Publish Date: Mon, 30 Jul 2007 (10:44 IST)
Updated Date: Mon, 30 Jul 2007 (10:43 IST)
ಬಾಲಿವುಡ್ ಸೂಪರ್‌ಹಿಟ್ ನಿರೀಕ್ಷೆಯ ಚಿತ್ರ ಕಾಫಿಲ ಹೊಸ ಆಶಯವನ್ನು ಹೊಂದಿರುವಂತೆ ಹೊಸದಾಖಲೆ ನಿರ್ಮಿಸಲಿದೆ. ಭಾರತ ಹಾಗೂ ಪಾಕಿಸ್ತಾನದಲ್ಲಿ ಏಕಕಾಲದಲ್ಲಿ ತೆರೆ ಕಾಣಲಿರುವ ಪ್ರಥಮ ಭಾರತೀಯ ಚಿತ್ರ ಇದಾಗಲಿದೆ.
ಮಾನವ ಕಳ್ಳಸಾಗಣೆ ಇದರಲ್ಲಿರವ ಕಥಾನಕ. ಪ್ರಚಲಿತ ಜಾಗತಿಕ ವಿಷಯವಾಗಿರುವ ಮಾನವ ಕಳ್ಳಸಾಗಣೆಯನ್ನು ಕೇಂದ್ರವಿಷಯವಾಗಿರಿಸಿ ಕಾಫಿಲವನ್ನು ಚಿತ್ರಿಸಲಾಗಿದೆ.
ಆಗಸ್ಟ್ 27ರಿಂದ ಭಾರತ ಹಾಗೂ ಪಾಕಿಸ್ತಾನದಲ್ಲಿ ಕುತೂಹಲಭರಿತವಾಗಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಜಗತ್ತಿನಾದ್ಯಂತ ಇದೇ ದಿನ ತೆರೆಕಾಣಲಿರುವುದು ಇನ್ನೊಂದು ಸಮಾಚಾರ.
ಕಾಫಿಲದ ತಾರಾಗಣದಲ್ಲಿ ಸನ್ನಿಡಿಯೋಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಇತರರೆಂದರೆ ಮೊನಲಿಸಾ, ಸಾನಾ ನವಾಝ್, ಪೊಲಿನಾ ಸ್ಟೋಯಿನೋವಾ ಮುಂತಾದವರಾಗಿದ್ದಾರೆ.
ಕಾಫಿಲ ಸಿನಿಮಾವನ್ನು ಭಾರತ ಹಾಗೂ ಪಾಕಿಸ್ತಾನದಲ್ಲಿ ಏಕಕಾಲದಲ್ಲಿ ದಾಖಲೆ ಬಿಡುಗಡೆಮಾಡಲು ನ್ಯಾಯಾಲಯವೂ ಅನುಮತಿ ನೀಡಿದೆ. ಜುಲೈ 27ರಿಂದ ಪಾಕ್ ಥಿಯೇಟರ್‌ಗಳಲ್ಲಿ 21 ಟ್ರೈಲರ್‌ಗಳನ್ನು ಹರಿದುಬಿಡಲಾಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಚಿತ್ರತಂಡದ ಅಮ್ತೋಜ್ ಮಾನ್.