ಮಹೇಶ್ ಬಾಬು ಡಲ್ ಆಗಿದ್ದಾರೆ !
Publish Date: Sat, 02 Nov 2013 (14:51 IST)
Updated Date: Sat, 02 Nov 2013 (14:50 IST)
ಸಾಮಾನ್ಯವಾಗಿ ಪ್ರಿನ್ಸ್ ಮಹೇಶ್ ಬಾಬು ಯಾವಾಗ ಜನರ ಮುಂದೆ ಬಂದರು ಸಪ್ಪೆಯಾಗಿ ಇರದೇ ತುಂಬಾ ಪ್ರೆಶ್ ಆಗಿ ಇರ್ತಾರೆ. ಆದರೆ ಅದ್ಯಾಕೋ ಈ ಬಾರಿ ಅವರು ಅಷ್ಟೊಂದು ಲವಲವಿಕೆಯಿಂದ ಇರಲಿಲ್ಲ. ಜ್ವರಗಿರ ಬಂದಿದೆಯೇನೋ ಎಂದು ನೀವು ತಿಳಿದರೆ ನಿಮ್ಮ ಊಹೆ ತಪ್ಪು. ಅವರು ಈಗ ಒನ್ ಚಿತ್ರದ ಶೂಟಿಂಗ್ ನಲ್ಲ್ಲಿ ಬ್ಯುಸಿ. ಅದಕ್ಕಾಗಿ ಅವರು ಸಿಕ್ಸ್ ಪ್ಯಾಕ್ ತಯಾರಿಯಲ್ಲಿದ್ದಾರೆ. ಅಂದ್ರೆ ಆ ಚಿತ್ರದಲ್ಲಿ ಬಾಡಿ ಮ್ಯಸನ್ ಆಗಿ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ ಪ್ರಿನ್ಸ್ ಹಿಂದೆ ಜೂ. ಎನ್ಟಿಆರ್ , ಸುನಿಲ್ ಈ ರೀತಿ ಪ್ರಯತ್ನ ಮಾಡಿ ಮುಖದಲ್ಲಿ ನೆರಿಗೆ ಬಾರಿಸಿಕೊಂಡ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಆದರೆ ಕೆಲವು ಬಗೆಯ ಸಾಹಸಗಳನ್ನು ಮಾಡದೆ ಇರೋಕೆ ಸಾಧ್ಯ ಇಲ್ಲ ಅಲ್ವ.. ಪ್ರಿನ್ಸ್ ಸಹ ಅದೇರೀತಿ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಇದಕ್ಕೂ ಮುನ್ನ ಖಲೆಜಾ ದಲ್ಲೂ ಸಹ ಈ ಪ್ರಯತ್ನ ಮಾಡಿದ್ದಾರೆ ಮಹೇಶ್ . ಈಗ ಸುಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಒನ್ ಚಿತ್ರದಲ್ಲೂ ಸಹ ಬಾಡಿ ತೋರಿಸಲು ಹೊರಟಿದ್ದಾರೆ. ಅದಕ್ಕೆ ಪಾಪ ಡಲ್ ಆಗಿರೋದು !