Publish Date: Mon, 18 Jun 2007 (13:15 IST)
Updated Date: Mon, 18 Jun 2007 (13:14 IST)
ಗಾಯಕಿ ಅಲಿಶಾ ಚಿನಾಯಿ ಇದೀಗ ಸಿನೆಮಾ ನಟನೆಗೆ ಸಿದ್ಧರಾಗಿದ್ದಾರೆ. ಮನೋಜ್ ತ್ಯಾಗಿ ಅವರ ಹೊಸ ಚಿತ್ರ 'ಮುಂಬೈ ಸೆಲ್ಸಾ'ದಲ್ಲಿ ಅಲಿಶಾ ಪ್ರಮುಖ ಭೂಮಿಕೆಯಲ್ಲಿ ಕಾಣಿಸಲಿದ್ದಾರೆ.
ಪ್ರಸ್ತುತ ಚಿತ್ರವನ್ನು ವಿಕ್ರಂ ಭಟ್ ನಿರ್ಮಿಸುತ್ತಿದ್ದಾರೆ. ವಿಕ್ರಂ ಭಟ್ ಅವರ ಒತ್ತಾಯದಂತೆ ಅಲಿಶಾ ಈ ಚಿತ್ರದಲ್ಲಿ ನಟಿಸುವ ಅವಕಾಶ ಬಂತು ಎಂದು ಆಕೆ ಹೇಳಿದ್ದಾರೆ.
ಚಿತ್ರದ ಪ್ರಾರಂಭ ಗೀತೆಯನ್ನು ಅಲಿಶಾ ಹಾಡಲಿದ್ದು, ಅದ್ನಾನ್ ಸಾಮಿ ಸಂಗೀತ ಸಂಯೋಜಿಸಿದ್ದಾರೆ. ಪ್ರಸ್ತುತ ಹಾಡನ್ನು ಮೂರು ದಿನಗಳಲ್ಲಿ ಮುಗಿಸಲಾಗಿದೆ ಎಂದಿರುವ ಅಲಿಶಾ, ಇದೊಂದು ಏಕವ್ಯಕ್ತಿ ಗೀತೆಯಾಗಿದ್ದರೆ, ಉಳಿದವುಗಳು ಅದ್ನಾನ್ ಅವರೊಂದಿಗೆ ಸೇರಿ ಹಾಡಿದವುಗಳಾಗಿವೆ.
ಮುಂಬೈ ಸೆಲ್ಸಾ ನಿರ್ಮಾಪಕ ವಿಕ್ರಂ ಭಟ್ ತಿಳಿಸಿರುವಂತೆ ಅಲಿಶಾ ಅವರ ನೈಪುಣ್ಯ ಪ್ರದರ್ಶಿಸಿರುವ ಹಾಡನ್ನು ಚಿತ್ರದ ಜಾಹೀರಾತು ಮತ್ತು ಇದರ ವಾಣಿಜ್ಯ ಪ್ರಸಾರಕ್ಕಾಗಿ ದೃಶ್ಯ ಪ್ರಚಾರಕ್ಕೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.