ್ರೀ ಮೆನ್ ಅಂಡ್ ಎ ಬೇಬಿ"ಯ ರೀಮೇಕಾ ಎಂದು ಕೇಳಿದ ಕ್ಷಣವೇ ಮುಗುಮ್ಮಾದರು.

ಹೇಯ್ ಬೇಬಿ ಚಿತ್ರವು ಹಾಲಿವುಡ್ ಚಿತ್ರದ ರೀಮೇಕ್ ಎಂಬ ಗುಲ್ಲು ಬಾಲಿವುಡ್ ಅಂಗಳದಲ್ಲಿ ಹರಡಿತ್ತು. "ಖಂಡಿತ, ನನ್ನ ಚಿತ್ರದಲ್ಲೂ ಮೂವರು ಪುರುಷರು ಮತ್ತು ಒಂದು ಮಗುವಿದೆ.ಆದರೆ ಅಷ್ಟಕ್ಕೇ ಹೋಲಿಕೆ ಮುಗಿಯುತ್ತದೆ" ಎಂದು ಅವರು ಬಿಡಿಸಿ ಹೇಳುತ್ತಾರೆ.

ನನ್ನ ಕತೆಯಲ್ಲಿರುವ ಮೂವರು ವ್ಯಕ್ತಿಗಳು ನನ್ನ ನಿಜಜೀವನದ ಪ್ರತಿಬಿಂಬ. ಮೂವರು ಪುರುಷ ಪಾತ್ರಗಳಲ್ಲಿ(ಅಕ್ಷಯ್, ಫರ್ದೀನ್, ರಿತೇಶ್) ನನ್ನ ಅಭ್ಯಾಸ, ಸ್ವಭಾವಗಳನ್ನು ಅಳವಡಿಸಿದ್ದೇನೆ. ಇದು ನೀವು ನೋಡಿದ ಬೇರಾವುದೇ ಚಿತ್ರಗಳಿಗಿಂತ ಭಿನ್ನವಾಗಿದೆ ಎಂದು ಅವರು ಹೇಳುತ್ತಾರೆ.

ಹೇಯ್ ಬೇಬಿಯ ವೈಶಿಷ್ಟ್ಯವೇನಿರಬಹುದು? ಬಾಲಿವುಡ್‌ನ ಮುಖ್ಯ ತಾರೆಯರ ದಂಡೇ(21 ನಟಿಯರು) ಚಿತ್ರದಲ್ಲಿ ನಟಿಸಿರುವುದು. ವಿದ್ಯಾ ಬಾಲನ್ ಮುಖ್ಯ ಪಾತ್ರದಲ್ಲಿದ್ದರೂ ಇನ್ನೂ 20 ನಟಿಯರು ನಾನಾ ಪಾತ್ರಗಳಲ್ಲಿ ವಿಜೃಂಭಿಸಿದ್ದಾರೆ. "ಇಶ್ಕ್ ಮೊಹಬತ್ ಪ್ಯಾರ್ ಕಿ ಬಾತೇನ್ " ಹಾಡಿನ ದೃಶ್ಯದಲ್ಲಿ 14 ನಟಿಯರು ಕಾಣಿಸಿದ್ದಾರೆ.

Share this Story:

Follow Webdunia kannada