ಮಾಧ್ಯಮದವರ ಮೇಲೆ ಕತ್ರಿನಾ ಮುನಿಸು
Publish Date: Mon, 05 Aug 2013 (09:41 IST)
Updated Date: Mon, 05 Aug 2013 (09:40 IST)
ನಟಿ ಕತ್ರಿನಾ ಕೈಫ್ ರಣಬೀರ್ ಜೊತೆ ಸ್ಪೇನ್ನ ಇಬಿಜಾದಲ್ಲಿ ಹಾಲಿಡೇ ಕಳೆಯಲು ಹೋಗಿದ್ದು ಪತ್ರಿಕೆಗಳಲ್ಲಿ ಪ್ರಕಟವಾಯಿತು. ಜೊತೆಗೆ ಅವರಿಬ್ಬರ ಹಾಟ್ ಹಾಟ್ ಚಿತ್ರಗಳೂ ಪ್ರಕಟವಾದವು. ಕತ್ರಿನಾ ಕೈಫ್ ಅಲ್ಲಿನ ಬೀಚ್ಗಳಲ್ಲಿ ಬಿಕಿನಿ ಡ್ರೆಸ್ ತೊಟ್ಟ ಚಿತ್ರ ಭಾರೀ ಸೆನ್ಸೇಷನ್ ಸೃಷ್ಟಿಸಿದ್ದೂ ಆಯಿತು. ಈ ಚಿತ್ರಗಳು ಪ್ರಕಟವಾದ ಪತ್ರಿಕೆಗಳ ಮೇಲೆ ಕತ್ರಿನಾ ಸಖತ್ ಬೇಜಾರು ಮಾಡಿಕೊಂಡಿದ್ದಾರಂತೆ. ತಮ್ಮ ಖಾಸಗಿ ಬದುಕಿನ ಬಗ್ಗೆ ಬರೆಯುವ ಹಾಗೂ ವರದಿ ಮಾಡುವ ಪತ್ರಿಕೆಗಳ ಮೇಲೆ ಕೈಫ್ ಬಹಿರಂಗವಾಗಿ ಅಸಮಾಧಾನ ತೋರಿದ್ದಾರೆ. ಹೀಗಾಗಿ ಅವರು ಮಾಧ್ಯಮಗಳಿಗೆ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಫಿಲಂ ಮ್ಯಾಗಜಿನ್ನಲ್ಲಿ ನನ್ನ ಚಿತ್ರವನ್ನು ಅನುಮತಿಯಿಲ್ಲದೆ ಮುದ್ರಿಸಿರುವುದು ಅತಿಕ್ರಮಣವಾಗಿದೆ. ಇದರಿಂದ ನನಗೆ ಸಿಕ್ಕಾಪಟ್ಟೆ ಬೇಜಾರಾಗಿದೆ. ಹಾಲಿಡೇ ಕಳೆಯಲೆಂದು ಹೋದಾಗ ನನ್ನ ಚಿತ್ರವನ್ನು ಅನುಮತಿ ಇಲ್ಲದೆ ತೆಗೆಯಲಾಗಿದೆ. ಬಳಿಕ ಅದನ್ನು ಕಮರ್ಷಿಯಲ್ ಪರ್ಪಸ್ಗಾಗಿ ಬಳಸಿಕೊಳ್ಳಲಾಗಿದೆ. ಇದು ನಿಜಕ್ಕೂ ಹೇಡಿತನದ ದೃಶ್ಯ ಎಂದು ಬರೆದುಕೊಂಡಿದ್ದಾರೆ. ಪತ್ರಿಕೋದ್ಯಮ ಗೌಪ್ಯತೆ ಮತ್ತು ಸಭ್ಯತೆಯ ಮೇರೆ ಮೀರುತ್ತಿದೆ. ಸೆಲೆಬ್ರಿಟಿಗಳಿಗೂ ಖಾಸಗಿ ಬದುಕು ಇರುತ್ತದೆ ಎಂಬುದು ಅವರಿಗೆ ನೆನಪಿರಬೇಕು. ಇಂತಹ ಚಿತ್ರಗಳನ್ನು ಪ್ರಕಟಿಸುವ ಮುನ್ನ ನಟಿಯರನ್ನು ಒಂದು ಬಾರಿ ಕೇಳುವ ಪ್ರವೃತ್ತಿ ಬೆಳೆಯಬೇಕು. ನಾನು ಮಾಧ್ಯಮದವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ಈ ರೀತಿಯ ಆಕ್ರಮಣಕಾರಿ ವರದಿ ಬರೆಯುವ ಅಗತ್ಯವಿರಲಿಲ್ಲ ಎಂದು ಪತ್ರದಲ್ಲಿ ಕರೀನಾ ಬರೆದಿದ್ದಾರೆ.