Article Bollywood Gossips %e0%b2%ae%e0%b2%b0%e0%b2%b3%e0%b2%bf %e0%b2%ac%e0%b2%b0%e0%b2%b2%e0%b2%bf%e0%b2%b0%e0%b3%81%e0%b2%b5 %e0%b2%ad%e0%b2%be%e0%b2%97%e0%b3%8d%e0%b2%af%e0%b2%b6%e0%b3%8d%e0%b2%b0%e0%b3%80 108040400014_1.htm

Select Your Language

Notifications

webdunia
webdunia
webdunia
webdunia

ಮರಳಿ ಬರಲಿರುವ ಭಾಗ್ಯಶ್ರೀ

ಭಾಗ್ಯಶ್ರೀ
ಚೆಲುವಿನ ಖನಿ ಎನಿಸಿದ್ದ ಭಾಗ್ಯಶ್ರೀ ಸಲ್ಮಾನ್ ಖಾನ್ ಜೊತೆ ಸೂಪರ್ ಹಿಟ್ ಚಿತ್ರ ಮೈನೆ ಪ್ಯಾರ್ ಕಿಯಾ ಚಿತ್ರದಲ್ಲಿ ನಟಿಸಿದಾಗ, ಬಾಲಿವುಡ್‌ಗೆ ಚಿನ್ನದ ಬೆಡಗಿಯೊಬ್ಬಳು ಸಿಕ್ಕಿದಳು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ಪ್ರತಿಭಾನ್ವಿತ ನಟಿ ಅತ್ಯಲ್ಪ ಅವಧಿಯಲ್ಲಿಯೇ ಮದುವೆಯಾದಳು ಮತ್ತು ಸಾಕಷ್ಟು ಅವಧಿಯವರೆಗೂ ಚಿತ್ರರಂಗದಿಂದ ದೂರ ಉಳಿದಳು.

ಈಗ ಆಕೆ ಬಹು ದಿನಗಳ ನಿರೀಕ್ಷೆಯಂತೆ ಚಿತ್ರರಂಗಕ್ಕೆ ಮರಳಿದ್ದಾಳೆ. ಭೋಜ್‌ಪುರಿ ಸಿನಿಮಾದ ಮೂಲಕ. ಈ ಬಗ್ಗೆ ಆಕೆ ತಿಳಿಸುತ್ತಾ, ವೀಕ್ಷಕರಿಗಾಗಿ ನಾನೊಂದು ಚಿತ್ರವನ್ನು ಮಾಡಬೇಕೆಂದುಕೊಂಡಿದ್ದೆ. ಅವರು ತಮ್ಮ ಒತ್ತಡವನ್ನು ಸ್ವಲ್ಪ ಕಾಲವಾದರೂ ಮರೆಯುವಂತಾಗಬೇಕು. ಅಂತಹುದನ್ನು ಮಾಡುತ್ತಿದ್ದೇನೆ. ಇದು ಪೂರ್ಣ ಮನರಂಜನೆಯ ಚಿತ್ರವಾಗಿದೆ ಎಂದು ಅವರು ಹೇಳಿದರು.

ಈ ಹಿಂದೆಯೂ ಆಕೆ ಭೋಜ್‌ಪುರಿ ಚಿತ್ರದಲ್ಲಿ ನಟಿಸಿದ್ದರು. ಆದರೆ ಇದು ವಿಶೇಷವಾದುದು. ಏಕೆಂದರೆ ಇದು ಅವರ ಸ್ವಂತ ನಿರ್ಮಾಣದ ಚಿತ್ರ ಮಾತ್ರವಷ್ಟೇ ಅಲ್ಲ, ಅವರು ಈ ಚಿತ್ರಕ್ಕೆ ಚಿತ್ರಕತೆಯನ್ನು ಸಹ ಬರೆದಿದ್ದಾರೆ.

ನಿಮ್ಮ ಮುಂದಿನ ನಟನೆ ಬಾಲಿವುಡ್‌ನಲ್ಲಿಯೇ ಎಂದರೆ ಹೌದು ಎನ್ನುತ್ತಾರೆ ಆಕೆ. ನಾನು ಅನಂತ್ ಮಹದೇವನ್‌ರ ಚಿತ್ರದಲ್ಲಿ ಸುನಿಲ್ ಶೆಟ್ಟಿ ಜೊತೆ ರೆಡ್ ಅಲರ್ಟ್ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ತಿಂಗಳಲ್ಲಿಯೇ ಚಿತ್ರ ಆರಂಭವಾಗುತ್ತದೆ. ಇನ್ನೂ ಎರಡು ಯೋಜನೆಗಳಿದ್ದು, ಚಿತ್ರೀಕರಣ ಪೂರ್ಣಗೊಂಡ ನಂತರ ಅವುಗಳ ಚಿತ್ರೀಕರಣ ಆರಂಭಿಸುತ್ತೇನೆ ಎನ್ನುತ್ತಾಳೆ ಆಕೆ.

Share this Story:

Follow Webdunia kannada