Article Bollywood Gossips %e0%b2%ae%e0%b2%a6%e0%b2%b0%e0%b3%8d %e0%b2%b2%e0%b3%8d%e0%b2%af%e0%b2%be%e0%b2%82%e0%b2%a1%e0%b3%8d %e0%b2%a8%e0%b2%b2%e0%b3%8d%e0%b2%b2%e0%b2%bf %e0%b2%86%e0%b2%af%e0%b3%87%e0%b2%b7%e0%b2%be %e0%b2%9f%e0%b2%95%e0%b2%bf%e0%b2%af%e0%b2%be %e0%b2%88%e0%b2%97 %e0%b2%ae%e0%b3%86%e0%b2%82%e0%b2%ac%e0%b2%b0%e0%b3%8d 113121100009_1.htm

Daily Horoscope

Select Your Language

Notifications

webdunia
webdunia
webdunia
webdunia

ಮದರ್ ಲ್ಯಾಂಡ್ ನಲ್ಲಿ ಆಯೇಷಾ ಟಕಿಯಾ ಈಗ ಮೆಂಬರ್

ಆಯೇಷಾ ಟಕಿಯಾ
PR
ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಅಮೋಘ ಯಶಸ್ಸು ಸಾಧಿಸಿದ್ದ ಆಯೇಷಾ ಟಕಿಯ ಮಗುವಿನ ತಾಯಿ ಆಗಿದ್ದಾಳೆ. ಆಕೆ ನಟಿಸಿದ ಬಹುತೇಕ ಸಿನಿಮಾಗಳು ಯಶಸ್ಸಿನ ಆನಂದ ಪಡೆದಿದೆ. ವೃತ್ತಿರಂಗದಲ್ಲಿ ಯಶಸ್ಸು ಇರುವಾಗಲೇ ವೈವಾಹಿಕ ಬದುಕಿನತ್ತ ಗಮನ ನೆಟ್ಟ ಆಯೇಷಾ ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಬಾಲಿವುಡ್ ಗೆ ಆಯೇಷ 2004 ರಲ್ಲಿ ಎಂಟ್ರಿಯಾದಳು. ಈ ಮಾದಕ ಚೆಲುವೆ ನಟಿಸಿದ ಟಾರ್ಜಾನ್ ಸೂಪರ್ ಕಾರ್ ಅನ್ನುವ ಚಿತ್ರ ಬಾಕ್ಸಾಫೀಸಿನಲ್ಲಿ ಒಳ್ಳೆ ಗಳಿಕೆ ಮಾಡಿತು. ಆ ಬಳಿಕ ಅನೇಕ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ನಟಿಸಿ ಅಪಾರವಾದ ಅಭಿಮಾನಿಗಳನ್ನು ಸಂಪಾದಿಸಿಕೊಂಡಳು. ಸಲ್ಮಾನ್ ಖಾನ್ ಜೊತೆ ನಟಿಸಿದ್ದ ವಾಟೆಂಡ್ ಚಿತ್ರ ಬಾಕ್ಸಾಫೀಸಿನಲ್ಲಿ ಸೂಪರ್ ಡೂಪರ್ ಗಳಿಕೆ ಮಾಡಿತು. ಈ ಮುದ್ದು ಚೆಲುವೆಯನ್ನು ಟಾಲಿವುಡ್ ಗೆ ನಾಗಾರ್ಜುನ ಪರಿಚಯ ಮಾಡಿದರು.

2005ರಲ್ಲಿ ಟಾಲಿವುಡ್ ಗೆ ಬಂದ ಈ ಚೆಲುವೆ ಅಲ್ಲಿಯೂ ಗಮನಾರ್ಹ ಯಶಸ್ಸು ಪಡೆದರು .2009ರಲ್ಲಿ ಸಮಾಜವಾದಿ ಪಾರ್ಟಿಯ ನಾಯಕ ಅಬು ಅಸೀಮ್ ಅಜ್ಮಿ ಅನ್ನುವವರ ಮಗ ಫರಾನ್ ಅಜ್ಮಿ ಜೊತೆ ಮದುವೆಯಾದಳು . ಹೀಗೆ ಯಶಸ್ಸು ಜೊತೆಯಾಗಿರುವಾಗಲೇ ವೈವಾಹಿಕ ಬದುಕಿಗೆ ಕಾಲಿಟ್ಟ ಆಯೇಷಾ ಈಗ ಮಗುವಿನ ತಾಯಿ. ಈ ಸಂತೋಷವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾಳೆ. ನಿಮ್ಮ ಹಾರೈಕೆ ಸದಾ ನನ್ನ ಕುಟುಂಬದ ಮೇಲಿರಲಿ ಎಂದು ತನ್ನ ಅಭಿಮಾನಿಗಳ ಬಳಿ ಕೇಳಿರುವ ಆಯೆಷಾ ಈಗ ಮದರ್ ಪಟ್ಟವನ್ನು ಖುಷಿಯಾಗಿ ಎಂಜಾಯ್ ಮಾಡ್ತಾ ಇದ್ದಾಳೆ.

Share this Story:

Follow Webdunia kannada