Article Bollywood Gossips %e0%b2%ae%e0%b2%b0%e0%b2%b3%e0%b2%bf %e0%b2%af%e0%b2%a4%e0%b3%8d%e0%b2%a8%e0%b2%b5 %e0%b2%ae%e0%b2%be%e0%b2%a1%e0%b3%81%e0%b2%b5 %e0%b2%9c%e0%b3%86%e0%b2%aa%e0%b2%bf 107100400019_1.htm

Select Your Language

Notifications

webdunia
webdunia
webdunia
webdunia

ಮರಳಿ ಯತ್ನವ ಮಾಡುವ ಜೆಪಿ

ಜೆಪಿ
ಮೂವಿ ಮೊಗಲ್ ಜೆ.ಪಿ.ದತ್ತಾಗೆ ಅಕ್ಟೋಬರ್ 3ರಂದು ಇನ್ನೊಂದು ವರ್ಷ ತುಂಬಿತು. ಕುಟುಂಬ ಮತ್ತು ಸಹೋದ್ಯೋಗಿಗಳ ಜತೆಯಲ್ಲಿ ಆ ದಿನವನ್ನು ಕಳೆದರು. ಆದರೆ ಜೆಪಿಗೆ ಅಭಿನಂದನೆ ಸಲ್ಲಿಸಲು ಸಾಮಾನ್ಯವಾಗಿ ಕಂಡುಬರುವ ರಷ್ ಆ ದಿನ ಕಾಣಲಿಲ್ಲ. ಆದರೆ ಜೆಪಿ ಅಷ್ಟರಲ್ಲೇ ಸಂತೃಪ್ತರಾಗಿದ್ದಾರೆ,

ಇಂತಹ ವ್ಯಕ್ತಿತ್ವ ನಿರ್ಮಾಣ ಮಾಡಿದ ಗತಜೀವನ ಮತ್ತು ಅನುಭವಗಳತ್ತ ನಮ್ಮ ವಯಸ್ಸಿನಲ್ಲಿ ಹಿಂತಿರುಗಿ ನೋಡುತ್ತೇವೆ ಎಂದು ಜೆಪಿ ತಮ್ಮ ಹುಟ್ಟುಹಬ್ಬದ ದಿನ ಅನಿಸಿಕೆ ವ್ಯಕ್ತಪಡಿಸಿದರು.

ನಿಮ್ಮ ತಂದೆ ಒ.ಪಿ.ದತ್ತಾ ರೀತಿಯಲ್ಲಿ ಆತ್ಮಕಥೆ ಬರೆಯುತ್ತೀರಾ ಎಂದು ಪ್ರಶ್ನಿಸಿದಾಗ, ಅವಕಾಶವೇ ಇಲ್ಲ. ಮೊದಲನೆಯದಾಗಿ ನನ್ನ ತಂದೆಯಂತೆ ಬರವಣಿಗೆ ಕೌಶಲ್ಯ ನನಗಿಲ್ಲ. ಎರಡನೆಯದಾಗಿ ನಾನು ಅವರಷ್ಟು ಪ್ರಾಮಾಣಿಕನೂ ಅಲ್ಲ ಎಂದು ಹೇಳುತ್ತಾರೆ.

ಜೆಪಿಯ ಪ್ರಾಮಾಣಿಕ ನುಡಿಯೇನೆಂದರೆ ಅವರು ಹೊಸ ಚಿತ್ರ ನಿರ್ಮಾಣಕ್ಕೆ ಹೊರಟಿರುವುದು. ಬಹುಶಃ ಅನುಪಮ್ ಖೇರ್ ಪುತ್ರ ಸಿಕಂದರ್ ಅದರಲ್ಲಿ ನಟಿಸಬಹುದು. "ನಿಮಗೆ ಜೆಪಿ ಬಹಳ ವರ್ಷಗಳಿಂದ ಗೊತ್ತಿರಬಹುದು. ಅವರಿಗೆ ದೀರ್ಘಕಾಲ ಸೋಲನುಭವಿಸಿ ಗೊತ್ತಿಲ್ಲ.

ಹಲವಾರು ಸೋಲಿನ ಬಳಿಕ ಉದ್ಯಮ ಬಣ್ಣ ಬಯಲಾಯಿಸುವುದನ್ನು ಅವರು ಕಂಡಿದ್ದಾರೆ"ಎಂದು ಜೆಪಿಯ ಪತ್ನಿ ಬಿಂದಿಯಾ ಹೇಳುತ್ತಾರೆ. "ದೇಖಿ ಜಮಾನೆಯಿಂಕಿ ಯಾರಿ ಬಿಚ್ಡೆ ಸಬೀ ಬಾರಿ-ಬಾರಿ" ಎಂಬ ಗುರುದತ್ ಹಾಡನ್ನು ಗುನುಗಿಸಿದ ಬಿಂದಿಯಾ ಜೆಪಿ ಭಾವನೆ ಕೂಡ ಹಾಡಿನ ರೀತಿಯಲ್ಲೇ ಇದೆಯೆಂದು ಹೇಳುತ್ತಾರೆ.

ಉಮ್ರಾ ಜಾನ್ ವೈಫಲ್ಯ ಜೆಪಿಯನ್ನು ಎದೆಗುಂದಿಸಿಲ್ಲ. ಮರಳಿ ಯತ್ನವ ಮಾಡು ಎಂಬಂತೆ ಮಹಾನ್ ತಾರೆಯರ ನಂಟಿಲ್ಲದೇ ಚಿತ್ರನಿರ್ಮಾಣಕ್ಕೆ ಇಳಿದಿದ್ದಾರೆ.

Share this Story:

Follow Webdunia kannada