Publish Date: Sat, 22 Sep 2007 (18:33 IST)
Updated Date: Sat, 22 Sep 2007 (18:32 IST)
ನಿರ್ದೇಶಕ ನವದೀಪ್ ಸಿಂಗ್ ಅವರ ಚೊಚ್ಚಲ ಕಾಣಿಕೆ "ಮನೋರಮಾ ಸಿಕ್ಸ್ ಫೀಟ್ ಅಂಡರ್" ಶುಕ್ರವಾರ ರಾಷ್ಟ್ರಾದ್ಯಂತ ಬಿಡುಗಡೆಯಾಗಿದೆ. ನಿಗೂಢ ಹತ್ಯೆಯ ಕಥೆ ಹೊಂದಿರುವ ಈ ಚಿತ್ರ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ.
ಚಿತ್ರದ ಹೆಸರು ಅಸಹಜತೆಯಿಂದ ಕೂಡಿರುವುದರಿಂದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಮೂಲತಃ ಚಿತ್ರದ ಹೆಸರು ಮನೋರಮಾ ಎಂದಾಗಿತ್ತು. ಇದು ಮಹಿಳಾ ಆಧಾರಿತ ಚಿತ್ರ ಎಂದು ಅನೇಕ ಮಂದಿ ಭಾವಿಸಿದರು. ಅದಕ್ಕಾಗಿ ನಾವು ಅದು ನಿಗೂಢ ಹತ್ಯೆಯ ಕಥೆ ಎಂದು ಗೊತ್ತಾಗಿಸಲು "ಸಿಕ್ಸ್ ಫೀಟ್ ಅಂಡರ್" ಸೇರಿಸಿದೆವು ಎಂದು ನವದೀಪ್ ಸಿಂಗ್ ಹೇಳಿದರು.
ಮನೋರಮಾ ಎಂಬ ಮಹಿಳೆಯ ಹತ್ಯೆಯ ತನಿಖೆ ನಡೆಸಲು ಹೊರಟ ಎಂಜಿನಿಯರ್ ಪರಿವರ್ತಿತ ಡಿಟೆಕ್ಟಿವ್- ಕಾದಂಬರಿಕಾರ ಸುಳ್ಳುಗಳು ಮತ್ತು ವಂಚನೆಯ ಬಲೆಯಲ್ಲಿ ಸಿಕ್ಕಿಬೀಳುವ ಪಯಣದ ಜಾಡನ್ನು ಮನೋರಮಾ ಸಿಕ್ಸ್ ಫೀಟ್ ಅಂಡರ್ ಬಿಚ್ಚಿಡುತ್ತದೆ.
ಚೊಚ್ಚಲ ಕಾದಂಬರಿ "ಮನೋರಮಾ" ಬರೆದ ಸತ್ಯವೀರ್ ಅಥವಾ ಎಸ್‌ವಿ ಜೀವನದ ಸುತ್ತ ಕಥೆಯು ಸುತ್ತುತ್ತದೆ. ಶುಷ್ಕ ಜೀವನದಿಂದ ಬೇಸತ್ತು ಸಾಹಸದ ಬದುಕು ಬಯಸಿದ ಎಸ್‌ವಿ, ಮನೋರಮಾ ಎಂಬ ತನ್ನ ಕಾದಂಬರಿಯ ಹೆಸರಿನ ಮಹಿಳೆಯ ಹತ್ಯೆ ಪ್ರಕರಣದ ನಿಗೂಢತೆ ಭೇದಿಸಲು ಹೊರಡುತ್ತಾನೆ. ಅಭಯ್ ದಿಯೋಲ್ ಸತ್ಯವೀರ್ ಪಾತ್ರದಲ್ಲಿ ನಟಿಸಿದ್ದಾನೆ. ರಾಜಸ್ಥಾನದಲ್ಲಿ ಚಿತ್ರೀಕರಣವಾಗಿದ್ದು, ಚಿತ್ರಕಥೆಯಲ್ಲಿ ಈ ಸ್ಥಳವು ಮುಖ್ಯಪಾತ್ರ ವಹಿಸುತ್ತದೆ.