Publish Date: Wed, 20 Jun 2007 (10:28 IST)
Updated Date: Wed, 20 Jun 2007 (10:28 IST)
ಮೊನ್ನೆ ಮೊನ್ನೆ ಬಿಗ್ ಬಿ ಪುತ್ತರ್ ಅಭಿಷೇಕ ಬಚ್ಚನ್‌ನನ್ನು ಮದುವೆಯಾದ ಬಂಟರ ಕನ್ಯೆ ಮಿನುಗಣ್ಣಿನ ಸುಂದರಾಂಗಿ ಐಶ ಬೆಬಿ ಮದುವೆ ನಂತರವೂ ಚಿತ್ರಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ.
ನನ್ನ ಬೆಸ್ಟ್ ಪ್ರೇಂಡ್‌ನನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಿರುವುದು ಖುಷಿ ಪಡುವ ಸಂಗತಿ ಎಂದು ಹೇಳಿದ್ದಾರೆ.ಮಾಜಿ ಜಗತ್ ಸುಂದರಿ ಅಭಿಷೇಕನನ್ನು ಮದುವೆಯಾಗುವ ನಿರ್ಧಾರ ಮಾಡಿದ್ದು ಸರಿಯಾದ ನಿರ್ಧಾರವಾಗಿತ್ತು ಅಂದರೆ ಸಲ್ಲೂ ಮಿಯಾಂ ಜತೆಗೆ ತಿರುಗಾಡಿದ್ದು ತಪ್ಪು ನಿರ್ಧಾರ ಆಗಿತ್ತೆ ಅಂತಾ ತಿರುಗಾ ಪ್ರಶ್ನೆ ಹಾಕಬೇಡಿ ಅಷ್ಟೆ.
ಮುಂದೆ ಮಕ್ಕಳು ಆಗುತ್ತವೆ ಆಗ ಅಭಿನಯಿಸುವುದನ್ನು ಬಿಡಬೇಕು ಅಥವಾ ಬೇಡವೊ ಅನ್ನುವುದರ ಕುರಿತು ಆಗಲೆ ವಿಚಾರ ಮಾಡುತ್ತೆನೆ. ಸರಕಾರ್-2ದಲ್ಲಿ ಅಭಿಷೇಕ್ ಜತೆಗೆ ಅಭಿನಯಿಸುತ್ತಿದ್ದೆನೆ ಆ ಚಿತ್ರದಲ್ಲಿ ಪ್ರಭಾವಿ ಮಹಿಳೆಯ ಪಾತ್ರ ಮಾಡುತ್ತಿದ್ದೆನೆ ಎಂದು ಹೇಳಿದ್ದಾರೆ.