Article Bollywood Gossips %e0%b2%ae%e0%b2%b9%e0%b2%bf%e0%b2%ae%e0%b2%be %e0%b2%9a%e0%b3%8c%e0%b2%a7%e0%b2%b0%e0%b2%bf%e0%b2%97%e0%b3%86 %e0%b2%b9%e0%b3%86%e0%b2%a3%e0%b3%8d%e0%b2%a3%e0%b3%81 %e0%b2%ae%e0%b2%97%e0%b3%81 107061100024_1.htm

Daily Horoscope

Select Your Language

Notifications

webdunia
webdunia
webdunia
webdunia

ಮಹಿಮಾ ಚೌಧರಿಗೆ ಹೆಣ್ಣು ಮಗು

ಬಾಲಿವುಡ್
IFM
ಬಾಲಿವುಡ್‌ ತಾರೆ ಮಹಿಮಾ ಚೌಧರಿ ಅಮ್ಮ ಆಗಿದ್ದಾರೆ. ಇದು ಯಾವುದೊ ಹೊಸ ಚಿತ್ರದ ವಿಷಯವಲ್ಲ. ಆಕೆಯ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.

ಭಾನುವಾರ ಬೆಳಗ್ಗೆ ಮಹಿಮಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ಸುಮಾರು 7 ಪೌಂಡುಗಳಷ್ಟು ಭಾರದ ಮಗುವಿನ ಜನನವಾಗಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ.

ಮಹಿಮಾ ಗುಟ್ಟಾಗಿ ವಿವಾಹವಾಗಿದ್ದರಲ್ಲದೆ, ಬಸುರಿಯಾಗುವ ವರೆಗೂ ವಾರ್ತಾಮಾಧ್ಯಮಗಳಿಗೆ ಮಾಹಿತಿಯೇ ಇರಲಿಲ್ಲ. ಅಷ್ಟೊಂದು ಗಪ್‌ಚುಪ್‌ ವ್ಯವಹಾರ ಈಕೆಯದು. ವಾಸ್ತುತಯಾರಕರಾದ ಬಾಬ್ಬಿ ಮುಖಱಜಿ ಈಕೆಯ ಪತಿ.

ಬಾಬ್ಬಿಗೆ ಈ ಮೊದಲೇ ವಿವಾಹವಾಗಿದೆ. ಮೊದಲ ವಿವಾಹದ ಎರಡು ಮಕ್ಕಳೂ ಇವೆ. ಆತ ಮಹಿಮಾ ಅವರ ಸೋದರನ ಗೆಳೆಯ ಎಂಬುದು ಇಲ್ಲಿನ ವಿಶೇಷ. ಆದರೆ 'ತಾಯಿ'ಯಾದ ವಿಷಯ ರಹಸ್ಯವಾಗಿಟ್ಟಿಲ್ಲ.

ಕೊನೆಯ ಸಿನಿಮಾ 'ಸರಹದ್‌ ಪಾರ್‌' ಚಿತ್ರದಲ್ಲಿ ನಟಿಸಿದ ಬಳಿಕ ಖಾಸಗಿ ಬದುಗಿನೊಳಗೆ ಹುದುಕಿಕೊಂಡಿದ್ದ ಮಹಿಮಾ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.

Share this Story:

Follow Webdunia kannada