Select Your Language

Notifications

webdunia
webdunia
webdunia
webdunia

ಮಾಕ್ಸಿಮ್ ಮ್ಯಾಗಜೀನ್ನಲ್ಲಿ ಗ್ಲಾಮರಸ್ ಅಮೀಷಾ ಪಟೇಲ್

ಮಾಕ್ಸಿಮ್
ಮುಂಬೈ , ಸೋಮವಾರ, 31 ಮಾರ್ಚ್ 2014 (15:24 IST)
ಅಮೀಷಾ ಪಟೇಲ್ ಗ್ರಹಾಚಾರ ಯಾಕೋ ನೆಟ್ಟಗಿದ್ದಂತಿಲ್ಲ, ಯಾವುದೇ ಚಿತ್ರದಲ್ಲಿ ಅತ್ಯುತ್ತಮ ಎನ್ನುವ ಪಾತ್ರಗಳು ಕೈಗೆ ಸಿಗುತ್ತಿಲ್ಲ. ಹಾಗೆಂದು ಚಿತ್ರರಂಗದಿಂದ ದೂರ ಸರಿಯಲೂ ಅವರಿಗಿಷ್ಟವಿಲ್ಲ. ಹಾಗಾಗಿ ಹಾಟ್ ಎನಿಸುವಂತಹ ಚಿತ್ರಗಳಲ್ಲಿ ಕಾಣಿಸಿಕೊಂಡು ಮತ್ತೊಮ್ಮೆ ತಮ್ಮ ಚೆಲುವನ್ನು ಪ್ರೂವ್ ಮಾಡಲು ಹೊರಟಿದ್ದಾರೆ. ಈ ಬಾರಿ ಅವರು ಮಾಕ್ಸಿಮ್ ಎಂಬ ನಿಯತಕಾಲಿಕೆಯನ್ನು ತಮ್ಮ ಸೌಂದರ್ಯ ಪ್ರದರ್ಶನಕ್ಕೆ ತೆರೆದಿಟ್ಟಿದ್ದಾರೆ.

ಮಾಕ್ಸಿಮ್ ನಿಯತಕಾಲಿಕೆಯ ಕವರ್ಪೇಜ್ ಅಲಂಕರಿಸುವುದು ಬಾಲಿವುಡ್ ತಾರೆಯರಿಗೆ ಹೆಮ್ಮೆಯ ಸಂಗತಿಯೂ ಹೌದು. ಈ ಮ್ಯಾಗಜಿನ್ನಲ್ಲಿ ಅಮಿಷಾ ಕಾಣಿಸಿಕೊಳ್ಳುತ್ತಿರುವುದು ಇದು ಮೂರನೇ ಬಾರಿ.
ದಾಬೂ ರತ್ನಾನಿ ಈ ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ. ಬ್ಲ್ಯಾಕ್ ಗೌನ್ನಲ್ಲಿ ಕಂಗೊಳಿಸುತ್ತಿರುವ ಅಮೀಷಾ ಅವರ ವಿವಿಧ ಭಂಗಿಗಳನ್ನು ಈ ಕ್ಯಾಮೆರಾ ಸೆರೆಹಿಡಿದಿದೆ. ಬಾಲಿವುಡ್ನಲ್ಲಿ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಪತ್ರಿಕೆಗಳಿಗೆ ಇಂತಹ ಫೋಸ್ ನೀಡುವುದು ಇದು ಮೊದಲ ಬಾರಿಯಲ್ಲ. ಹಾಗಾಗಿ ಮಾಕ್ಸಿಮ್ ಪತ್ರಿಕೆಯೂ ಅಮಿಷಾಗೆ ಮತ್ತೊಮ್ಮೆ ಮಣೆ ಹಾಕಿದೆ. ತಾನು ಮೂರನೇ ಬಾರಿ ಈ ಮ್ಯಾಗಜಿನ್ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.

ಹಾಗಾಗಿ ಅಭಿಮಾನಿಗಳಿಗೂ ನಿರೀಕ್ಷೆ ಹೆಚ್ಚಿರುತ್ತದೆ. ಫೊಟೋ ಶೂಟ್ ವೇಳೆ ಉತ್ತಮ ಅನುಭವ ಸಿಕ್ಕಿತು ಎಂದಿದ್ದಾರೆ ಅಮೀಷಾ. ಹೃತಿಕ್ ರೋಷನ್ ಅಭಿನಯದ ಕಹೋ ನಾ ಪ್ಯಾರ್ ಹೈ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ಈ ಚೆಲವೆ ಭರ್ಜರಿ ಆರಂಭವನ್ನೇ ಪಡೆದಿದ್ದರು. ಗದರ್ ಏಕ್ ಪ್ರೇಮ್ ಕಹಾನಿ, ಅಂಕಹೀ ಚಿತ್ರಗಳೂ ಅವರಿಗೆ ಹೆಸರು ತಂದುಕೊಟ್ಟಿತು. ಬಳಿಕ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದರೂ ಜನ ಅವರಿಗೆ ಕ್ಯಾರೇ ಅನ್ನಲಿಲ್ಲ. ಇದೀಗ ಅವರದ್ದೇ ಆದ ನಿರ್ಮಾಣ ಸಂಸ್ಥೆಯನ್ನೂ ಹುಟ್ಟುಹಾಕಿಕೊಂಡಿದ್ದಾರೆ. ಇದೀಗ ದೇಸೀ ಮ್ಯಾಜಿಕ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಅಮಿಷಾ ಇಲ್ಲಾದರೂ ಗೆಲುವು ಸಾಧಿಸುತ್ತಾರೋ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada