Select Your Language

Notifications

webdunia
webdunia
webdunia
webdunia

ಮಲ್ಲಿಕಾಗೆ ಹುಡುಗ ಸಿಕ್ಕಿದ್ದಾನೆ, ಅವನೇ ಬಾಳಸಂಗಾತಿ!

ಮಲ್ಲಿಕಾ ಶರಾವತ್
, ಸೋಮವಾರ, 31 ಮಾರ್ಚ್ 2014 (18:54 IST)
ಬಾಲಿವುಡ್ ಸೆಕ್ಸ್ ಬಾಂಬು ಮಲ್ಲಿಕಾ ಶರಾವತ್ ಮನಸ್ಸನ್ನು ಅಂತೂ ಇಂತೂ ಒಬ್ಬ ಗೆದ್ದಿದ್ದಾನೆ. ಹೌದು ಕಣ್ರೀ ಆಕೆ ಮನವನ್ನು ಒಬ್ಬ ಚೆಲುವ ಸೂರೆಗೊಂಡು ಅವನನ್ನೇ ಬಾಳ ಸಂಗಾತಿ ಆಗಿ ಮಾಡಿಕೊಳ್ಳಬೇಕು ಎಂದು ನಿರ್ಧಾರಕ್ಕೆ ಬರುವಂತೆ ಮಾಡಿದ್ದಾನೆ. ಆತನೇ ವಿಜಯ್ ಸಿಂಗ್ . 24 ವರ್ಷದ ವಿಜಯ್ ಸಿಂಗ್ ಅನ್ನುವ ಮಾಡೆಲ್ ಧರ್ಮಶಾಲಾ ಕ್ಕೆ ಸೇರಿದವ. ಲೈಫ್ ಓಕೆ ಯಲ್ಲಿ ಪ್ರಸಾರ ಆಗುತ್ತಿರುವ ಬ್ಯಾಚುಲರೆಟ್ ಇಂಡಿಯ -ಮೇರೆ ಖಯಾಲೊಂಕಿ ರಿಯಾಲಿಟಿ ಷೋ ನಲ್ಲಿ ಮಲ್ಲಿಕಾ ಶರಾವತ್ ಗಂಡು ಹುಡುಕ್ತಾ ಇರೋ ಕಥೆ ಎಲ್ಲರಿಗೂ ಗೊತ್ತೇ ಇದೆ. ಯಾರು ಈಕೆ ಮನಕ್ಕೆ ಕನ್ನ ಹಾಕಬಹುದು ಎಂದು ಚಿಂತಿಸುತ್ತಾ ಕೂತಿದ್ದ ರಸಿಕ ಮಣಿ ಗಳಿಗೆ ಒಂದು ಸುದ್ದಿ.. ಮಲ್ಲಿಕ ಅನ್ನೋ ಮಾಗಿದ ಹಣ್ಣು ಯಾರು ತಿನ್ನ ಬಹುದು ?! ಅನ್ನೋ ಪ್ರಶ್ನೆಗೆ ಈಗ ಉತ್ತರ ದೊರೆತಿದೆ.

ನಿನ್ನನ್ನು ಸಂತೋಷವಾಗಿ ಇಡುವುದಕ್ಕೆ ಏನು ಮಾಡಬೇಕೋ ಅದನ್ನು ಮಾಡ್ತೀನಿ ಎಂದು ಹೇಳಿ ಆಕೆ ಮನ ಗೆದ್ದಿದ್ದಾನೆ. ತನಗಿಂತ ತುಂಬಾ ಚಿಕ್ಕವನಾದ ಈ ಹುಡುಗ ಎಷ್ಟು ಹೃದಯವಂತ ಎಂದು ತಿಳಿದು ಮಲ್ಲಿ ಆತನಿಗೆ ತನ್ನ ಕೊರಳನ್ನು ಒಡ್ಡಲು ಸಿದ್ಧ ಆಗಿದ್ದಾಳೆ. ಆ ಕಾರ್ಯಕ್ರಮದಲ್ಲಿ ಅಂತಿಮ ಸುತ್ತಿಗೆ ಇಬ್ಬರು ಮಾತ್ರ ಬಂದಿದ್ದರು.

ಅಭಿಷೇಕ್ ಸೇಥಿ ಸಾಫ್ಟ್ವೇರ್ ಇಂಜಿನೀರ್ ಹಾಗೂ ವಿಜಯ್ ಸಿಂಗ್ ಮಾಡೆಲ್ . ಇವರಿಬ್ಬರೇ ಕೊನೆ ಸುತ್ತಿನ ತನಕ ಉಳಿದಿದ್ದು. ಆರಂಭದಿಂದಲೂ ಮಲ್ಲಿಕಾಳ ಮನ ಈತ ಗೆಲ್ಲುತ್ತಲೇ ಬಂದಿದ್ದ. ಅಂತಿಮವಾಗಿ ಆಕೆಯ ಮನೆಗೆ ಅಧಿಕಾರವಾಗಿ ಪ್ರವೇಶ ಪಡೆಯುವ ಹಕ್ಕು ಪಡಿತ್ತಾ ಇದ್ದಾನೆ.ಅಂತೂ ಮಲ್ಲಿಕಾ ಒಂದು ಕಡೆ ಸ್ಥಿರವಾಗಿ ನಿಲ್ಲೋ ಕಾಲ ಬಂತು !

Share this Story:

Follow Webdunia kannada