Article Bollywood Gossips %e0%b2%ae%e0%b2%a4%e0%b3%8d%e0%b2%a4%e0%b3%86 %e0%b2%ad%e0%b3%82%e0%b2%a4%e0%b3%8d%e0%b2%a8%e0%b2%be%e0%b2%a5%e0%b3%8d %e0%b2%86%e0%b2%97%e0%b2%bf %e0%b2%85%e0%b2%ae%e0%b2%bf%e0%b2%a4%e0%b2%be%e0%b2%ad%e0%b3%8d 113061300005_1.htm

Daily Horoscope

Select Your Language

Notifications

webdunia
webdunia
webdunia
webdunia

ಮತ್ತೆ ಭೂತ್ನಾಥ್ ಆಗಿ ಅಮಿತಾಭ್

ಅಮಿತಾಭ್
PR
PR
ಭೂತ್ನಾಥ್-1 ಚಿತ್ರದಲ್ಲಿ ಕೈಲಾಸ್ನಾಥ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಹಿರಿಯ ನಟ ಅಮಿತಾಭ್ ಬಚ್ಚನ್ ಭೂತ್ನಾಥ್-2ದಲ್ಲೂ ಬಣ್ಣ ಹಚ್ಚಲಿದ್ದಾರೆ.

ಚಿತ್ರ ನಿರ್ಮಾಪಕ ರವಿಚೋಪ್ರಾ ಪುತ್ರ ಅಭಯ್ ಚೋಪ್ರಾ ತಮ್ಮ ಅಜ್ಜ ಬಿ.ಆರ್.ಚೋಪ್ರಾ ಕಟ್ಟಿ ಬೆಳೆಸಿದ್ದ ಹಾಗೂ ಈಗ ಅವನತಿಯ ಹಾದಿಯಲ್ಲಿರುವ ಫ್ಲ್ಯಾಗಿಂಗ್ ಫಾಚರ್ನ್ ಬ್ಯಾನರ್ಗೆ ಮತ್ತೆ ಜೀವ ತುಂಬಲು ಉದ್ದೇಶಿಸಿದ್ದಾರೆ. ಅದೇ ಕಾರಣಕ್ಕೆ 2008ರಲ್ಲಿ ಬಿಡುಗಡೆಯಾಗಿದ್ದ ಭೂತ್ನಾಥ್ ಚಿತ್ರದ ಎರಡನೇ ಭಾಗವನ್ನು ತಯಾರಿಸುತ್ತಿದ್ದಾರೆ.

ಚಿತ್ರದಲ್ಲಿ ಅಮಿತಾಭ್ ನಟಿಸಲಿರುವುದನ್ನು ಟಿ ಸೀರಿಸ್ ಮುಖ್ಯಸ್ಥ ಭೂಷಣ್ ಕುಮಾರ್ ದೃಢಪಡಿಸಿದ್ದಾರೆ. ಪ್ರತಿಷ್ಠಿತ ಬಿಆರ್ ಫಿಲ್ಮ್ಸ್ ಪುನಶ್ಚೇತನಕ್ಕೆ ನೆರವು ನೀಡಬೇಕು ಎಂದುಕೊಂಡಿದ್ದ ಆಸೆ ಈಗ ಕೈಗೂಡಿದೆ. ಭೂತ್ನಾಥ್ 2 ಚಿತ್ರದಲ್ಲಿ ಅಮಿತಾಭ್ ಪಾತ್ರ ಪುನರಾವರ್ತನೆಯಾಗುವುದರ ಬಗ್ಗೆ ಬಿಗ್ಬಿ ಅವರನ್ನುಸಂಪರ್ಕಿಸಿದೆವು. ಮಕ್ಕಳನ್ನು ರಂಜಿಸುವ ಈ ಚಿತ್ರದಲ್ಲಿ ನಟಿಸಲು ಅವರು ಮನಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲೂ ಮಕ್ಕಳ ಹಾಗೂ ಬಿಗ್ಬಿಯ ಗಟ್ಟಿ ಸಂಬಂಧದ ಬಗ್ಗೆ ಚಿತ್ರ ಫೋಕಸ್ ಮಾಡಲಿದೆ ಎಂದು ಭೂಷಣ್ ತಿಳಿಸಿದ್ದಾರೆ.

Share this Story:

Follow Webdunia kannada