Article Bollywood Gossips %e0%b2%ae%e0%b2%be%e0%b2%a7%e0%b3%81%e0%b2%b0%e0%b2%bf %e0%b2%a6%e0%b3%80%e0%b2%95%e0%b3%8d%e0%b2%b7%e0%b2%bf%e0%b2%a4%e0%b3%8d %e0%b2%a4%e0%b2%82%e0%b2%a6%e0%b3%86 %e0%b2%b6%e0%b2%82%e0%b2%95%e0%b2%b0%e0%b3%8d %e0%b2%87%e0%b2%a8%e0%b2%bf%e0%b2%b2%e0%b3%8d%e0%b2%b2 113091600006_1.htm

Daily Horoscope

Select Your Language

Notifications

webdunia
webdunia
webdunia
webdunia

ಮಾಧುರಿ ದೀಕ್ಷಿತ್ ತಂದೆ ಶಂಕರ್ ಇನಿಲ್ಲ

ಮಾಧುರಿ ದೀಕ್ಷಿತ್
PR
ಬಾಲಿವುಡ್ನ ಪ್ರಸಿದ್ದ ತಾರೆ ಮಾಧುರಿ ದೀಕ್ಷಿತ್ ಅವರ ತಂದೆ ಶಂಕರ್ ದೀಕ್ಷಿತ್ ಅವರು ನಿಧನರಾಗಿದ್ದಾರೆ. ಸುದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ಮುಂಜಾನೆ ಸಾವನ್ನಪ್ಪಿದ್ದಾರೆ. ಮಾಧುರಿ ಅವರು ಕಲರ್ಸ್ ವಾಹಿನಿಯ ಝಲಕ್ ದಿಖಲ್ ಆಜಾ ಡಾನ್ಸ್ ರಿಯಾಲಿಟಿ ಶೋ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ವೇಳೆ ಈ ಸುದ್ದಿ ಬಂದಿದೆ. ಆ ಕೂಡಲೆ ಅವರು ಶೋದಿಂದ ನಿರ್ಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಮಾಧುರಿ ಅನುಪಸ್ಥಿತಿಯಲ್ಲಿ ಪ್ರಿಯಾಂಕಾ ಚೋಪ್ರಾ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಚಿತ್ರೀಕರಣ ಮತ್ತೂ ಮುಂದುವರೆಯಬೇಕಿತ್ತು. ಆದರೆ ತೀರ್ಪುಗಾರರ ತಂದೆಯ ದಿಢೀರ್ ನಿಧನದಿಂದ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದೇವೆ. ಫೈನಲ್ನ ಅರ್ಧದಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಇನ್ನುಳಿದ ಅರ್ಧಭಾಗದ ಚಿತ್ರೀಕರಣ ನಡೆಯಬೇಕಿದೆ ಎಂದು ಕಲರ್ಸ್ ವಾಹಿನಿ ಮೂಲಗಳು ತಿಳಿಸಿವೆ. ಹೇ ದಿವಾನಿ ಹೈ ಜವಾನಿ ಚಿತ್ರದಲ್ಲಿ ಸ್ಪೆಷಲ್ ನಂಬರ್ಗೆ ಮಾಧುರಿ ಹೆಜ್ಜೆ ಹಾಕಿದ್ದರು. ಸದ್ಯ ಗುಲಾಬ್ ಗ್ಯಾಂಗ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಮಾಧುರಿಗೆ ತಂದೆಯ ನಿಧನದ ನೋವು ತುಂಬುವ ಶಕ್ತಿ ಸಿಗಲಿ ಎಂಬುದು ಎಲ್ಲರ ಹಾರೈಕೆ.

Share this Story:

Follow Webdunia kannada