Select Your Language

Notifications

webdunia
webdunia
webdunia
webdunia

ಮತ್ತೆ ಹೊಸ ಅವತಾರದಲ್ಲಿ ಸನ್ನಿ ಲಿಯೋನ್

ಜಿಸ್ಮ್ 2
ಮುಂಬೈ , ಸೋಮವಾರ, 31 ಮಾರ್ಚ್ 2014 (14:58 IST)
ಜಿಸ್ಮ್ 2 ಚಿತ್ರದಲ್ಲಿ ಸನ್ನಿ ಲಿಯೋನ್ ಅವರ ಸೌಂದರ್ಯವನ್ನು ನೀವೆಲ್ಲಾ ಸವಿದಿರುತ್ತೀರಿ. ಆ ಚಿತ್ರದಲ್ಲಿ ಚಿತ್ರರಸಿಕರ ನಿದ್ದೇ ಕೆಡಿಸಿದ್ದ ಬೆಡಗಿ ಸನ್ನಿ ಲಿಯೋನ್ ಈಗ ಹೊಸ ಚಿತ್ರದೊಂದಿಗೆ ಬರುತ್ತಿದ್ದಾರೆ. ಸಚಿನ್ ಜೋಶಿ ಅವರೊಂದಿಗೆ ಜಾಕ್ಪಾಟ್ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಸನ್ನಿ ಲಿಯೋನ್ ಬೋಲ್ಡ್ ಆಗಿ ನಟಿಸುತ್ತಿದ್ದಾರಂತೆ. ಈ ದೃಶ್ಯದ ಬಗ್ಗೆ ನಾನು ಹೆಚ್ಚೇನೂ ಹೇಳಲಾರೆ. ಅದನ್ನು ಹೇಳಬೇಕಾಗಿರುವವರು ಪ್ರೇಕ್ಷಕರು. ಆದರೆ ಈ ದೃಶ್ಯ ಅಶ್ಲೀಲವಾಗೇನು ಇಲ್ಲ ಎಂದಿದ್ದಾರೆ ಸಚಿನ್. ಈ ಚಿತ್ರದಲ್ಲಿ ಸನ್ನಿ ಪತಿ ಡೇನಿಯಲ್ ವೆಬರ್ ಕೂಡಾ ಅಭಿನಯಿಸುತ್ತಿದ್ದಾರಂತೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ನಟನೆಯ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದಾರಂತೆ. ಈ ಬಗ್ಗೆ ಮಾತನಾಡಿರುವ ಸನ್ನಿ ಪತಿಗೆ ಯಾವ ರೀತಿಯ ಡ್ರೆಸ್ ತೊಡಬೇಕು, ಹೇಗೆ ಅಭಿನಯಿಸಬೇಕು ಎಂದು ಸಲಹೆ ನೀಡುತ್ತಿದ್ದೇನೆ ಎಂದಿದ್ದಾರಂತೆ.

ಕೈಝಾದ್ ಗುಸ್ತಾದ್ ಚಿತ್ರದ ನಿರ್ದೇಶಕರು. ಈ ಹಿಂದೆ ಭೂಮ್ ಚಿತ್ರ ನಿರ್ದೇಶಿಸಿದ್ದ ಗುಸ್ತಾದ್ ಆ ಬಳಿಕ ಬಾಲಿವುಡ್ನಿಂದ ದೂರ ಉಳಿದಿದ್ದರು. ಸನ್ನಿ ಲಿಯೋನ್ ಈ ಚಿತ್ರದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕಷ್ಟೇ.

Share this Story:

Follow Webdunia kannada