Article Bollywood Gossips %e0%b2%ae%e0%b2%a4%e0%b3%8d%e0%b2%a4%e0%b3%8a%e0%b2%82%e0%b2%a6%e0%b3%81 %e0%b2%a6%e0%b2%be%e0%b2%96%e0%b2%b2%e0%b3%86 %e0%b2%a8%e0%b2%bf%e0%b2%b0%e0%b3%8d%e0%b2%ae%e0%b2%bf%e0%b2%b8%e0%b2%bf%e0%b2%b0%e0%b3%81%e0%b2%b5 %e0%b2%85%e0%b2%9c%e0%b2%bf%e0%b2%a4%e0%b3%8d 113123000008_1.htm

Daily Horoscope

Select Your Language

Notifications

webdunia
webdunia
webdunia
webdunia

ಮತ್ತೊಂದು ದಾಖಲೆ ನಿರ್ಮಿಸಿರುವ ಅಜಿತ್

ಅಜಿತ್ ಅಭಿಮಾನಿಗಳು
PR
ತಮಿಳು ಚಿತ್ರರಂಗದಲ್ಲಿ ನಟ ಅಜಿತ್ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಆತನ ಅಭಿಮಾನಿಗಳಿಗೆ! ಆತನ ಸಿನಿಮಾ ರಿಲೀಸ್ ಆಗುತ್ತದೆ ಎನ್ನುವ ಸುದ್ದಿ ಕೇಳಿದರೆ ಸಾಕು ಅಭಿಮಾನಿಗಳ ಮನೆಯಲ್ಲಿ ಪಾಯಸ ಅಜಿತ್ ಕಟೌಟ್ ಗಳಿಗೆ ಹೂ ಹಾರ ,ಹಾಲಿನ ಅಭೀಷೇಕ! ಇಷ್ಟು ದಿನಗಳಾದರೂ ತನ್ನ ಬಗ್ಗೆ ಇರುವ ಕ್ರೇಜನ್ನು ಆತ ಎಂದಿಗೂ ಕಡಿಮೆ ಮಾಡಿಕೊಂಡಿಲ್ಲ ಎಂಬುದು ಇಲ್ಲಿ ಮೋಸ್ಟ್ ನೋಟಬಲ್ ಪಾಯಿಂಟ್ !

ಇನ್ನು ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಈ ನಟನ ಚಿತ್ರ ರಿಲೀಸ್ ಗೆ ಮುನ್ನವೇ ದಾಖಲೆಗಳನ್ನು ನಿರ್ಮಾಣ ಮಾಡಿದೆ. ಈಗ ಅಂತಹದ್ದೇ ಮತ್ತೊಂದು ದಾಖಲೆ ಮಾಡಿದ್ದಾರೆ ಅಜಿತ್. ಅವರ ಹೊಸ ಚಿತ್ರವನ್ನು ಗೌತಂ ಮೆನನ್ ನಿರ್ದೇಶಿಸುತ್ತಿದ್ದಾರೆ. ಈಚಿತ್ರ ಎ.ಎಂ.ರತ್ನಂ ಅವರ ನಿರ್ಮಾಣದಲ್ಲಿ ಸೂರ್ಯ ಮೂವೀಸ್ ಬ್ಯಾನರ್ ಅಡಿಯಲ್ಲಿ ಸಿದ್ಧವಾಗುತ್ತಿದೆ.

ಇದರ ಸ್ಯಾಟಿಲೈಟ್ ರೈಟ್ಸ್ ನ್ನು ಪ್ರಸಿದ್ದ ಚಾನೆಲ್ ನವರು 20 ಕೋಟಿ ರೂಪಾಯಿಗಳಿಗೆ ಕೊಂಡಿದ್ದಾರಂತೆ!ಆದರೇ ಈ ಸಿನಿಮಾವನ್ನು ಇಷ್ಟೊಂದು ಭಾರಿ ಮೊತ್ತವನ್ನು ನೀಡಿ ಕೊಂಡಿರುವುದೇಕೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆ ಚಿತ್ರದಿಂದ ಅತ್ಯಂತ ಸುಲಭವಾಗಿ ರಿಟರ್ನ್ಸ್ ಪಡೆಯ ಬಹುದು ಎಂದು ತಿಳಿದಿದ್ದಾರೆ ಚಾನೆಲ್ ನವರು.

Share this Story:

Follow Webdunia kannada