Article Bollywood Gossips %e0%b2%ae%e0%b2%b2%e0%b3%8d%e0%b2%b2%e0%b2%bf%e0%b2%95%e0%b2%be %e0%b2%a6%e0%b2%bf%e0%b2%b5%e0%b2%be%e0%b2%a8%e0%b2%be %e0%b2%ae%e0%b2%b0%e0%b2%a1%e0%b3%8b%e0%b2%a8%e0%b2%be 108121600049_1.htm

Select Your Language

Notifications

webdunia
webdunia
webdunia
webdunia

ಮಲ್ಲಿಕಾ 'ದಿವಾನಾ' ಮರಡೋನಾ

ಮಲ್ಲಿಕಾ ಶೆರಾವತ್
IFM
ಹಾಟ್ ಮತ್ತು ಸೆಕ್ಸಿ ಮಲ್ಲಿಕಾ ಶೆರಾವತ್ ಇತ್ತೀಚಿನ ದಿನಗಳಲ್ಲಿ ಬಹಳ ಖುಷಿಯಾಗಿದ್ದಾರೆ. 'ಅಗ್ಲಿ ಅರ್ ಪಗ್ಲಿ' ಮತ್ತು 'ಮಾನ್ ಗಯೇ ಮುಗ್ಲಿಯಾಜಂ'ನಂತಹ ಫ್ಲಾಪ್ ಚಿತ್ರಗಳನ್ನೂ ನೀಡಿಯೂ ಮಲ್ಲಿಕಾ ಏಕೆ ಖುಷಿಯಾಗಿದ್ದಾಳೆ ಅಂದಿರಾ ?, ಇದಕ್ಕೆ ಕಾರಣ ಡಿಯೊಂಗ್ ಮರಡೋನಾ.

ಇತ್ತೀಚಿಗಷ್ಟೇ ಪುಟ್ಬಾಲ್ ದಂತಕತೆ ಮರಡೋನಾ ಭಾರತಕ್ಕೆ ಭೇಟಿ ನೀಡಿದ್ದಾಗ ಅವರಲ್ಲಿ ಇಷ್ಟದ ಭಾರತೀಯ ನಟಿಯ ಬಗ್ಗೆ ಪ್ರಶ್ನಿಸಲಾಯಿತು, ಮರಡೋನಾಗೆ ಭಾರತೀಯ ಚಿತ್ರರಂಗದ ಬಗ್ಗೆ ಹೆಚ್ಚೇನು ತಿಳಿದಿರಲಿಲ್ಲ ಆದರೆ ಅವರು ತಮಗೆ ಮಲ್ಲಿಕಾ ಶೇರಾವತ್ ಬಗ್ಗೆ ತಿಳಿದಿದೆ ಎಂದರು.

ಈ ವಿಷಯ ಮಲ್ಲಿಕಾ ಕಿವಿಗೆ ಬಿದ್ದಾಗ ಅವರ ಖುಷಿಗೆ ಪಾರವೇ ಇರಲಿಲ್ಲ. ಫುಟ್ಬಾಲ್‌ನ ಮಹಾನ್ ಆಟಗಾರರಿಗೆ ತಮ್ಮ ಬಗ್ಗೆ ತಿಳಿದಿದೆ ಎಂಬ ಬಗ್ಗೆ ಅವರಿಗೆ ನಂಬಿಕೆಯೇ ಹುಟ್ಟಲಿಲ್ಲವಂತೆ. ಐಶ್ವರ್ಯಾ, ಪ್ರಿಯಾಂಕರಂತಹ ಚರ್ಚಿತ ಸುಂದರಿಯರ ಬದಲಾಗಿ ಮರಡೋನಾ ಮಲ್ಲಿಕಾ ಹೆಸರು ಹೇಳಿದ್ದರು.

ಮಲ್ಲಿಕಾ, ಸುತ್ತಮುತ್ತಲಿನ ವ್ಯಕ್ತಿಗಳು ಹೇಳುವಂತೆ ಅವರ ಚಿತ್ರಗಳು ಯಶಸ್ವಿಯೆನಿಸದಿದ್ದರೂ ಪ್ರಸಿದ್ಧಿಯಲ್ಲಿ ಕೊರತೆಯಿಲ್ಲ. ಚೆನ್‌ರ ನಂತರ ಈಗ ಮರಡೋನಾರೂ ಮಲ್ಲಿಕಾ ಹೆಸರು ಹೇಳುವ ಮೂಲಕ ಇದು ಸಾಬೀತಾಗಿದೆ.

ಪ್ರಸ್ತುತ ಮಲ್ಲಿಕಾ 'ಹಿಸ್ಸಾ' ಚಿತ್ರದ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಮತ್ತು ಯಶಸ್ವಿ ಚಿತ್ರ ನೀಡಿ ಟೀಕಾಕಾರರ ಬಾಯಿಮುಚ್ಚಿಸುವ ಯತ್ನದಲ್ಲಿದ್ದಾರೆ.

Share this Story:

Follow Webdunia kannada