Publish Date: Sat, 20 Oct 2007 (13:18 IST)
Updated Date: Sat, 20 Oct 2007 (13:18 IST)
ಸಲಾಂ ಬಾಂಬೆ ಚಿತ್ರ ನಿರ್ಮಿಸಿ ಖ್ಯಾತಿಯ ಉತ್ತುಂಗಕ್ಕೆ ಏರಿದ ಭಾರತೀಯ ಮೂಲದ ಚಿತ್ರ ನಿರ್ಮಾಪಕಿ ಮೀರಾ ನಾಯರ್ ಅವರು ಚಲನಚಿತ್ರ ರಂಗಕ್ಕೆ ನೀಡಿದ ಕೋಡುಗೆಯನ್ನು ಪರಿಗಣಿಸಿ ಅವರಿಗೆ, ಮುಂದಿನ ತಿಂಗಳು 17ನೇ ಗೋಥಾಮ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ನವಂಬರ್ 27ರಂದು ನಡೆಯಲಿರುವ ಸನ್ಮಾನ ಸಮಾರಂಭದಲ್ಲಿ ಟ್ರಿಬ್ಯುಟ್ ಪ್ರಶಸ್ತಿ ನೀಡಲಾಗುವುದು.
ಚಲನಚಿತ್ರರಂಗದಲ್ಲಿ ಕಲಿಯುವ ವಿದ್ಯಾರ್ಥಿಗಳು ತಮ್ಮ ತರಗತಿಗಳಲ್ಲಿ ಪದೇ ಪದೇ ಸಲಾಂ ಬಾಂಬೆ ಚಿತ್ರದ ಕುರಿತು ಅದ್ಯಯನ ಮಾಡುತ್ತಾರೆ. ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡ ಸಲಾಂ ಬಾಂಬೆ ಕಲೆಯ ದೃಷ್ಟಿಯಿಂದ ಅತ್ಯುತ್ತಮ ಚಿತ್ರ ಎಂದು ಪರಿಗಣಿಸಲಾಗಿದೆ.
ಮಿರಾ ನಾಯರ್ ಅವರು ಚಲನಚಿತ್ರ ನಿರ್ಮಾಣ ಅಲ್ಲದೇ 2003ರಲ್ಲಿ ಮೈಶಾ ಚಲನಚಿತ್ರ ಪ್ರಯೋಗಾಲಯವನ್ನು ಪ್ರಾರಂಭಿಸಿದ್ದು ಪೂರ್ವ ಮತ್ತು ದಕ್ಷಿಣ ಏಷಿಯಾದಲ್ಲಿನ ಚಿತ್ರಕಥೆ ಬರಹಗಾರರು ಮತ್ತು ನಿರ್ದೇಶಕರಿಗೆ ತಮ್ಮ ಪ್ರತಿಭೆಯ ಅನಾವರಣಕ್ಕೆ ಉತ್ತಮ ಅವಕಾಶ ಮಾಡಿಕೊಡುತ್ತಿದ್ದಾರೆ.
ನಾಯರ್ ಅವರು ಭಾರತದಲ್ಲಿ ಏಡ್ಸ್ ಮತ್ತು ಅದರ ಪರಿಣಾಮದ ಕುರಿತು ಸಾಲಾಗಿ ನಾಲ್ಕು ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಾಯರ ಅವರ ಯಶಸ್ವಿ ಚಿತ್ರಗಳಲ್ಲಿ ಮಿಸಿಸಿಪ್ಪಿ ಮಸಾಲಾ ಕೂಡ ಒಂದಾಗಿದ್ದು, ಅಮೇರಿಕದಲ್ಲಿ ನೆಲೆಸಿರುವ ಉಂಗಾಂಡಾ ಮೂಲದ ಭಾರತೀಯ ಕುಟುಂಬದ ಕಥೆಯನ್ನು ಒಳಗೊಂಡಿದೆ.
ಮೀರಾ ನಾಯರ್ ಅವರಿಂದ ಮಾನ್ಸೂನ್ ವೆಡ್ಡಿಂಗ್ ಮತ್ತು ಇತ್ತಿಚೆಗೆ ಟಬು ಅಭಿನಯದ ನೇಮ್ ಸೇಕ್ ಚಿತ್ರಗಳು ತೆರೆಗೆ ಬಂದಿವೆ.