Article Bollywood Gossips %e0%b2%ae%e0%b2%a4%e0%b3%8d%e0%b2%a4%e0%b3%86 %e0%b2%ae%e0%b3%8a%e0%b2%a6%e0%b2%b2%e0%b3%8d%e0%b2%97%e0%b3%8a%e0%b2%82%e0%b2%a1 %e0%b2%96%e0%b2%be%e0%b2%a8%e0%b3%8d %e0%b2%95%e0%b2%a6%e0%b2%a8 108111000019_1.htm

Select Your Language

Notifications

webdunia
webdunia
webdunia
webdunia

ಮತ್ತೆ ಮೊದಲ್ಗೊಂಡ ಖಾನ್ 'ಕದನ'

ಅಮೀರ್ ಖಾನ್ ಶಾರುಖ್ ಖಾನ್ ಸಲ್ಮಾನ್ ಖಾನ್ ಗಜ್ನಿ ರಬ್ನೆ ಬನಾ ದಿ ಜೋಡಿ ವೀರ್
ಹೆಚ್ಚುಕಡಿಮೆ ಏಕಕಾಲದಲ್ಲಿಯೇ ಖಾನ್‌ತ್ರಯರು ತಮ್ಮ ತಮ್ಮ ಚಿತ್ರಗಳ ಫಸ್ಟ್ ಲುಕ್‍ಗಳನ್ನು ಬಿಡುಗಡೆ ಮಾಡಿದ್ದಾರೆ. ಮೊದಲನೇಯದಾಗಿ ದೀಪಾವಳಿ ಸಂದರ್ಭ ಅಮೀರ್ ಖಾನ್ ತಮ್ಮ 'ಗಜನಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಿದರು, ಅದರ ಬೆನ್ನಿಗೆ ಶಾರುಖ್ ಖಾನ್ ತಮ್ಮ ಹುಟ್ಟುಹಬ್ಬದ ದಿನ 'ರಬ್ನೆ ಬನಾ ದಿ ಜೋಡಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಿದರು, ನಂತರ ಸಲ್ಮಾನ್ ಖಾನ್ ತಮ್ಮ 'ವೀರ್' ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಿದ್ದಾರೆ.
IFM

ಖಾನ್ ತ್ರಯರು ಚಿತ್ರಗಳಲ್ಲಿನ ತಮ್ಮ ಲುಕ್‌‌ನಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿದ್ದಾರೆ. ಗಜನಿಯಲ್ಲಿ ಅಮೀರ್ ಬೋಳು ತಲೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಶಾರುಖ್ ಖಾನ್‌ರ ಸಿಕ್ಸ್ ಪ್ಯಾಕ್‌ಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಮೀರ್ ಎಂಟು ಹುರಿಗಳನ್ನು ಪ್ರದರ್ಶಿಸಲಿದ್ದಾರೆ. ಇನ್ನೊಂದೆಡೆ ಶಾರುಖ್ ರಬ್ನೆ ಬನಾ ದಿ ಜೋಡಿಯಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಳ್ಳಬೇಕಿರುವುದರಿಂದ, ಗ್ಲಾಮರ್ ಲುಕ್ ಕಳೆದುಕೊಂಡಿದ್ದಾರೆ. ಸಲ್ಮಾನ್ ವೀರ್‌ಗಾಗಿ ಯುದ್ದವೀರನಂತಹ ಲುಕ್‌ ತಮ್ಮದಾಗಿಸಿಕೊಂಡಿದ್ದಾರೆ.

Share this Story:

Follow Webdunia kannada