Article Bollywood Gossips %e0%b2%ae%e0%b2%a4%e0%b3%8d%e0%b2%a4%e0%b3%86 %e0%b2%92%e0%b2%82%e0%b2%a6%e0%b2%be%e0%b2%97%e0%b2%b2%e0%b2%bf%e0%b2%b0%e0%b3%81%e0%b2%b5 %e0%b2%85%e0%b2%ae%e0%b2%bf%e0%b2%a4%e0%b2%be%e0%b2%ad%e0%b3%8d %e0%b2%b0%e0%b3%87%e0%b2%96%e0%b2%be %e0%b2%9c%e0%b3%8b%e0%b2%a1%e0%b2%bf 113090300008_1.htm

Daily Horoscope

Select Your Language

Notifications

webdunia
webdunia
webdunia
webdunia

ಮತ್ತೆ ಒಂದಾಗಲಿರುವ ಅಮಿತಾಭ್ ರೇಖಾ ಜೋಡಿ?

ಅಮಿತಾಭ್ ಬಚ್ಚನ್
PR
ಅಮಿತಾಭ್ ಬಚ್ಚನ್ ಹಾಗೂ ರೇಖಾ ಜೋಡಿ ಎಂದರೆ ಅಂದಿಗೂ ಇಂದಿಗೂ ಎಂದೆಂದಿಗೂ ಹಾಟ್ ಹಾಟ್ ಗಾಸಿಪ್ ಇರುವುದು ಸಹಜವೇ ಅಲ್ಲವೇ. ತೆರೆಯ ಮೇಲಿನ ಹಾಟ್ ಕೆಮಿಸ್ಟ್ರಿಗೆ ರಿಯಲ್ ಲೈಫ್ನಲ್ಲೂ ಬಾಲಿವುಡ್ನ ದಿವಾಗೆ ಫಿದಾ ಆಗಿದ್ದರು ಅಮಿತಾಭ್. ಆದರೆ ಯಶ್ಚೋಪ್ರಾ ನಿದರ್ೇಶನದ ಸಿಲ್ಸಿಲಾ ಚಿತ್ರದ ಬಳಿಕ ಜಯಾಮಾಧುರಿ ಅವರನ್ನೇ ತಮ್ಮ ಜೀವನದ ಸಂಗಾತಿಯಾಗಿ ಆಯ್ದುಕೊಂಡರು. ತಾರೆಯರ ತ್ರಿಕೋನ ಪ್ರೇಮ ಕಥೆಯನ್ನಾಧರಿಸಿದ ಚಿತ್ರ ಸಿಲ್ಸಿಲಾ. ಅದೇ ಅವರಿಬ್ಬರ ಅಭಿನಯದ ಕೊನೆಯ ಚಿತ್ರವೂ ಆಗಿತ್ತು. ನಂತರದ ದಿನಗಳಲ್ಲಿ ಒಂದೇ ಕಾರ್ಯಕ್ರಮದಲ್ಲಿದ್ದರೂ ಮುಖಕ್ಕೆ ಮುಖ ಕೊಟ್ಟು ಮಾತನಾಡದಷ್ಟು ದೂರವಾದರು.

ಈಗ ಮತ್ತೆ ಅದೇ ಜೋಡಿ ರೊಮ್ಯಾನ್ಸ್ ಮಾಡಲು ತೆರೆಯ ಮೇಲೆ ಕಾಣಿಸಿಕೊಳ್ಳಲಿದೆಯಂತೆ. ವೆಲ್ಕಮ್ ಬ್ಯಾಕ್ ಚಿತ್ರದಲ್ಲಿ ಅವರಿಬ್ಬರೂ ನಟಿಸುವ ಮೂಲಕ ಮತ್ತೊಮ್ಮೆ ಈ ಅದ್ಭುತ ಜೋಡಿ ಒಂದಾಗಲಿದೆ ಎನ್ನುತ್ತಿವೆ ಬಾಲಿವುಡ್ ಮೂಲಗಳು. ಅಮಿತಾಭ್ ಹಾಗೂ ರೇಖಾ ಅಭಿನಯಿಸಿದ ದೋ ಅಂಜಾನೆ, ಮುಖದ್ದರ್ ಕಾ ಸಿಖಂದರ್, ಮಿಸ್ಟರ್ ನಟವರ್ಲಾಲ್ ಹಾಗೂ ಸುಹಾಗ್ ಚಿತ್ರಗಳು ಬಾಕ್ಸಾಫೀಸನ್ನು ಕೊಳ್ಳೆಹೊಡೆಯುವುದರಲ್ಲಿ ಯಶಸ್ವಿಯಾಗಿದ್ದವು. ವೆಲ್ಕಮ್ ಬ್ಯಾಕ್ ಚಿತ್ರದಲ್ಲಿ ನಟಿಸುವಂತೆ ಬಿಗ್ಬಿ ಜೊತೆ ನಿರ್ಮಾಪಕ ಫಿರೋಜ್ ನಾಡಿಯಾವಾಲ ನಿರ್ದೇಶಕ ಬಝ್ಮಿ ಬಿಗ್ ಬಿ ಹಾಗೂ ರೇಖಾ ಜೊತೆ ಮಾತುಕತೆ ನಡೆಸಿದ್ದಾರೆ. ಅವರಿಂದ ಯಾವ ಪ್ರತಿಕ್ರಿಯೆ ಸಿಕ್ಕಿದೆ ಎಂಬುದಿನ್ನೂ ತಿಳಿದುಬಂದಿಲ್ಲ. ಬಿಗ್ಬಿ ಡಾನ್ ಹಾಗೂ ರೇಖಾ ಶ್ರೀಮಂತ ಫ್ಯಾಶನಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾನ್ ಅಬ್ರಾಹಂ ಹಾಗೂ ಶ್ರುತಿ ಹಾಸನ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. ಮುಂದಿನ ತಿಂಗಳು ಚಿತ್ರ ಸೆಟ್ಟೇರಲಿದೆ.

Share this Story:

Follow Webdunia kannada