Article Bollywood Gossips %e0%b2%ae%e0%b2%a4%e0%b3%8d%e0%b2%a4%e0%b3%86 %e0%b2%b5%e0%b2%bf%e0%b2%9c%e0%b3%83%e0%b2%82%e0%b2%ad%e0%b2%bf%e0%b2%b8%e0%b2%b2%e0%b2%bf%e0%b2%b0%e0%b3%81%e0%b2%b5 %e0%b2%b9%e0%b2%be%e0%b2%9c%e0%b2%bf %e0%b2%ae%e0%b2%b8%e0%b3%8d%e0%b2%a4%e0%b2%be%e0%b2%a8%e0%b3%8d 109012800088_1.htm

Daily Horoscope

Select Your Language

Notifications

webdunia
webdunia
webdunia
webdunia

ಮತ್ತೆ ವಿಜೃಂಭಿಸಲಿರುವ ಹಾಜಿ ಮಸ್ತಾನ್...!

ಹಾಜಿ ಮಸ್ತಾನ್
ಕುಖ್ಯಾತ ಸ್ಮಗ್ಲರ್, ಗ್ಯಾಂಗ್‌ಸ್ಟರ್ ಹಾಗೂ ಸಿನಿಮಾ ನಿರ್ಮಾಪಕ ಹಾಜಿ ಮಸ್ತಾನ್ ಪಾತ್ರವನ್ನು ಬಾಲಿವುಡ್ ನಟ ಅಜಯ್ ದೇವಗನ್ ತಮ್ಮ ಮುಂದಿನ ಚಿತ್ರ 'ವನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ'ಯಲ್ಲಿ ಮಾಡುತ್ತಿದ್ದಾರಂತೆ. ಆದರೆ ಆತನ ಹಾವ-ಭಾವಗಳನ್ನು ಅನುಸರಿಸುವ ಯತ್ನ ಮಾಡುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

"ಈ ಚಿತ್ರದ ಪಾತ್ರ ಹಾಜಿ ಮಸ್ತಾನ್‌ನಿಂದ ಸ್ಫೂರ್ತಿ ಪಡೆದಿರುವುದು ನಿಜ. ಆದರೆ ನಾನು ಆತನನ್ನು ಅನುಸರಿಸಲು ಯತ್ನಿಸುವುದಿಲ್ಲ. ಇದಕ್ಕಾಗಿ ನಾವು ನಮ್ಮದೇ ಆದ ಶೈಲಿಯನ್ನು ಕಂಡುಕೊಳ್ಳಲಿದ್ದೇವೆ. ಈ ಹಿಂದೆ ನಾನು 'ಝಕ್ಮ್'ನಲ್ಲಿ ಮಹೇಶ್ ಭಟ್ ಸಾಬ್ ಪಾತ್ರ ಮಾಡಿದ್ದೆ. ಆಗಲೂ ಅವರ ಹಾವ-ಭಾವಗಳನ್ನು ಅನುಕರಿಸಲು ಯತ್ನಿಸಿರಲಿಲ್ಲ ಮತ್ತು ಯಶಸ್ವಿಯಾಗಿದ್ದೆ" ಎಂದು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಅಜಯ್ ತಿಳಿಸಿದ್ದಾರೆ.

ಕುಖ್ಯಾತ ರೌಡಿಯಾಗಿದ್ದ ಹಾಜಿ ಮಸ್ತಾನ್ ನಿರ್ಮಾಪಕನಾಗಿ 1973ರಲ್ಲಿ 'ಮೇರೇ ಗರೀಬ್ ನವಾಜ್' ಚಿತ್ರದ ಮ‌ೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದ. ನಂತರದ ದಿನಗಳಲ್ಲಿ ಯಶಸ್ವೀ ವಿತರಕನಾಗಿ ಕೂಡ ಕೆಲಸ ಮಾಡಿದ್ದ. ಖ್ಯಾತ ನಟ ದಿಲೀಪ್ ಕುಮಾರ್ ಜತೆ ಮಸ್ತಾನ್ ಗೆಳೆತನ ಕೂಡ ಅಂದಿನ ದಿನಗಳಲ್ಲಿ ಭಾರೀ ಸುದ್ದಿಯಾಗಿತ್ತು. ರಾಜಕೀಯದಲ್ಲಿ ಕೂಡ ಕೈಯಾಡಿಸಿದ್ದ ಮಸ್ತಾನ್ 1994ರಲ್ಲಿ ಸಾವನ್ನಪ್ಪಿದ್ದ.

1975ರಲ್ಲಿ ಬಿಡುಗಡೆಯಾಗಿದ್ದ ಮಸ್ತಾನ್ ಜೀವನವನ್ನು ಆಧರಿಸಿದ ಚಿತ್ರ 'ದೀವಾರ್'ನಲ್ಲಿ ಅಮಿತಾಭ್ ಬಚ್ಚನ್ ನಾಯಕನಾಗಿ ನಟಿಸಿದ್ದರು. ಇದೀಗ ಅಜಯ್ ದೇವಗನ್ ಅದೇ ಚಿತ್ರವನ್ನು ನೋಡುತ್ತಾ ಮತ್ತೆ ತೆರೆಯ ಮೇಲೆ ವಿಜೃಂಭಿಸಲಿದ್ದಾರೆ.

ಭಗತ್ ಸಿಂಗ್‌ನಿಂದ ಹಿಡಿದು ಹಾಜಿ ಮಸ್ತಾನ್‌ ತನಕ ಹಲವಾರು ಬಗೆಯ ಪೊಲೀಸ್, ಸೈನಿಕ, ಕಳ್ಳ, ರೌಡಿ, ಕುಟುಂಬಸ್ಥ, ಲವರ್ ಬಾಯ್ ಹೀಗೆ ಎಲ್ಲಾ ತರಹದ ಪಾತ್ರಗಳಲ್ಲಿ ಮಿಂಚಿರುವ ಅಜಯ್ ಈ ಬಗ್ಗೆ ಹೇಳುವುದು ಹೀಗೆ. "ಹಾಜಿ ಮಸ್ತಾನ್‌ಗೂ ಭಗತ್ ಸಿಂಗ್‌ಗೂ ಯಾವ ರೀತಿಯ ಹೊಂದಾಣಿಕೆಯೂ ಇಲ್ಲ. ಇವೆರಡೂ ಪರಸ್ಪರ ತದ್ವಿರುದ್ಧ ಪಾತ್ರಗಳು. ನಾನು ಈ ಚಿತ್ರದಲ್ಲಿ ಕೇವಲ ಪಾತ್ರವಾಗಿರುತ್ತೇನೆ" ಎಂದಿದ್ದಾರೆ.

Share this Story:

Follow Webdunia kannada