Article Bollywood Gossips %e0%b2%ae%e0%b2%a4%e0%b3%8d%e0%b2%a4%e0%b3%86 %e0%b2%85%e0%b2%a6%e0%b3%83%e0%b2%b7%e0%b3%8d%e0%b2%9f %e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86%e0%b2%97%e0%b3%86 %e0%b2%ae%e0%b3%81%e0%b2%82%e0%b2%a6%e0%b2%be%e0%b2%a6 %e0%b2%85%e0%b2%ae%e0%b2%bf%e0%b2%b7%e0%b2%be 113073000011_1.htm

Daily Horoscope

Select Your Language

Notifications

webdunia
webdunia
webdunia
webdunia

ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾದ ಅಮಿಷಾ

ಅಮಿಷಾ
PTI
ಕಹೋ ನ ಪ್ಯಾರ್ ಹೆ ಖ್ಯಾತಿಯ ಹುಡುಗಿ ಅಮಿಷಾ ಒಂದಿಷ್ಟು ಸಾಲು ಸಾಲು ಚಿತ್ರಗಳ ಹಾಡಿನಲ್ಲಿ ಕಾಣಿಸಿಕೊಂಡರು. ಆ ಬಳಿ ಒಂದಿಷ್ಟು ವರ್ಷ ನಾಪತ್ತೆಯಾಗಿದ್ದರು. ಇದೀಗ ಮತ್ತೆ ತೆರೆಯ ಮೇಲೆ ಮಿಂಚಲು ತಯಾರಿ ನಡೆಸಿದ್ದಾರೆ.

ಈ ಬಾರಿ ಅವರು ನಿರ್ಮಿಸುತ್ತಿರುವ ಚಿತ್ರ ದೇಸಿ ಮ್ಯಾಜಿಕ್. ಗೆಳೆಯ ಕುನಾಲ್ ಗುಮಾರ್ ಜತೆ ತಮ್ಮದೇ ಪ್ರೊಡಕ್ಷನ್ ಹೌಸ್ ಆರಂಭಿಸಿ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾಯಿದ್ ಖಾನ್ ಹಾಗೂ ಸಾಹಿಲ್ ಶ್ರಾಫ್ ಜತೆ ನಟಿಸಲಿದ್ದಾರೆ. ಇದು ರೊಮ್ಯಾಂಟಿಕ್ ಮತ್ತು ಕಾಮಿಡಿ ಚಿತ್ರವಾಗಿದ್ದು ಚಿತ್ರ ನಿರ್ಮಾಣದ ಹಿಂದೆ ಕುನಾಲ್ ಇದ್ದಾರೆ. ಚಿತ್ರದ ಕತೆ ಅವರ ಕೂಸು. ಈ ಚಿತ್ರದ ಮೂಲಕ ನನ್ನ ಕನಸು ನನಸಾಗುತ್ತಿದೆ. ದ್ವಿಪಾತ್ರ ಅಂದರೆ ಒಬ್ಬಳು ಆಧುನಿಕ ಹುಡುಗಿ ಹಾಗೂ ಮತ್ತೊಬ್ಬಳು ಪಂಜಾಬಿನ ಸಾಮಾನ್ಯ ಹುಡುಗಿ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದ್ದಾರೆ.

ನಟ ಸಾಹಿಲ್ ಈ ಚಿತ್ರದ ಮೂಲಕ ನಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರಂತೆ. ಈ ಚಿತ್ರದಲ್ಲಿ ಅವರು ಮೆಚ್ಯೂರ್ಡ್ ಹುಡುಗನ ಪಾತ್ರ ನಿರ್ವಹಿಸಲಿದ್ದಾರಂತೆ. ತಾನು ಅಂದುಕೊಂಡಂತೆ ಬದುಕುವ ಪಾತ್ರ ಅದು. ಜೀವನ ಹಾಗೂ ಕೆಲಸವನ್ನು ತೀವ್ರವಾಗಿ ಪ್ರೀತಿಸುವ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದಿದ್ದಾರೆ ಸಾಹಿಲ್. ಈ ಚಿತ್ರವಾದರೂ ಅವರ ಬದುಕನ್ನು ಸ್ಟಾರ್ ಪಟ್ಟಕ್ಕೆ ಏರಿಸುವುದೋ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada