Article Bollywood Gossips %e0%b2%ae%e0%b2%a4%e0%b3%8d%e0%b2%a4%e0%b3%8a%e0%b2%ae%e0%b3%8d%e0%b2%ae%e0%b3%86 %e0%b2%8e%e0%b2%a6%e0%b3%86 %e0%b2%a4%e0%b3%8b%e0%b2%b0%e0%b2%bf%e0%b2%b8%e0%b2%b2%e0%b2%be%e0%b2%b0%e0%b3%86 %e0%b2%8e%e0%b2%82%e0%b2%a6 %e0%b2%a8%e0%b2%82%e0%b2%a6%e0%b2%a8%e0%b2%be 109041500073_1.htm

Daily Horoscope

Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಎದೆ ತೋರಿಸಲಾರೆ ಎಂದ ನಂದನಾ

ನಂದನಾ ಸೇನ್
IFM
ವಿವಾದಿತ ಬೆತ್ತಲೆ ದೃಶ್ಯಗಳುಳ್ಳ ಕೇತನ್ ಮೆಹ್ತಾರ 'ರಂಗ್ ರಸ್ಸಿಯಾ'ದಲ್ಲಿ ತೆರೆದೆದೆಯಲ್ಲಿ ಕಾಣಿಸಿಕೊಂಡಿರುವ ನಂದನಾ ಸೇನ್ ಅಂತಹುದೇ ಮತ್ತೊಂದು ಆಹ್ವಾನವನ್ನು ನಿರಾಕರಿಸಿದ್ದಾಳಂತೆ.

ಇಟಾಲಿಯನ್ ನಿರ್ದೇಶಕ ಇಟಾಲೋ ಸ್ಪಿನೆಲ್ಲೀಯವರು ನಂದನಾ ಸೇನ್‌ಳನ್ನು ಹಾಕಿಕೊಂಡು ಚಿತ್ರವೊಂದನ್ನು ನಿರ್ಮಿಸುವ ಉದ್ದೇಶ ಹೊಂದಿದ್ದರು. ಬುಡಕಟ್ಟು ಜನಾಂಗದ ಮಹಿಳೆಯ ಬೆತ್ತಲೆ ದೇಹವನ್ನು ಕದ್ದು ಛಾಯಾಗ್ರಾಹಕನೊಬ್ಬ ಚಿತ್ರೀಕರಿಸುವುದೇ ಈ ಸಿನಿಮಾದ ಕಥೆ.

ಈ ಸಿನಿಮಾದ ಮೂಲ ಕಥೆ ಬಂಗಾಲಿ ಲೇಖಕಿ ಮಹಶ್ವೇತ ದೇವಿಯವರ ಪ್ರಚೋದನಾತ್ಮಕ ಹಾಗೂ ವಿವಾದಿತ 'ಚೋಲಿ ಕೇ ಪೀಚೆ'ಯದ್ದು. ಅದರಲ್ಲಿನ ಅರೆ ಬೆತ್ತಲೆ ಮಹಿಳೆಯ ಪಾತ್ರವನ್ನು ಮಾಡುವಂತೆ ಸೇನ್‌ಳನ್ನು ಕೇಳಿಕೊಳ್ಳಲಾಗಿತ್ತು.

ಕಥೆಯನ್ನು ಕೇಳಿ ನಂದನಾ ಸೇನ್ ಆಕರ್ಷಿತಳಾದರೂ ಸಂಪೂರ್ಣವಾಗಿ ಮತ್ತೊಮ್ಮೆ ಟಾಪ್ ಲೆಸ್ ಆಗಿ ಕಾಣಿಸಿಕೊಳ್ಳುವುದು ಆಕೆಗೆ ಇಷ್ಟವಿದ್ದಂತಿಲ್ಲ. ಈಗಾಗಲೇ 'ರಂಗ್ ರಸ್ಸಿಯಾ' ಚಿತ್ರದಲ್ಲಿ ಮಾಡಿರುವುದರಿಂದ ತಕ್ಷಣಕ್ಕೆ ಅಂತಹ ಪಾತ್ರ ಮತ್ತೆ ಬೇಡ ಎನ್ನುವುದು ಆಕೆಯ ನಿಲುವು.

ಈ ಚಿತ್ರವನ್ನು ನಿರ್ಮಿಸುತ್ತಿರುವವರು ರಾಯ್. ಚಿತ್ರಕ್ಕೆ ಛಾಯಾಗ್ರಹಣ ಬ್ಲಾಸ್ಕೋ ಗಿರಾರ್ಡೋರದ್ದು. ನಂದನಾ ಸೇನ್ ಸ್ಪಷ್ಟವಾಗಿ ನಿರಾಕರಿಸಿದ ಕಾರಣ ವರ್ಷಾಂತ್ಯದಲ್ಲಿ ಚಿತ್ರ ಆರಂಭವಾಗಲಿದೆ.
webdunia
IFM

"ಇದು ಪ್ರಭಾವಿ ಕಥೆಯನ್ನೊಳಗೊಂಡಿದೆ ಮತ್ತು ಅದನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಇಲ್ಲಿ ಬುಡಕಟ್ಟು ಹುಡುಗಿಯ ಪಾತ್ರ ಬೆತ್ತಲೆಯಾಗುತ್ತಿರುವುದು ಉದ್ದೇಶ ಪೂರ್ವಕವಾಗಿ ಅಲ್ಲ ಮತ್ತು ಇಲ್ಲಿ ಕಾಮಪ್ರಚೋದಕವೆನಿಸುವುದು ಖಂಡಿತಕ್ಕೂ ಆಕ್ಷೇಪಾರ್ಹವಲ್ಲ. ಹಾಗಾಗಿ ಇದನ್ನು ಕೆಟ್ಟ ಚಿತ್ರವೆಂದು ಹೇಳುವ ಹಾಗಿಲ್ಲ" ಎಂದು ನಂದನಾ ಸಮರ್ಥಿಸಿಕೊಂಡಿದ್ದಾಳೆ.

ಈ ಹಿಂದೆ ಇದೇ ಕಾರಣಗಳಿಗಾಗಿ ನಾನು ಅಂತಾರಾಷ್ಟ್ರೀಯ ಮಟ್ಟದ ಆಹ್ವಾನಗಳನ್ನೂ ತಿರಸ್ಕರಿಸಿರುವುದಾಗಿ ತಿಳಿಸಿರುವ ನಂದನಾ, ಅದಕ್ಕೆ ಅಪವಾದ ಕೇತನ್ ಮೆಹ್ತಾರ ಚಿತ್ರ ಮಾತ್ರ ಎಂದಿದ್ದಾಳೆ.

ರಣದೀಪ್ ಹೂಡಾ ಕಲಾಕಾರ ರಾಜಾ ರವಿವರ್ಮನಾಗಿ ನಟಿಸಿರುವ 'ರಂಗ್ ರಸ್ಸಿಯಾ' ಚಿತ್ರದಲ್ಲಿ ನಂದನಾ ಸೇನ್‌ಳದ್ದು ಸುಂಗಧಿಯ ಪಾತ್ರ. ಸೆನ್ಸಾರ್ ಮಂಡಳಿಯ ಜತೆ ಗುದ್ದಾಡಿದ ಚಿತ್ರ ಇನ್ನೂ ತೆರೆ ಕಂಡಿಲ್ಲ. ನಂದನಾ ಸೇನ್ ತೆರೆದೆದೆಯನ್ನು ತೆರೆಯ ಮೇಲೆ ತೋರಿಸಲು ಸೆನ್ಸಾರ್ ಮಂಡಳಿ ಆಕ್ಷೇಪಿಸಿತ್ತು. ಆದರೆ ಇದು ಚಿತ್ರಕ್ಕೆ ಅನಿವಾರ್ಯ. ರವಿವರ್ಮ ಕಲಾವಿದನಾಗಿದ್ದರಿಂದ ಪಾತ್ರಕ್ಕೆ ಅದು ಅಗತ್ಯವಾಗಿತ್ತು ಎಂಬುದು ನಿರ್ದೇಶಕ ಕೇತನ್ ವಾದ. ಯಾವಾಗ ಬಿಡುಗಡೆ ಭಾಗ್ಯ ಕಾಣಲಿದೆ ಎಂಬ ಮಾಹಿತಿಯನ್ನು ರಸಿಕ ಕಲಾಪ್ರಿಯರಿಗೆ ಒದಗಿಸಲು ಸದ್ಯದ ಮಟ್ಟಿಗೆ ಅಸಾಧ್ಯ...!

Share this Story:

Follow Webdunia kannada