Article Bollywood Gossips %e0%b2%ae%e0%b2%a4%e0%b3%8d%e0%b2%a4%e0%b3%86 %e0%b2%9c%e0%b3%8a%e0%b2%a4%e0%b3%86%e0%b2%af%e0%b2%be%e0%b2%a6 %e0%b2%b6%e0%b2%be%e0%b2%b0%e0%b3%81%e0%b2%96%e0%b3%8d %e0%b2%95%e0%b2%be%e0%b2%9c%e0%b3%8b%e0%b2%b2%e0%b3%8d %e0%b2%9c%e0%b3%8b%e0%b2%a1%e0%b2%bf 108092300047_1.htm

Daily Horoscope

Select Your Language

Notifications

webdunia
webdunia
webdunia
webdunia

ಮತ್ತೆ ಜೊತೆಯಾದ ಶಾರುಖ್-ಕಾಜೋಲ್ ಜೋಡಿ

ಶಾರುಖ್ ಖಾನ್
IFM
ಶಾರುಖ್ ಖಾನ್ ಮತ್ತು ಕಾಜೋಲ್, ಅವರಿಬ್ಬರದು ವೀಕ್ಷಕರು ಮೆಚ್ಚುವ ಜೋಡಿ. 'ಬಾಜಿಗರ್', 'ಕುಚ್‌ ಕುಚ್ ಹೋತಾ ಹೈ'ನಿಂದ ಹಿಡಿದು ಇತ್ತೀಚೆಗೆ ಅವರು ಜೊತೆಯಾಗಿ ನಟಿಸಿದ ಕರಣ್ ಜೋಹರ್‌ರ 'ಕಭಿ ಖುಷಿ ಕಭಿ ಗಮ್‌'ವರೆಗೆ ಅವರದು ಹಿಟ್ ಜೋಡಿ.

ಆದರೆ ಅವರಿಬ್ಬರನ್ನು ಜೊತೆಯಾಗಿಸಿ ಮ್ಯಾಜಿಕ್ ಸೃಷ್ಟಿಸಿದವರು 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಚಿತ್ರದ ಮೂಲಕ ಆದಿತ್ಯ ಚೋಪ್ರಾ. ಅವರಿಬ್ಬರೂ 'ಬಾಜಿಗರ್' ಚಿತ್ರದಲ್ಲಿ ಈ ಮೊದಲು ನಟಿಸಿದ್ದರು, ಆದರೆ ಶಾರುಖ್-ಕಾಜೋಲ್ ರೊಮ್ಯಾಂಟಿಕ್ ಜೋಡಿಯೆನಿಸಿ ಪ್ರೇಕ್ಷಕರಿಗೆ ಮತ್ತೇರಿಸಿದ್ದು 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ'ದ ಮೂಲಕ. ಆದ್ದರಿಂದಲೇ ಆದಿತ್ಯ ತಮ್ಮ ಮುಂದಿನ 'ರಬ್‌ನೆ ಬನಾ ದಿ ಜೋಡಿ' ಚಿತ್ರದಲ್ಲಿ ಮತ್ತೆ ಈ ಜೋಡಿಯನ್ನು ಜೊತೆಯಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಚಿತ್ರದಲ್ಲಿ ಕಾಜೋಲ್ ಕ್ಷಣಿಕ ಪ್ರದರ್ಶನವನ್ನಷ್ಟೇ ನೀಡಲಿದ್ದಾರೆ. ಶಾರುಖ್ ಮತ್ತು ನಾಯಕಿ ಅನುಕ್ಷಾ ಶರ್ಮ ಅವರ ಮೇಲೆ ಚಿತ್ರಿತವಾಗಿರುವ ಹಾಡಿನಲ್ಲಿ ಕಾಜೋಲ್ ಒಂದು ಬಾರಿಯಷ್ಟೇ ಕಾಣಿಸಿಕೊಳ್ಳುತ್ತಾರೆ.

ಮುಂದಿನ ವರ್ಷ ಕರಣ್ ಜೋಹರ್‌ರ 'ಮೈ ನೇಮ್ ಈಸ್ ಖಾನ್' ಚಿತ್ರದಲ್ಲಿ ಶಾರುಖ್-ಕಾಜೋಲ್, ನಾಯಕ ಮತ್ತು ನಾಯಕಿಯರಾಗಿ ನಟಿಸಲಿದ್ದಾರೆ. ಅದುವರೆಗೆ ಎಸ್ಆರ್‌ಕೆ - ಕಾಜೋಲ್ ಅಭಿಮಾನಿಗಳು ಆದಿ ಮಾಡಿದ ಜೋಡಿಯನ್ನಷ್ಟೇ ನೋಡಿ ಆನಂದಿಸಬೇಕು.

Share this Story:

Follow Webdunia kannada